AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪಾಕಿಸ್ತಾನದಲ್ಲಿ ಶಾರುಖ್​, ಸೆಲೆನಾ, ವಿರಾಟ್​, ದೀಪಿಕಾ, ಮೆಸ್ಸಿ, ಕಿಮ್?!

Pakistan : ಈ ಪ್ರಸಿದ್ಧ ವ್ಯಕ್ತಿಗಳನ್ನು ಸಾಂಪ್ರದಾಯಿಕ ಉಡುಪುಗಳಿಂದ ಅಲಂಕರಿಸಿ ಪಾಕಿಸ್ತಾನದ ಬ್ಯಾಕ್​ಡ್ರಾಪ್​​ನಲ್ಲಿ ನಿಲ್ಲಿಸಿದ್ದಾರೆ ಎಐ ಕಲಾವಿದರೊಬ್ಬರು. ನಿಮ್ಮ ನೆಚ್ಚಿನ ಕ್ರೀಡಾಪಟುಗಳು, ಗಾಯಕರು, ನಟ ನಟಿಯರು ಇಲ್ಲಿರಬಹುದೆ?

Viral: ಪಾಕಿಸ್ತಾನದಲ್ಲಿ ಶಾರುಖ್​, ಸೆಲೆನಾ, ವಿರಾಟ್​, ದೀಪಿಕಾ, ಮೆಸ್ಸಿ, ಕಿಮ್?!
ಎಐ ಕಲಾವಿದ ಸಬೂರ್ ಅಕ್ರಂ ಕಣ್ಣಲ್ಲಿ
ಶ್ರೀದೇವಿ ಕಳಸದ
|

Updated on:Jul 13, 2023 | 2:26 PM

Share

Artificial Intelligence : ದಿನೇದಿನೇ ಎಐ ತಂತ್ರಜ್ಞಾನ ದೈತ್ಯನಂತೆ ಹೆಜ್ಜೆ ಹಾಕುತ್ತಿದೆ. ಕಲಾವಿದರು, ತಂತ್ರಜ್ಞರು ಚುರುಕು ಪಡೆದುಕೊಳ್ಳುತ್ತಿದ್ದಾರೆ. ಒಡಿಶಾದ ಮೊದಲ ಎಐ ಆ್ಯಂಕರ್ (AI Anchor)​ ಲಿಸಾಳನ್ನು ನೋಡಿ ಇನ್ನು ಮುಂದೆ ಡಿಜಿಟಲ್ ಮತ್ತು ಸಿನೆಮಾ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆಗಳಾಗಬಹುದು ಎನ್ನುವುದು ಈಗಾಗಲೇ ನಿಮ್ಮ ಊಹೆಗೆ ನಿಲುಕಿರುತ್ತದೆ. ಇದೀಗ ಎಐ ಕಲಾವಿದ ಸಬೂರ್​ ಅಕ್ರಂ ಕಲಾವಿದರು ಸಿನೆಮಾ ತಾರೆಯರನ್ನು, ಕ್ರೀಡಾಪಟುಗಳನ್ನು, ಗಾಯಕರನ್ನು ಮತ್ತು ವಿಶ್ವಮಟ್ಟದ ಪ್ರಸಿದ್ಧ ವ್ಯಕ್ತಿಗಳನ್ನು ಫೋಟೋಶಾಪ್​, ಪ್ರೊಕ್ರಿಯೇಟ್​ ಮತ್ತು ಮಿಡ್​ ಜರ್ನಿ (Mid Journey)  ಮೂಲಕ ಸೃಷ್ಟಿಸಿದ್ಧಾರೆ.

