Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ!

Land on the Moon: ಮಹಾನಗರಗಳಲ್ಲಂತೂ ಸಾಮಾನ್ಯರಿಗೆ ಸ್ವಂತಕ್ಕೆ ಜಾಗ ಎನ್ನುವುದು ಕೈಗೆಟುಕದಂತಾಗಿರುವ ಸಂದರ್ಭದಲ್ಲಿ ಚಂದ್ರನ ನೆಲದ ಮೇಲೆ ಹಣ ಹೂಡಿಕೆ ಮಾಡುವುದು ಹೆಚ್ಚು ಸುಲಭ ಹಾಗೂ ಲಾಭದಾಯಕವೇನೋ!

Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ!
ಚಂದ್ರನ ಮೇಲೆ ಜಾಗ ತೆಗೆದುಕೊಂಡ ಸುಷಾಂತ ಸಿಂಗ್​ ರಜಪೂತ್ ಮತ್ತು ಶಾರುಖ್​ ಖಾನ್
Follow us
ಶ್ರೀದೇವಿ ಕಳಸದ
|

Updated on:Jul 14, 2023 | 3:34 PM

Moon : ಹಳೆಯ ಸಿನೆಮಾ ಹಾಡುಗಳಲ್ಲಿ ಚಂದ್ರನ ತುಂಡೊಂದನ್ನೋ ಅಥವಾ ಇಡಿಯ ಚಂದ್ರನನ್ನೋ ತಂದು ಪ್ರೇಯಸಿಯ ಕಾಲಡಿಗೆ ಹಾಕುತ್ತೇನೆ ಎಂಬರ್ಥ ಕೊಡುವ ಸಾಲುಗಳು ಸಾಮಾನ್ಯವಾಗಿದ್ದುವಲ್ಲವೇ? ಆದರೆ ಇದು  ಆಧುನಿಕ ಯುಗ. ಆ ರೀತಿ ಕಲ್ಪಿತ ಸಾಲುಗಳನ್ನು ಹಾಡುತ್ತ ಬರೀ ಬಡಾಯಿ ಕೊಚ್ಚಿಕೊಂಡು ಓಡಾಡುವ ಅಗತ್ಯವಿಲ್ಲ. ಆಡಿದ್ದನ್ನು ಮಾಡಿ ತೋರಿಸಬಹುದು. ಚಂದ್ರನ ತುಂಡಿನ ವಿಷಯದಲ್ಲೂ ಇದು ಸುಲಭಸಾಧ್ಯ. ಕೈಲೊಂದಿಷ್ಟು ಕಾಸಿದ್ದರೆ ಇದೀಗ ”ದಿ ಲೂನಾರ್ ರಿಜಿಸ್ಟ್ರಿ” (The Lunar Registry) ಎಂಬ ವೆಬ್‌ಸೈಟ್ ಮೂಲಕ ನೀವು ಚಂದ್ರನ ಮೇಲೆ ಜಾಗ ಖರೀದಿಸಬಹುದು.

ಇದನ್ನೂ ಓದಿ : Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?

ಚಂದ್ರ ಮೇಲಿರುವ “ಶಾಂತ ಸಮುದ್ರ”, “ಸ್ವಪ್ನ ಸರೋವರ” ಅಥವಾ ಚಂದಿರನ ಮಧ್ಯದಲ್ಲಿ, ಹೀಗೆ ನಿಮಗೆ ಬೇಕಾದ ಪ್ರದೇಶದಲ್ಲಿ ಜಾಗ ಖರೀದಿಸಬಹುದು. ನಮ್ಮ ದೊಡ್ಡ ನಗರಗಳಲ್ಲಂತೂ ರಿಯಲ್ ಎಸ್ಟೇಟ್ ದರ ಏರಿ ಸಾಮಾನ್ಯರಿಗೆ ಸ್ವಂತಕ್ಕೆ ಜಾಗ ಎನ್ನುವುದು ಕೈಗೆಟುಕದಂತಾಗಿರುವ ಸಂದರ್ಭದಲ್ಲಿ ಚಂದ್ರನ ನೆಲದ ಮೇಲೆ ಹಣ ಹೂಡಿಕೆ ಮಾಡುವುದು ಹೆಚ್ಚು ಸುಲಭ ಹಾಗೂ ಲಾಭದಾಯಕವೇನೋ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಬೆಳೆ ತಪಾಸಣೆಗೆ ಬಂದಿದ್ದ ಹುಲಿ; ಸದ್ಯ ಉತ್ತರಪ್ರದೇಶ, ಮುಂದೆ?

ಈಗಾಗಲೇ ಜನಪ್ರಿಯ ಬಾಲಿವುಡ್ ತಾರೆಗಳು ಮತ್ತು ಇತರ ಸೆಲೆಬ್ರಿಟಿಗಳು ಚಂದ್ರನಲ್ಲಿ ಜಾಗ ಖರೀದಿಸಿದ್ದಾರಂತೆ. ಕಳೆದ ವರ್ಷ ತೀರಿಕೊಂಡ ಸುಶಾಂತ್ ಸಿಂಗ್ ರಾಜಪೂತ್ “ಮಸ್ಕೊವಿ ಸಮುದ್ರದ” ಪ್ರದೇಶದಲ್ಲಿ ಜಾಗ ಖರೀದಿಸಿದ್ದರಂತೆ. ಶಾರುಖ್​ ಖಾನ್ ಅವರಿಗೆ ಅವರ 52ನೇ ಹುಟ್ಟುಹಬ್ಬಕ್ಕೆ ಆಸ್ಟ್ರೇಲಿಯಾದ ಅಭಿಮಾನಿಯೊಬ್ಬರು ಚಂದ್ರನ ತುಂಡೊಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

ಇದನ್ನೂ ಓದಿ : Viral: ಸ್ಕ್ಯಾಂಡಿನೇವಿಯಾದಲ್ಲಿ 6000 ವರ್ಷಗಳ ಹಿಂದಿನ ಚ್ಯೂಯಿಂಗ್​ ಗಮ್ ಪತ್ತೆ

ನೀವೂ ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ 3೦೦೦-4೦೦೦ ರೂಪಾಯಿಯಷ್ಟೇ! ಮತ್ತೇಕೆ ತಡ? ಈಗಲೇ lunarregistry.com ವೆಬ್‌ಸೈಟ್‌ಗೆ ಹೋಗಿ ನಿಮಗೆ ಇಷ್ಟವಾದ ಪ್ರದೇಶವನ್ನು ಆಯ್ದುಕೊಂಡು ಮನಬಂದಷ್ಟು ಜಾಗ ಖರೀದಿಸಿ. ಚಂದ್ರನ ಮೇಲ್ಮೈಯ ಕುಳಿಗೆ ಹೆಸರಿಡುವ ಆಯ್ಕೆಯೂ ಅಲ್ಲಿದೆ.

ನಿರ್ಧಾರ ತೆಗೆದುಕೊಳ್ಳುವ ಮನ್ನ ಸಾವಿರಸಲ ಯೋಚಿಸಿ!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:52 pm, Fri, 14 July 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್