AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?

ಬಟಾಣಿ! ಬಣ್ಣಬಣ್ಣದಾ ಬಟಾಣಿ, ಕೆಂಪು ಬಟಾಣಿ ಹಸಿರು ಬಟಾಣಿ. ಈತನಕವೂ ತಿಂದ ಇಂಥ ಬಟಾಣಿಯಿಂದಾಗಿ ಎಷ್ಟು ಕೇಜಿ ಬಣ್ಣ ನಿಮ್ಮ ಹೊಟ್ಟೆಯನ್ನು ಹೊಕ್ಕಿರಬಹುದು? ನೆಟ್ಟಿಗರಂತೂ ಮುಖ ಹುಳ್ಳಗೆ ಮಾಡಿಕೊಂಡಿದ್ಧಾರೆ. ಬಟಾಣಿ! ಬಣ್ಣಬಣ್ಣದಾ ಬಟಾಣಿ, ಕೆಂಪು ಬಟಾಣಿ ಹಸಿರು ಬಟಾಣಿ. ಈತನಕವೂ ತಿಂದ ಇಂಥ ಬಟಾಣಿಯಿಂದಾಗಿ ಎಷ್ಟು ಕೇಜಿ ಬಣ್ಣ ನಿಮ್ಮ ಹೊಟ್ಟೆಯನ್ನು ಹೊಕ್ಕಿರಬಹುದು? ನೆಟ್ಟಿಗರಂತೂ ಮುಖ ಹುಳ್ಳಗೆ ಮಾಡಿಕೊಂಡಿದ್ಧಾರೆ.

ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?
ಬಟಾಣಿಗೆ ಹಸಿರು ಬಣ್ಣ ಹಾಕುತ್ತಿರುವುದು
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ| Edited By: |

Updated on:Sep 08, 2026 | 10:41 AM

Share

Green Peas : ಕಚ್ಚಾಹಾಳೆಗಳ ಪೊಟ್ಟಣಗಳಲ್ಲಿ ಅಥವಾ ಪ್ಲಾಸ್ಟೀಕಿನ ಪುಟ್ಟ ಚೀಟಿನಲ್ಲಿರುತ್ತಿದ್ದ ಈ ಬಣ್ಣದ ಬಟಾಣಿಗಳನ್ನು ತಿಂದು ಮುಗಿಸಿ ಕೈಗೆ ಹತ್ತಿದ ಒಂದೊಂದು ಉಪ್ಪಿನ ಕಣಗಳನ್ನು ನೆಕ್ಕಿ, ಟೀಚರ್​ ಕ್ಲಾಸಿನೊಳಗೆ ಬರುವುದಕ್ಕೇ ಮೊದಲು ಸಮವಸ್ತ್ರಕ್ಕೆ ಚೆನ್ನಾಗಿ ಒರೆಸಿಕೊಂಡು ಸಂಭಾವಿತರಂತೆ ಕುಳಿತುಕೊಳ್ಳುತ್ತಿದ್ದ ಆ ದಿನಗಳು ಕಣ್ಮುಂದೆ ಬರುತ್ತಿರಬೇಕಲ್ಲ? ಶಾಲೆಯ ಬಳಿಯ ತಳ್ಳುಗಾಡಿಗಳಿಂದ ಮತ್ತು ಕಾಕಾ ಅಂಗಡಿಗಳಿಂದ ಈ ಹಸಿರು ಮತ್ತು ಕೆಂಪು ಬಟಾಣಿಗಳನ್ನು ಖರೀದಿಸಿ ತಿನ್ನುತ್ತಿದ್ದದ್ದು ಬಾಲ್ಯದ (Childhood) ಸಂಭ್ರಮಗಳಲ್ಲಿ ಒಂದು. ಆದರೆ ಈ ಬಣ್ಣದ ಬಟಾಣಿಗಳನ್ನು ಹೇಗೆ ತಯಾರಿಸುತ್ತಾರೆ ಎಂದು ಈತನಕ ಗೊತ್ತಿತ್ತೆ? ಇಲ್ಲವಾದಲ್ಲಿ ಈ ಕೆಳಗಿನ ವಿಡಿಯೋ ನೋಡಿ.

ಅಸ್ಸಾಮ್​ನ ಡಿಜಿಟಲ್​ ಕ್ರಿಯೇಟರ್​​ ಮತ್ತು ಫುಡ್​ ವ್ಲಾಗರ್​​ ಸಲೋನಿ ಬೋತ್ರಾ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಜೂ. 21ರಂದು ಹಂಚಿಕೊಂಡ ಈ ವಿಡಿಯೋ ಸುಮಾರು ಏಳು ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. 3 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಇಷ್ಟು ವರ್ಷಗಳ ಕಾಲ ತಿಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇನ್ನೂ ಕೆಲವರು ಇನ್ನ್ಯಾವತ್ತೂ ಈ ಬಣ್ಣದ ಬಟಾಣಿಯನ್ನು ತಿನ್ನುವುದಿಲ್ಲ ಎಂದು ಪ್ರಮಾಣ ಮಾಡುತ್ತಿದ್ದಾರೆ.

ಅಯ್ಯೋ ನನ್ನ ಬಾಲ್ಯದಲ್ಲಿ ಈ ಬಟಾಣಿಯಿಂದಲೇ ಹೊಟ್ಟೆತುಂಬಿಸಿಕೊಳ್ಳುತ್ತಿದ್ದೆ ಎಂದು ಒಬ್ಬರು. ಬಾಲ್ಯದಲ್ಲಿಯಷ್ಟೇ ಯಾಕೆ ದೊಡ್ಡವನಾದ ಮೇಲೂ ಎಂದು ಮತ್ತೊಬ್ಬರು. ಹಾಗಿದ್ದರೆ ನಮ್ಮೆಲ್ಲರ ಹೊಟ್ಟೆಯೊಳಗೆ ಅದೆಷ್ಟು ಕೇಜಿ ಬಣ್ಣ ಹೋಗಿರಬಹುದು ಎಂದು ಮಗದೊಬ್ಬರು. ನನ್ನ ಗ್ಯಾಸ್ಟ್ರಿಕ್​ ಮತ್ತು ಎಸಿಡಿಟಿ ಸಮಸ್ಯೆಗೆ ಈ ಬಟಾಣಿಯೂ ಕಾರಣವಾಗಿರಬಹುದೆ? ಎಂದು ಇನ್ನೂ ಒಬ್ಬರು. ಏನೇ ಆಗಲಿ ಸೀಝನ್​ ಬಂದಾಗ ತಾಜಾ ಬಟಾಣಿಗಳನ್ನು ತಿನ್ನುವುದೇ ಒಳ್ಳೆಯದು, ಇನ್ನ್ಯಾವತ್ತೂ ಪ್ಯಾಕ್ ಮಾಡಿದ ಹಸಿರು ಬಟಾಣಿಯನ್ನು ತಿನ್ನುವುದೇ ಇಲ್ಲ ಎನ್ನುತ್ತಿದ್ದಾರೆ ಸಾಕಷ್ಟು ಜನರು.

ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:17 pm, Thu, 13 July 23

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.