Viral Video: ಬೆಳೆ ತಪಾಸಣೆಗೆ ಬಂದಿದ್ದ ಹುಲಿ; ಸದ್ಯ ಉತ್ತರಪ್ರದೇಶ, ಮುಂದೆ?

Tiger : ಉತ್ತರ ಪ್ರದೇಶದ ಪಿಲಿಭಿತ್​ ಹೊಲದಲ್ಲಿ ಈ ಹುಲಿ ತಿರುಗಾಡುತ್ತಿದೆ. ಅನತಿ ದೂರದಲ್ಲಿ ರೈತ ಹೊಲ ಉಳುತ್ತಿದ್ದಾನೆ. ಪಕ್ಕದ ಹೊಲದ ರೈತ ಈ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಹೇಗಿದೆ ನೋಡಿ ಈ ದೃಶ್ಯ...

Viral Video: ಬೆಳೆ ತಪಾಸಣೆಗೆ ಬಂದಿದ್ದ ಹುಲಿ; ಸದ್ಯ ಉತ್ತರಪ್ರದೇಶ, ಮುಂದೆ?
ಉತ್ತರ ಪ್ರದೇಶದ ಪಿಲಿಭಿತ್​ನ ಹೊಲದಲ್ಲಿ ಕಾಣಿಸಿಕೊಂಡ ಹುಲಿ
Follow us
ಶ್ರೀದೇವಿ ಕಳಸದ
|

Updated on: Jul 14, 2023 | 2:01 PM

Uttar Pradesh : ಭಾರೀ ಮಳೆಯಿಂದ ಹಳ್ಳಿಗಳು ಮುಳುಗೇಳುತ್ತಿವೆ, ಕೆಲವು ತೇಲುತ್ತಿವೆ. ಪಾಪ ರೈತ ಹೇಗಿದ್ದಾನೋ ಏನೋ ಎಂದು ನೋಡಲು ಈ ಹುಲಿರಾಯ ಇಲ್ಲಿ ಬಂದಿದ್ದಾನೋ ಏನೋ. ಇಂಥ ಮಳೆಯಲ್ಲಿ ರೈತನ ಬೆಳೆ ಏನಾಗಿದೆ, ಅವನ ಕುಟುಂಬಕ್ಕೇನಾದರೂ ಸಹಾಯ ಬೇಕೆ? ಎಂದುಕೊಂಡು ಘನಗಂಭೀರವಾದ ತಪಾಸಣೆಯಲ್ಲಿ ತೊಡಗಿದಂತಿದೆ ಇದು. ಈ ಟ್ವೀಟ್​ನ ಪ್ರಕಾರ ಈ ಹುಲಿ ಉತ್ತರ ಪ್ರದೇಶದ ಪಿಲಿಭಿತ್​ನ (Pilibhit) ಹೊಲದಲ್ಲಿ ಸುತ್ತಾಡಿಕೊಂಡಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗದಲ್ಲಿ ಸುತ್ತಾಡುತ್ತಿದೆ.

ಈ ಹುಲಿ ತನ್ನ ಪಾಡಿಗೆ ತಾನು ಸಾಗುತ್ತಿದೆ. ಅನತಿ ದೂರದಲ್ಲಿ ಟ್ರ್ಯಾಕ್ಟರ್​ ಮೂಲಕ ಈ ಹೊಲದ ರೈತ ಉಳುತ್ತಿದ್ದಾನೆ. ಇದನ್ನು ತನ್ನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾನೆ ಪಕ್ಕದ ಹೊಲದ ರೈತ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು 1 ಲಕ್ಷಕ್ಕಿಂತಲೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. ಸುಮಾರು 500 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?

ಈ ಹೊಲ ದುಧ್ವಾ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರಬೇಕು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳಿವೆ ಎಂದಿದ್ದಾರೆ ಒಬ್ಬರು. ಪಂಕಜ್ ತ್ರಿಪಾಠಿಯ Sherdil: The Pilibhit Saga ಚಿತ್ರವನ್ನು ನೆನಪಿಸಿತು ಎಂದು ಮತ್ತೊಬ್ಬರು ಹೇಳಿದ್ದಾರೆ. ಅರೆ ಅಲ್ಲಿ ಮಕ್ಕಳೂ ಇರಬೇಕಲ್ಲ? ತುಸು ಗಾಬರಿ ಮತ್ತು ಕಾಳಜಿಯಿಂದ ಹೇಳಿದ್ದಾರೆ ಮಗದೊಬ್ಬರು. ಮಾತಾರಾಣಿಯ ವಾಹನ ಎಂದು ಭಕ್ತಿಪರವಶತೆಯಿಂದ ಪ್ರತಿಕ್ರಿಯಿಸಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?

ಇದು ಉತ್ತರ ಪ್ರದೇಶ, ಯೋಗಿಯ ಹೆದರಿಕೆ ಇದೆ ಇಲ್ಲಿ, ಹೊಡೆದಾಟ ಮತ್ತು ಕೊಲೆಗೆ ಅವಕಾಶವೇ ಇಲ್ಲ ಇಲ್ಲಿ ಎಂದಿದ್ದಾರೆ ಇನ್ನೂ ಒಬ್ಬರು. ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಒಂದೆಡೆ ಇದು ಸಹಬಾಳ್ವೆಯ ಪ್ರಯತ್ನದಂತೆ ತೋರುತ್ತಿದೆ. ಇನ್ನೊಂದೆಡೆ ಮನುಷ್ಯರು ಇವುಗಳ ವಾಸಸ್ಥಾನವನ್ನು ಆಕ್ರಮಿಸಿಕೊಂಡ ಸೂಚನೆ ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಏನೂ ಸಿಗದಿದ್ದರೆ ಹುಲಿಯೂ ಹುಲ್ಲನ್ನೂ ತಿನ್ನುತ್ತದೆ ಎಂಬ ಗಾದೆ ನೆನಪಾಗುತ್ತಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು