Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ

Delivery Agent : ಜೀವವನ್ನೂ ಲೆಕ್ಕಿಸದೆ ಈ ಜೋರುಮಳೆಯಲ್ಲಿ ಕರ್ತವ್ಯನಿಷ್ಠರಾಗಿರುವ ಡೆಲಿವರಿ ಏಜೆಂಟರುಗಳ ಆಸರೆ ಬೇಸರಕ್ಕೆ ಹೀಗೊಂದು ರಿಲ್ಯಾಕ್ಸ್​ ಸ್ಟೇಷನ್​ ಶುರುಮಾಡಿದ್ದಾರೆ ಈ ಉತ್ಸಾಹಿ ಯುವಕ. ನೆಟ್ಟಿಗರು ಇವರ ಬೆನ್ನು ತಟ್ಟುತ್ತಿದ್ದಾರೆ.

Viral: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್​ ಸ್ಟೇಷನ್​; ನೆಟ್ಟಿಗರ ಹೃದಯಗೆದ್ದ ಯುವಕ
ರಿಲ್ಯಾಕ್ಸ್​ ಸ್ಟೇಷನ್​ಗೆ ಡೆಲಿವರಿ ಏಜೆಂಟರುಗಳನ್ನು ಆಹ್ವಾನಿಸುತ್ತಿರುವ ಸಿದ್ದೇಶ ಲೋಕರೆ
Follow us
ಶ್ರೀದೇವಿ ಕಳಸದ
|

Updated on:Jul 14, 2023 | 3:19 PM

Maharashtra : ಧೋ ಎಂದು ಸುರಿಯುವ ಮಳೆಯಲ್ಲೂ, ರಣಬಿಸಿಲಿನಲ್ಲೂ, ಕಡುಚಳಿಯಲ್ಲೂ, ಬಿರುಗಾಳಿಯಲ್ಲೂ ಡೆಲಿವರಿ ಏಜೆಂಟರುಗಳು ಶಕ್ತಿಮಾನ್​ನಂತೆ, ಸೂಪರ್​ಮ್ಯಾನ್​ನಂತೆ ಗೋಚರಿಸುತ್ತಾರೆ. ಸಮಯಕ್ಕೆ ಸರಿಯಾಗಿ ಬಿಸಿಬಿಸಿ ತಿಂಡಿ ತಿನಿಸುಗಳನ್ನು ಮನೆಮನೆಗೆ ತಲುಪಿಸುವ ಇವರೂ ಮನುಷ್ಯರೇ. ಇವರಿಗೂ ಬಾಯಾರಿಕೆ, ಹಸಿವೆ ಎನ್ನುವುದಿದೆ ಮತ್ತು ತುಸು ಹೊತ್ತಾದರೂ ವಿಶ್ರಮಿಸಬೇಕು ಎನ್ನಿಸುತ್ತಿರುತ್ತದೆ. ಆದರೆ ಇವರ ಆಸರ ಬೇಸರವನ್ನು ಕೇಳುವವರು ಮತ್ತು ವಿಶ್ರಾಂತಿಗಾಗಿ ಅನುಕೂಲ ಕಲ್ಪಿಸುವವರು ಯಾರಿದ್ದಾರೆ? ಇದ್ದಾರೆ. ಇವರಿಗಾಗಿಯೇ ರಿಲ್ಯಾಕ್ಸ್ ಸ್ಟೇಷನ್ (Relax Station)​ ಶುರುಮಾಡಿದ ಸಿದ್ಧೇಶ ಲೋಕರೆ (Siddhesh Lokare) ಎಂಬ ಸೋಶಿಯಲ್ ಮೀಡಿಯಾ ಇನ್​​ಫ್ಲ್ಯೂಯೆನ್ಸರ್​ ಇದೀಗ ಸಾಮಾಜಿಕ ಜಾಲತಾಣಿಗರ ಮನಸೂರೆಗೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Siddhesh Lokare??‍♂️ (@sidiously_)

”ಮಳೆಯಲ್ಲಿ ನೆನೆದುಕೊಂಡು ಕೆಲಸ ಮಾಡುತ್ತಿದ್ದ ಡೆಲಿವರಿ ಏಜೆಂಟರುಗಳನ್ನು ನೋಡಿ ಬೇಸರವಾಗುತ್ತಿತ್ತು. ಹಾಗಾಗಿ ಅವರು ದಣಿವಾರಿಸಿಕೊಳ್ಳಲು ಏನಾದರೂ ಮಾಡಬೇಕೆಂದಾಗ ಈ ಆಲೋಚನೆ ಹೊಳೆಯಿತು. ಸಮೋಸಾ, ಭಜ್ಜಿ ಮುಂತಾದ ತಿನಿಸುಗಳನ್ನು ಮತ್ತು ಚಹಾ, ಕಾಫಿ, ನೀರನ್ನು ಅವರಿಗೆ ಉಚಿತವಾಗಿ ಕೊಡುವುದೆಂದು ನಿರ್ಧರಿಸಿದೆ” ಎನ್ನುತ್ತಾರೆ ಮುಂಬೈನ ಸಿದ್ಧೇಶ.

ಇದನ್ನೂ ಓದಿ : Viral: ಚಂದ್ರನೊಡೆಯನಾಗಬೇಕೆ? ಸದ್ಯಕ್ಕೆ ಓಡುತ್ತಿರುವ ಬೆಲೆ ಎಕರೆಗೆ ಬರೀ ಇಷ್ಟೇ!

ಈ ಪೋಸ್ಟ್​ ಅನ್ನು ಎರಡು ದಿನಗಳ ಹಿಂದೆ ಇನ್​ಸ್ಟಾನಲ್ಲಿ ಹಂಚಿಕೊಳ್ಳಲಾಗಿದೆ. 5 ಮಿಲಿಯನ್​ನಷ್ಟು ಮಂದಿ ಇದನ್ನು ನೋಡಿದ್ದಾರೆ. 6 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇವರ ಈ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಖಂಡಿತ ಡೆಲಿವರಿ ಏಜೆಂಟರನ್ನು ನಾವು ಗೌರವಿಸಬೇಕು ಮತ್ತು ಅವರ ಅನುವು ಆಪತ್ತುಗಳಿಗೆ ಹೆಗಲು ಕೊಡಬೇಕು. ಕೊರೊನಾ ಸಮಯದಲ್ಲಿ ಇವರ ಸಹಾಯವನ್ನು ಮರೆಯುವಂತಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.

ಇದನ್ನೂ ಓದಿ : Viral Video: ನನ್ನ ಈ ದೇಶವನ್ನು ಮತ್ತೆ ಕಟ್ಟುತ್ತೇನೆ; ನನಸಾದೀತೇ ಅಫ್ಘನ್ ಬಾಲೆಯ ಕನಸು?

ಡೆಲಿವರಿ ಏಜೆಂಟರುಗಳ ಬಗ್ಗೆ ನಮ್ಮ ಸರ್ಕಾರಗಳಂತೂ ಯೋಚಿಸುವುದಿಲ್ಲ, ಈ ಯುವಕನಾದರೂ ಕಾಳಜಿ ವಹಿಸುತ್ತಿದ್ದಾನಲ್ಲ, ಸರ್ಕಾರಕ್ಕಿಂತಲೂ ಈ ವ್ಯವಸ್ಥೆಯನ್ನು ಈತ ಚೆನ್ನಾಗಿ ಮಾಡುತ್ತಾನೆ ಎನ್ನುವ ಭರವಸೆ ಇದೆ ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:18 pm, Fri, 14 July 23

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್