Viral Brain Teaser: ಈ ಪಿಕಾಚುಗಳ ಮಧ್ಯೆ ಮೂರು ಬಾಳೆಹಣ್ಣುಗಳಿವೆ, ಕಂಡುಹಿಡಿಯಬಹುದೆ?

Pikachu : ಪಿಕಾಚುಗಳ ರಾಶಿಯೇ ಇದೆ ಇಲ್ಲಿ. ಇವುಗಳಲ್ಲಿ ಅಡಗಿರುವ ಬಾಳೆಹಣ್ಣುಗಳನ್ನು ನೀವು ಕಂಡುಹಿಡಿಯಬೇಕಿದೆ. ವೀಕೆಂಡ್​ ಆಲಸ್ಯಕ್ಕೆ ಇದು ಒಳ್ಳೆಯ ಮದ್ದು. ಏನಂತೀರಿ? ಬೇಗ ಕಂಡುಹಿಡಿಯಿರಿ ಮತ್ತೆ!

Viral Brain Teaser: ಈ ಪಿಕಾಚುಗಳ ಮಧ್ಯೆ ಮೂರು ಬಾಳೆಹಣ್ಣುಗಳಿವೆ, ಕಂಡುಹಿಡಿಯಬಹುದೆ?
ಪಿಕಾಚುಗಳ ಮಧ್ಯೆ ಅಡಗಿರುವ 3 ಬಾಳೆಹಣ್ಣುಗಳನ್ನು ಕಂಡುಹಿಡಿಯಿರಿ
Follow us
ಶ್ರೀದೇವಿ ಕಳಸದ
|

Updated on:Jul 14, 2023 | 10:54 AM

Optical Illusion : ಎಲ್ಲರೂ ವೀಕೆಂಡ್ ಮೂಡಿನಲ್ಲಿದ್ದೀರಿ. ಈ ಶುಕ್ರವಾರ ಅದೆಷ್ಟು ಬೇಗ ಕಳೆಯುತ್ತದೆಯೋ ಎಂದು ಕಾಯುತ್ತಿದ್ದೀರಿ. ಬೇಗ ಕೆಲಸ ಮುಗಿಸಿ ವೀಕೆಂಡ್ ಮಸ್ತಿಗೆ ಜಿಗಿಯಬೇಕು ಎಂದುಕೊಳ್ಳುತ್ತಿದ್ದೀರಿ. ಆದರೂ ಬಿದ್ದಿರುವ ರಾಶಿ ಕೆಲಸ ನಿಮ್ಮ ಕೈ ಎಳೆಯುತ್ತಿದೆ. ಜೊತೆಗೆ ಮುಸುಕು ಹಾಕಿಕೊಂಡಿರುವ ಆಕಾಶ ಬೇರೆ. ಸಣ್ಣಗೆ ಕಣ್ಣು ಎಳೆದಂತೆ ಭಾಸವಾಗುತ್ತಿದೆ. ಅದಕ್ಕೆಂದೇ ನಾವು ನಿಮಗೆ ಹೊಸದೊಂದು ಬ್ರೇನ್​ ಟೀಸರ್ ((Brain Teaser) ನೊಂದಿಗೆ ಬಂದಿದ್ದೇವೆ. ಸ್ವಲ್ಪ ಹೊತ್ತು ಈ ಚಿತ್ರದೆಡೆ ಗಮನ ಹರಿಸಿ ಉತ್ತರ ಕಂಡುಹಿಡಿಯಿರಿ, ಆಗ ನಿಮ್ಮ ಆಲಸ್ಯವೆಲ್ಲ ಮಂಗಮಾಯ!

