Viral: ಪಾಕಿಸ್ತಾನ; ಕರಾಚಿಯಲ್ಲಿ ಮಾರಿ ಮಾತಾ ಹಿಂದೂ ದೇವಸ್ಥಾನ ಧ್ವಂಸ

Mari Mata Hindu Temple : '150 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಮಧ್ಯರಾತ್ರಿಯಲ್ಲಿ ಬುಲ್ಡೋಜರ್​ ಮೂಲಕ ಧ್ವಂಸ ಮಾಡಲಾಗಿದೆ. ಕೆಲ ವರ್ಷಗಳ ಹಿಂದೆ ಇದ್ದ ಸ್ಥಿತಿಗೆ ಪಾಕಿಸ್ತಾನವು ಮರಳುತ್ತಿದೆ' ಎಂದಿದ್ದಾರೆ ಪ್ರೊ. ಅಶೋಕ ಸ್ವೈನ್​  

Viral: ಪಾಕಿಸ್ತಾನ; ಕರಾಚಿಯಲ್ಲಿ ಮಾರಿ ಮಾತಾ ಹಿಂದೂ ದೇವಸ್ಥಾನ ಧ್ವಂಸ
ಕರಾಚಿಯಲ್ಲಿ ಧ್ವಂಸಗೊಂಡ ಮಾರಿ ಮಾತಾ ಹಿಂದೂ ದೇವಸ್ಥಾನ
Follow us
ಶ್ರೀದೇವಿ ಕಳಸದ
|

Updated on:Jul 17, 2023 | 1:22 PM

Pakistan : ಕರಾಚಿಯಲ್ಲಿ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಸ್ಥಾನವನ್ನು (Mari Mata Hindu Temple) ನೆಲಸಮಗೊಳಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದಂತೆ ಬುಲ್ಡೋಜರ್​ ಬಂದು ನಿಂತಿತು. ನೋಡನೋಡುತ್ತಿದ್ದಂತೆ ದೇವಸ್ಥಾನವನ್ನು ಧ್ವಂಸಗೊಳಿಸಲಾಯಿತು. ಆದರೆ ಹೊರಾವರಣದ ಗೋಡೆಗಳು ಮತ್ತು ಗೇಟ್ ಮಾತ್ರ​ ಸುಸ್ಥಿತಿಯಲ್ಲಿವೆ. ಅಲ್ಲದೆ ಬುಲ್ಡೋಜರ್ ನಿರ್ವಹಿಸಿದ ತಂಡಕ್ಕೆ ಪೊಲೀಸರು ‘ಪಾಕೀಟು’ ನೀಡುವುದನ್ನು ನೋಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ ಎಂದು ಪಾಕಿಸ್ತಾನದ ಇಂಗ್ಲಿಷ್​ ಪತ್ರಿಕೆ Dawn ವರದಿ ಮಾಡಿದೆ.

ಮಾರಿ ಮಾತಾ ದೇವಸ್ಥಾನವು ಕರಾಚಿಯ ಮುಖಿ ಚೋಹಿತ್ರಮ್​ ರಸ್ತೆಯ ಸೋಲ್ಜರ್​ ಬಜಾರ್​ ಪೊಲೀಸ್​ ಠಾಣೆಯ ಬಳಿ ಇದೆ. ಅತ್ಯಂತ ಹಳೆಯ ದೇವಸ್ಥಾನವಾದ ಶ್ರೀ ಪಂಚಮುಖಿ ಹನುಮಾನ್​​ ಮಂದಿರದ ಶ್ರೀರಾಮನಾಥ ಮಿಶ್ರಾ ಮಹಾರಾಜ್​, ‘ಇದು ಅತ್ಯಂತ ಹಳೆಯ ದೇವಾಲಯ. 150 ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿದ್ದು  ಇದರ ಅಂಗಳದಲ್ಲಿ ನಿಧಿ ಹೂತಿಡಲಾಗಿದೆ ಎಂದು ಕೇಳಿ ತಿಳಿದಿದ್ದೇನೆ. ಆಕ್ರಮಣಕಾರರು ಬಹಳ ದಿನಗಳಿಂದ ಇದರ ಮೇಲೆ ಕಣ್ಣಿಟ್ಟಿದ್ದರು’ ಎಂದಿದ್ದಾರೆ.

ಇದನ್ನೂ ಓದಿ : Viral: ಒಂಟಿತನ ಕಾಡುತ್ತಿದೆಯೇ?;ಬಾಡಿಗೆ ಗೆಳತಿಯನ್ನು ನೇಮಿಸಿಕೊಳ್ಳಿ!

‘ಇದು ಅತ್ಯಂತ ಹಳೆಯ ದೇವಸ್ಥಾನ. ಇದು ಮದ್ರಾಸಿ ಹಿಂದೂ ಸಮುದಾಯವು ಆಡಳಿತದಲ್ಲಿತ್ತು. ಕಟ್ಟಡ ತುಂಬಾ ಹಳೆಯದಾಗಿದ್ದರಿಂದ ಯಾವಾಗ ಬೇಕಾದರೂ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಹಾಗಾಗಿ ಆಡಳಿತ ಮಂಡಳಿಯು ಮನಸ್ಸಿಲ್ಲದಿದ್ದರೂ ದೇವಸ್ಥಾನವನ್ನು ನವೀಕರಣಗೊಳಿಸುವತನಕ ಬೇರೊಂದು ಜಾಗದ ಸಣ್ಣಕೋಣೆಗೆ ತಾತ್ಕಾಲಿಕವಾಗಿ ದೇವರ ಮೂರ್ತಿಯನ್ನು ಸ್ಥಳಾಂತರಿಸಿತ್ತು. ಆದರೆ ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆ  ಈ ದೇವಸ್ಥಾನವನ್ನು ನೆಲಸಮ ಮಾಡಲಾಗಿದೆ’ ಎಂದಿದ್ದಾರೆ ಶ್ರೀರಾಮನಾಥ ಮಿಶ್ರಾ ಮಹಾರಾಜ್.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:01 pm, Mon, 17 July 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್