ಈ ಕೆಳಗಿನ ಪೋಸ್ಟ್​ನಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಬಾಬರ್​ ಆಝಮ್​, ಅತೀಫ್​ ಅಸ್ಲಂ, ಮಾಹೀರಾ ಖಾನ್ ಮತ್ತು ವಿರಾಟ್​ ಕೊಹ್ಲಿ ಅವರನ್ನು ಕಾಣಬಹುದಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Saboor Akram (@boorayy__)

ಈ ಕೆಳಗಿನ ಪೋಸ್ಟ್​ನಲ್ಲಿ ಅಮೆರಿಕನ್ ವೆಬ್​ ಸೀರೀಸ್​ ಮತ್ತು ಹಾಲಿವುಡ್​ ನಟನಟಿಯರಾದ ಕಿಮ್​ ಕರ್ದೇಶಿಯನ್,  ಟಿಮೊಥಿ ಚಾಲಮೆಟ್, ಕೈಲಿ ಜೆನ್ನರ್, ಹೆನ್ರಿ ಕ್ಯಾವಿಲ್, ಝೆಂಡಯಾ ಮತ್ತು ಎರಿಯಾನಾ ಗ್ರಾಂಡೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಕಂಗೊಳಿಸಿದ್ದಾರೆ.

View this post on Instagram

A post shared by Saboor Akram (@boorayy__)

ಈ ಕೆಳಗಿನ ಪೋಸ್ಟ್​ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ಲಿಯೋನೆಲ್ ಮೆಸ್ಸಿ, ಲೆಬ್ರಾನ್ ಜೇಮ್ಸ್, ಕ್ರಿಸ್ಟಿಯಾನೋ ರೊನಾಲ್ಡೊ, ಜಾನ್ ಸೆನಾ, ರೊಂಡಾ ರೋಝಿ, ರೋಜರ್ ಫೆಡರರ್ ಮತ್ತು ಲೆವಿಸ್ ಹ್ಯಾಮಿಲ್ಟನ್ ಅವರನ್ನು ದೇಸಿ ಉಡುಗೆಯಲ್ಲಿ ಸೃಷ್ಟಿಸಲಾಗಿದೆ.

View this post on Instagram

A post shared by Saboor Akram (@boorayy__)

ಈ ಕೆಳಗಿನ ಪೋಸ್ಟ್​ನಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಗಾಯಕರಿದ್ದಾರೆ. ಲಾನಾ ಡೆಲ್​ ರೇ, ಬಿಲ್ಲಿ ಐಲಿಶ್, ಎಮಿನೆಮ್, ಝ್ಯಾನ್​ ಮಲಿಕ್ ಇವರುಗಳನ್ನೆಲ್ಲ ಪಾಕಿಸ್ತಾನದ ಬೀದಿಗಳ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ.

View this post on Instagram

A post shared by Saboor Akram (@boorayy__)

ಈ ಕೆಳಗಿನ ಪೋಸ್ಟ್​ನಲ್ಲಿಯೂ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದ ಗಾಯಕರಿದ್ದಾರೆ. ಟೇಲರ್ ಸ್ವಿಫ್ಟ್, ಹ್ಯಾರಿ ಸ್ಟೈಲ್ಸ್, ಕಾನ್ಯೆ ವೆಸ್ಟ್, ಜಸ್ಟಿನ್ ಬೈಬರ್​, ರಿಹಾನ್ನಾ, ಎಡ್ ಶೀರಾನ್ ಮತ್ತು ಸೆಲೆನಾ ಗೊಮೇಝ್.

View this post on Instagram

A post shared by Saboor Akram (@boorayy__)

ಈ ಕಲಾವಿದರ ಕಲ್ಪನೆಯನ್ನು ನೆಟ್ಟಿಗರು ಬಹಳಷ್ಟು ಕೊಂಡಾಡುತ್ತಿದ್ದಾರೆ. ಆಯಾ ಸೆಲೆಬ್ರಿಟಿಗಳ ಅಭಿಮಾನಿಗಳು ಅವರವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.

ಈ ಎಐ ಚಿತ್ರಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:25 pm, Thu, 13 July 23

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!