ನೋಡಿ ಇಲ್ಲಿ ನೂರಾರು ಪಿಕಾಚುಗಳಿವೆ (Pikachu) ಇವುಗಳಲ್ಲಿ ಮೂರು ಬಾಳೆಹಣ್ಣುಗಳು ಅಡಗಿವೆ. ಎಂದಿನಂತೆ ಈ ಚಿತ್ರ ನಿಮ್ಮ ಕಣ್ಣುಗಳನ್ನು ನೀವೇ ನಂಬದಂತೆ ಮಾಡುತ್ತದೆ. ನಿಮ್ಮ ಬುದ್ಧಿಯನ್ನು ನೀವೇ ಅನುಮಾನಿಸುವಂತೆ ಮಾಡುತ್ತದೆ ಎನ್ನುವ ವಿಷಯವಂತೂ ನಿಮಗೆ ಗೊತ್ತೇ ಇದೆ. ಆದರೂ ನಿಮಗೆ ಇಂಥ ಭ್ರಮಾತ್ಮಕ ಚಿತ್ರಗಳೆಂದರೆ ಬಲುಪ್ರೀತಿ ಅಲ್ಲವೆ?

ಇದನ್ನೂ ಓದಿ : Viral Video: ಜಲಪಾತದ ಅಂಚಿಗೆ ತಾಯಿ ಮಗು; ಅದೃಷ್ಟ ಚೆನ್ನಾಗಿತ್ತು ಎನ್ನುತ್ತಿರುವ ನೆಟ್ಟಿಗರು

ಎಂದಿನಂತೆ ಹಂಗೇರಿಯನ್ ಕಲಾವಿದೆ ಗೆರ್ಗೆಲಿ ಡುಡಾಸ್​ ಇದನ್ನು ರಚಿಸಿದ್ದಾರೆ. ಚಿಕ್ಕಮಕ್ಕಳಿಂದ ಮುದುಕರವರೆಗೂ ಈ ಚಿತ್ರಗಳು ಬುದ್ಧಿಯನ್ನ ಚುರುಕುಗೊಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಎರಡು ದಿನಗಳ ಹಿಂದೆ ಹಂಚಿಕೊಂಡ ಈ ಚಿತ್ರವನ್ನು ಫೇಸ್​ಬುಕ್​ನಲ್ಲಿ ಸುಮಾರು 700 ಜನರು ಲೈಕ್ ಮಾಡಿದ್ದಾರೆ. 200ಕ್ಕೂ ಹೆಚ್ಚು ಜನರು ಹಂಚಿಕೊಂಡಿದ್ದಾರೆ. 136 ಜನರು ಉತ್ತರ ಕೊಡಲು ಪ್ರಯತ್ನಿಸಿದ್ದಾರೆ. ಉತ್ತರ ಈ ಕೆಳಗಿದೆ.

Viral Brain Teaser Find 3 bananas among Pikachus

ಇಲ್ಲಿದೆ ಉತ್ತರ!

ಈತನಕ ನಾನು 2 ಪಿಕಾಚುಗಳನ್ನು ಕಂಡುಹಿಡಿದೆ. ಆದರೆ ಮೂರನೇದ್ದನ್ನು ಕಂಡು ಹಿಡಿಯಬೇಕೆಂದರೆ ನನ್ನ ಕಣ್ಣುಗಳು ಸ್ವಲ್ಪ ಸಹಜ ಸ್ಥಿತಿಗೆ ಬರಬೇಕು, ಅಲ್ಲಿಯತನಕ ನಾನು ಕಾಯಬೇಕು ಎಂದಿದ್ಧಾರೆ ಒಬ್ಬರು. ನನಗೆ ಮೂರೂ ಬಾಳೆಹಣ್ಣುಗಳು ಕಂಡವು, ಆದರೆ ಬಹಳ ಸಮಯ ತೆಗೆದುಕೊಂಡಿತು ಎಂದಿದ್ದಾರೆ ಕೆಲವರು. ಅಬ್ಬಾ ಇದು ಬಹಳ ಕಠಿಣವಾದ ಸವಾಲು, ನಾನು ಸೋತೆ ಎಂದಿದ್ದಾರೆ ಇನ್ನೂ ಕೆಲವರು. ನೀವು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:53 am, Fri, 14 July 23