Viral: ಸ್ಕ್ಯಾಂಡಿನೇವಿಯಾದಲ್ಲಿ 6000 ವರ್ಷಗಳ ಹಿಂದಿನ ಚ್ಯೂಯಿಂಗ್ ಗಮ್ ಪತ್ತೆ
DNA: ಈ ಚ್ಯೂಯಿಂಗ್ಗಮ್ ಅನ್ನು ಯಾರು ಜಗಿದಿದ್ದರೋ ಅವರ ಡಿಎನ್ಎ ಅನ್ನೂ ಇದು ಸಂರಕ್ಷಿಸಿಟ್ಟುಕೊಂಡಿದೆ. ಅಷ್ಟೇ ಅಲ್ಲ, ಇದನ್ನು ಅಗಿಯುವ ಮೊದಲು ಅವರು ಏನು ಊಟ ಮಾಡಿದ್ದರು ಎನ್ನುವ ವಿಷಯವನ್ನೂ ಇದು ಬಹಿರಂಗೊಳಿಸಿದೆ.
Scandinavia : ‘ಸ್ಕ್ಯಾಂಡಿನೇವಿಯಾದಲ್ಲಿ 6,000 ವರ್ಷಗಳಷ್ಟು ಹಳೆಯದಾದ ಚ್ಯೂಯಿಂಗ್ ಗಮ್ (Chewing Gum) ಪತ್ತೆಯಾಗಿದೆ. ಇಷ್ಟೇ ಅಲ್ಲ ಇದನ್ನು ಜಗಿದವರ ಡಿಎನ್ಎ (DNA)ಯನ್ನು ಕೂಡ ಇದು ಸಂರಕ್ಷಿಸಿಟ್ಟುಕೊಂಡಿದೆ. ಈ ಚ್ಯೂಯಿಂಗ್ ಗಮ್ ಅನ್ನು ಜಗಿದವಳು ಬೇಟೆಗಾರರ ಪುಟ್ಟ ಹುಡುಗಿ. ಈಕೆ ಕಪ್ಪು ಚರ್ಮ, ಕಂದು ಕೂದಲು ಮತ್ತು ನೀಲಿ ಕಣ್ಣುಗಳನ್ನು ಹೊಂದಿದ್ದಳು. ಈ ಚ್ಯೂಯಿಂಗ್ಗಿಂತ ಮೊದಲು ಈಕೆ ಹಝಲ್ನಟ್ ಮತ್ತು ಬಾತುಕೋಳಿಯನ್ನು ತಿಂದಿದ್ದಳು’ ಎನ್ನುವ ಮಾಹಿತಿಯನ್ನು ಹೊತ್ತ ಈ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.
Read more about the find here: https://t.co/MS04BkoMBo And here’s the 2019 article in Nature Comm: https://t.co/7UuGPOZOBx
ಇದನ್ನೂ ಓದಿ— Dorsa Amir (@DorsaAmir) July 13, 2023
ಡಾ. ಡೋರ್ಸಾ ಅಮೀರ್ ಎಂಬ ಟ್ವೀಟಿಗರು ಇದನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ಈ ವಿಷಯದ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ 5,700 ವರ್ಷ ಹಳೆಯ ಚೂಯಿಂಗ್ ಗಮ್‌ನಿಂದ ಮಾನವ ಜೀನೋಮ್ ಅನ್ನು ಮರಳಿ ಪಡೆದುದರ ಕುರಿತು ಇಂಗ್ಲಿಷ್ ಲೇಖನವೊಂದರ ಲಿಂಕ್ ಅನ್ನು ಈಕೆ ಈ ಟ್ವೀಟಿನಡಿ ಲಗತ್ತಿಸಿದ್ದಾರೆ. ಅನೇಕರು ಈ ವಿಷಯದ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Viral Video: ಪಿರಿಯಡ್ ಪೇನ್ ಸಿಮ್ಯುಲೇಟರ್; ಪೊಲೀಸ್ಗೆ ಅಳವಡಿಸಿದಾಗ
ಆ ಹುಡುಗಿಯ ಚರ್ಮದ ಬಣ್ಣವನ್ನೂ ಕೂಡ ಅಷ್ಟೊಂದು ದೃಢವಾಗಿ ಪತ್ತೆ ಹಚ್ಚಿದ್ದಾರಲ್ಲ! ಎಂದು ಒಬ್ಬರು ಕೇಳಿದ್ದಾರೆ. ಬಹುಶಃ ಈಕೆ ನನ್ನ ಅಜ್ಜಿಯಾಗಿದ್ದಿರಬಹುದು ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಮ್ಮ ಪೂರ್ವಜರು ಬೇಟೆ ಪ್ರವೃತ್ತಿಯಿಂದ ಅವರು ಕೃಷಿಗೆ ಇಳಿದಾಗ ಅವರ ಆಹಾರ ಪದ್ಧತಿಯೂ ಬದಲಾಯಿತು. ಆದ್ದರಿಂದಲೇ ನಮಗೆ ವಿಟಮಿನ್ ಡಿ ಕೊರತೆ ಉಂಟಾಗಿದೆ ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹ್ ನನಗಂತೂ ಆ ಬಾಲೆ ಪುಟ್ಟ ಮತ್ಸ್ಯಕನ್ಯೆಯಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ ಮಗದೊಬ್ಬರು.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:29 am, Fri, 14 July 23