Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ ವೇಳೆ ಸದನಕ್ಕೆ ಪ್ರವೇಶಿಸಿದ ವ್ಯಕ್ತಿ ಬಗ್ಗೆ ವಕೀಲರು ಹೇಳಿದ್ದೇನು?

ಬಜೆಟ್ ವೇಳೆ ಸದನಕ್ಕೆ ಪ್ರವೇಶಿಸಿದ ವ್ಯಕ್ತಿ ಬಗ್ಗೆ ವಕೀಲರು ಹೇಳಿದ್ದೇನು?

TV9 Web
| Updated By: ಆಯೇಷಾ ಬಾನು

Updated on: Jul 08, 2023 | 11:38 AM

ಬಜೆಟ್​​ ಮಂಡನೆ ವೇಳೆ ಭದ್ರತಾ ಲೋಪವಾಗಿದೆ. ಅಪರಿಚಿತ ವ್ಯಕ್ತಿಯೊಬ್ಬರು ಸದನದ ಒಳಗೆ ಪ್ರವೇಶಿಸಿ ಶಾಸಕರ ಸ್ಥಾನದಲ್ಲಿ ಕುಳಿತಿದ್ದರು. ಈ ಸಂಬಂಧ ಆ ವ್ಯಕ್ತಿಯಾರೆದು ವಕೀಲರು ತಿಳಿಸಿದ್ದಾರೆ.

ಚಿತ್ರದುರ್ಗ: ನಿನ್ನೆ(ಜುಲೈ 07) ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಭದ್ರತಾಲೋಪ ನಡೆದಿತ್ತು. ಈ ಸಂಬಂಧ ಸಿ.ಡಿ.ತಿಪ್ಪೇರುದ್ರಪ್ಪ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಿತ್ರದುರ್ಗ ಮೂಲದ ಆರೋಪಿ ಸಿ.ಡಿ.ತಿಪ್ಪೇರುದ್ರಪ್ಪ ಅವರು ಚಿತ್ರದುರ್ಗ ಕೋರ್ಟ್​ನಲ್ಲಿ ಸ್ಟೆನೋಗ್ರಾಫರ್ ಆಗಿದ್ದರು. 10 ವರ್ಷಗಳ ಹಿಂದೆ VRS ಪಡೆದಿದ್ದಾರೆ ಎಂದು ತಿಪ್ಪೇರುದ್ರಪ್ಪನವರ ಬಗ್ಗೆ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವು ಯಾದವ್ ಮಾಹಿತಿ ನೀಡಿದ್ದಾರೆ. ಪ್ರತಿ ಕೋರ್ಟ್ ಕಲಾಪ ವೇಳೆ ಕೆಲ ಹೊತ್ತು ಕೂತು ಹಿಂದಿರುಗುತ್ತಿದ್ದರು. ತಿಪ್ಪೇರುದ್ರಪ್ಪ ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ತಿಪ್ಪೇರುದ್ರಪ್ಪಗೆ ವಯಸ್ಸಾಗಿದೆ,‌ ಗೊಂದಲದಿಂದ ಪ್ರವೇಶಿಸಿರಬಹುದು ಎಂದು ತಿಳಿಸಿದ್ದಾರೆ.