Viral News: 13 ಗಂಟೆಗಳ ಕಾಲ ನೀರಿನಲ್ಲಿ ಸಿಲುಕಿದ್ದ 78ರ ವೃದ್ಧೆ
13 ಗಂಟೆಗಳ ಕಾಲ ಪ್ರವಾಹದಲ್ಲಿ ಸಿಲುಕಿದ್ದ 78ರ ವೃದ್ಧೆಯೊಬ್ಬರು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದು ಬಂದಿದ್ದಾರೆ. ಇನ್ನಷ್ಟು ವಿವರ ಇಲ್ಲಿದೆ.
ಕೇರಳ: 13 ಗಂಟೆಗಳ ಕಾಲ ಪ್ರವಾಹದಲ್ಲಿ ಸಿಲುಕಿದ್ದ 78ವರ್ಷದ ವೃದ್ಧೆಯೊಬ್ಬರು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದು ಬಂದಿದ್ದಾರೆ. ಕೇರಳದ ಕಟ್ಟಿಪರದ ಕುಡುವಕುಂಞವಿನ ಕಮಲಾಕ್ಷಿ(78) ನದಿಯ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ಸುಮಾರು 13 ಗಂಟೆಗಳ ಹುಡುಕಾಟದ ನಂತರ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ 13 ಗಂಟೆಗಳ ಕಾಲ ನೀರಿನಲ್ಲಿ ಜೀವನ್ಮರಣಾ ಹೋರಾಟ ನಡೆಸಿದ 78ರ ವೃದ್ಧೆಯ ಸಾಹಸಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ರಾತ್ರಿಯಿಡೀ ನೀರಿನಲ್ಲೇ ಕಳೆದ 78ರ ವೃದ್ಧೆ:
ನದಿಯ ಸ್ನಾನಕ್ಕೆ ಹೋದ ವೇಳೆ ಕಾಲು ಜಾರಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಕಮಲಾಕ್ಷಿವರು ಮನೆಯಿಂದ ಸುಮಾರು 50 ಮೀಟರ್ ದೂರದಲ್ಲಿ ನೀರಿನ ಮಧ್ಯೆ ಸಿಕ್ಕಿಕೊಂಡಿದ್ದರು. ಮಧ್ಯರಾತ್ರಿ ಮನೆಯ ಪಕ್ಕದ ನದಿಯ ದಡದಲ್ಲಿ ವೃದ್ಧೆಯ ಚಪ್ಪಲಿ ಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿ ಹೋಗಿರುವುದು ತಿಳಿದುಬಂದಿದೆ. ರಾತ್ರಿಯಿಡೀ ಮನೆಯವರು ಹುಡುಕಾಟ ನಡೆಸಿದ್ದಾರೆ ಆದರೆ ಏನೂ ಪ್ರಯೋಜನವಾಗಲಿಲ್ಲ.
ಇದನ್ನೂ ಓದಿ: ಡೆಲಿವರಿ ಏಜೆಂಟರುಗಳಿಗಾಗಿ ರಿಲ್ಯಾಕ್ಸ್ ಸ್ಟೇಷನ್; ನೆಟ್ಟಿಗರ ಹೃದಯಗೆದ್ದ ಯುವಕ
ಕಮಲಾಕ್ಷಿಯವರ ಕುತ್ತಿಗೆಯ ವರೆಗೆ ನೀರು ಇದ್ದರೂ ಕೂಡ ರಾತ್ರಿಪೂರ ಬಂಡೆಯ ನಡುವೆ ಗಿಡದ ರೆಂಬೆಯನ್ನು ಹಿಡಿದು ಕುಳಿತ್ತಿದ್ದಾರೆ. ಮರುದಿನ ಬೆಳಗ್ಗೆ ಸ್ಥಳೀಯರು ಹಾಗೂ ನರಿಕುಣಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ವೃದ್ಧೆಯನ್ನು ರಕ್ಷಣೆ ಮಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಪುತ್ರಿಯ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಈ ಘಟನೆ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ 13 ಗಂಟೆಗಳ ಕಾಲ ನೀರಿನಲ್ಲಿ ಜೀವನ್ಮರಣಾ ಹೋರಾಟ ನಡೆಸಿದ 78ರ ವೃದ್ಧೆಯ ಸಾಹಸಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: