Viral: ಅಮೆರಿಕದ ವಕೀಲೆಗೆ ಗಂಡು ಹುಡುಕಿ ಕೊಟ್ಟವರಿಗೆ ರೂ. 4 ಲಕ್ಷ ಬಹುಮಾನ
Husband : ''ಕೋವಿಡ್ ನಂತರ ಡೇಟಿಂಗ್ ಸಂಸ್ಕೃತಿ ಬದಲಾಗಿದೆ. ಡೇಟಿಂಗ್ ಆ್ಯಪ್ಗಳಲ್ಲಿ ಸಿಗುವ ಪುರುಷರು ಡೇಟಿಂಗ್ ಅನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಾಗಿ ಮದುವೆಯಾಗಲು ನಾನು ನಿರೀಕ್ಷಿಸಿದಂಥ ಗಂಡು ಬೇಕು. ಹುಡುಕಿ ಕೊಡುವಿರಾ?''

America : ಅಮೆರಿಕದ ಲಾಸ್ ಎಂಜಲೀಸ್ನ 35 ವರ್ಷದ ಟಿಲ್ಲಿ ಕೋಲ್ಸನ್ ಕಾರ್ಪೋರೇಟ್ ಲಾಯರ್. ಈಕೆ ಈಗ ವಿಚಿತ್ರ ಘೋಷಣೆ ಮಾಡಿ ಸುದ್ದಿಯಲ್ಲಿದ್ದಾಳೆ. ಡೇಟಿಂಗ್ನಿಂದ (Dating) ಬೇಸತ್ತ ಆಕೆ ಸುಮಾರು ಐದು ವರ್ಷಗಳಿಂದ ಒಂಟಿಯಾಗಿದ್ದಾರೆ. ಹಾಗಾಗಿ ಮದುವೆಗಾಗಿ ತನಗೆ ಗಂಡು ಹುಡುಕುವ ಜವಾಬ್ದಾರಿಯನ್ನು ಸಾರ್ವಜನಿಕರ ಹೆಗಲಿಗೆ ಹೊರಿಸಿದ್ದಾಳೆ. ಯಾರು ಆಕೆಗೆ ಗಂಡು ಹುಡುಕಿ ಕೊಡುತ್ತಾರೋ ಅವರಿಗೆ ಭಾರೀ ಮೊತ್ತದ ಬಹುಮಾನವನ್ನೂ ಕೊಡುವುದಾಗಿ ಹೇಳಿದ್ದಾಳೆ. ಟಿಕ್ಟಾಕ್ನಲ್ಲಿ 1 ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಈಕೆ ವಿಡಿಯೋ ಮೂಲಕ ತನಗೆ ಮದುವೆಗೆ ಗಂಡು ಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ. ಆದರೆ ಈ ವಿಡಿಯೋ ಆಕೆಯ ಸ್ನೇಹಿತರಿಗೆ, ಕಚೇರಿ ಮುಖ್ಯಸ್ಥರಿಗಷ್ಟೇ ಕಾಣುವಂತಿದೆ. ಸದ್ಯದಲ್ಲೇ ಸಾರ್ವಜನಿಕರೂ ಈ ವಿಡಿಯೋ ನೋಡಬಹುದಾಗಿದೆ ಎಂದಿದ್ದಾಳೆ ಈಕೆ.
ನಾನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದೇನೆ. ಏಕೆಂದರೆ ಡೇಟಿಂಗ್ ಮತ್ತು ಡೇಟಿಂಗ್ ಆ್ಯಪ್ಗಳಿಂದ ನಾನು ಬೇಸತ್ತು ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಕೊವಿಡ್ನಿಂದಾಗಿ ಡೇಟಿಂಗ್ ಸಂಸ್ಕೃತಿ ವಿಚಿತ್ರ ತಿರುವುಗಳನ್ನು ಪಡೆದುಕೊಂಡಿದೆ. ಆನ್ಲೈನ್ನಲ್ಲಿ ಸಿಗುವ ವ್ಯಕ್ತಿಗಳು ನೇರಭೇಟಿಗೆ ಒಪ್ಪಲಾರರು. ಇನ್ನು ಡೇಟಿಂಗ್ ಅಪ್ಲಿಕೇಷನ್ಗಳಲ್ಲಿ ಸಿಗುವ ಪುರುಷರು ಗಂಭೀರವಾಗಿ ಡೇಟಿಂಗ್ನಲ್ಲಿ ತೊಡಗಿಕೊಳ್ಳಲಾರರು. ಹಾಗಾಗಿ ನನ್ನ ಅಗತ್ಯಗಳನ್ನು ಪೂರೈಸುವ ಮತ್ತು ನಿಜವಾಗಲೂ ನನಗೆ ಗಂಡನಾಗಬಯಸುವ ವ್ಯಕ್ತಿಯ ಹುಡುಕಾಟದಲ್ಲಿ ನಾನಿದ್ದೇನೆ ಎಂದಿದ್ದಾರೆ ಕೋಲ್ಸನ್.
