ಜುಲೈ 10ರಿಂದ ಆಗಸ್ಟ್​ 9ರವರೆಗೆ ಈ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ; ಇಲ್ಲಿದೆ ಮಾಹಿತಿ

ಜುಲೈ 10ರಿಂದ ಆಗಸ್ಟ್​ 9ರವರೆಗೆ ಈ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ; ಇಲ್ಲಿದೆ ಮಾಹಿತಿ

Poornima Agali Nagaraj
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 08, 2023 | 12:44 PM

ಜುಲೈ 10ರಿಂದ ಆಗಸ್ಟ್​ 9ರವರೆಗೆ ಪ್ರತಿದಿನ ಮೆಟ್ರೋ ಸಂಚಾರದಲ್ಲಿ 2 ತಾಸು ವ್ಯತ್ಯಯವಾಗಲಿದೆಯೆಂದು BMRCL ಮಾಹಿತಿ ನೀಡಿದೆ.

ಬೆಂಗಳೂರು: ಜುಲೈ 10ರಿಂದ ಆಗಸ್ಟ್​ 9ರವರೆಗೆ ಮೆಟ್ರೋ(Metro) ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೌದು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ವಿ.ಎಸ್​​.ರಸ್ತೆ, ಕೆ.ಆರ್​​​.​​ಪುರ-ವೈಟ್​​ಫೀಲ್ಡ್​​ ಮೆಟ್ರೋ ಮಾರ್ಗದ ನಡುವೆ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಜುಲೈ 10ರಿಂದ ಆಗಸ್ಟ್ 9ರವರೆಗೆ ಪ್ರತಿದಿನ 2 ತಾಸು ಮೆಟ್ರೋ ಸಂಚಾರ ಬಂದ್​ ಆಗಲಿದೆ. ಪ್ರತಿದಿನ ಬೆಳಗ್ಗೆ 5ರಿಂದ ಬೆಳಗ್ಗೆ 7ರವರೆಗೆ ಮೆಟ್ರೋ ಸಂಚಾರ ಬಂದ್ ಆಗಲಿದ್ದು, ಉಳಿದಂತೆ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಯಥಾಸ್ಥಿತಿಯಲ್ಲಿರಲಿದೆ ಎಂದು BMRCL ಮಾಹಿತಿ ನೀಡಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