ಇದನ್ನೂ ಒದಿ : Viral: ಮೌಂಟೇನ್ ಡ್ಯೂ ಜಿಲೇಬಿ! ಇದು ಯಾವ ಊರಲ್ಲಿ ಸಿಗುತ್ತದೆ ಗೊತ್ತೇ?
ತನ್ನನ್ನು ಮದುವೆಯಾಗಲು ಬಯಸುವ ಗಂಡಸರು 27ರಿಂದ 40 ವರ್ಷ, 5.11 ಅಡಿ ಎತ್ತರ ಮತ್ತು ಬ್ರಿಟಿಷ್ ಶೈಲಿಯ ಹಾಸ್ಯಪ್ರಜ್ಞೆಯನ್ನು ಉಳ್ಳವರಾಗಿರಬೇಕು. ಪ್ರಾಣಿ, ಮಕ್ಕಳು ಮತ್ತು ಕ್ರೀಡೆಯನ್ನು ಪ್ರೀತಿಸುವ ವ್ಯಕ್ತಿಯಾಗಿರಬೇಕು. ಅಲ್ಲದೆ ಲಾಂಗ್ ಡಿಸ್ಟನ್ಸ್ ರಿಲೇಷನ್ಶಿಪ್ನಲ್ಲಿ ಇರಲೂ ನನಗೇನು ಅಭ್ಯಂತರವಿಲ್ಲ. ನಾನು ಸುಮಾರು 5.10 ಅಡಿ ಇದ್ದೇನೆ. ಹಾಗಾಗಿ ಗಂಡನಾಗುವವನೂ ನನಗಿಂತ ಸ್ವಲ್ಪಾದರೂ ಎತ್ತರವಿರಬೇಕೆಂದು ಬಯಸುತ್ತಿದ್ದೇನೆ. ಏಕೆಂದರೆ ಈವರೆಗೆ ಡೇಟ್ ಮಾಡಿದ ಗಂಡಸರು ನನ್ನೊಂದಿಗಿದ್ದಾಗ ತಮ್ಮ ಎತ್ತರದ ಬಗ್ಗೆ ಮುಜುಗರಪಟ್ಟುಕೊಳ್ಳುತ್ತಿದ್ದರು. ಅವರಿಗೆ ಹೀಲ್ಸ್ ಧರಿಸಬೇಡಿ ಎಂದು ಹೇಳಿದರೂ ಅವರು ಕೇಳುತ್ತಿರಲಿಲ್ಲ. ಹಾಗಾಗಿ ನನಗಿಂತಲೂ ಎತ್ತರವಿರುವ ವ್ಯಕ್ತಿಯನ್ನು ನಿರೀಕ್ಷಿಸುತ್ತೇನೆ ಎಂದಿದ್ದಾರೆ ಈಕೆ.
ಇದನ್ನೂ ಓದಿ : Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?
ಇನ್ನು ರಾಜಕೀಯ ದೃಷ್ಟಿಕೋನ, ಧಾರ್ಮಿಕ ನಂಬಿಕೆ ಮತ್ತು ಜನಾಂಗೀಯತೆ ಇವೆಲ್ಲವೂ ನನಗೆ ದೊಡ್ಡ ಸಮಸ್ಯೆಗಳೇ ಅಲ್ಲ. ಆದರೆ ಮದುವೆಯಾಗುವ ವ್ಯಕ್ತಿ ಡ್ರಗ್ಸ್ ತೆಗೆದುಕೊಳ್ಳಬಾರದು. ಇನ್ನು ನಾನು ಮ್ಯಾರೇಜ್ ಸರ್ಟಿಫಿಕೇಟ್ಗೆ ಸಹಿ ಹಾಕಿದ ತಕ್ಷಣವೇ ನನಗೆ ಗಂಡು ಹುಡುಕಿ ಕೊಟ್ಟವರು ಖಂಡಿತ ರೂ. 4 ಲಕ್ಷ ಬಹುಮಾನವನ್ನು ಪಡೆಯುತ್ತಾರೆ ಎಂದಿದ್ದಾರೆ ಕೋಲ್ಸನ್.
ನೀವೇನಾದರೂ ಹುಡುಕಿ ಕೊಡುತ್ತೀರೋ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 7:00 pm, Thu, 13 July 23