Viral Video: ಮೊಟ್ಟೆಯ ತಾಜಾತನವನ್ನು ಪರೀಕ್ಷಿಸುವುದು ಹೇಗೆ?

Freshness : ಮೊಟ್ಟೆ ಇಡುವಾಗಲೇ ದಿನಾಂಕವನ್ನೂ ಮುದ್ರಿಸಿಬಿಡುತ್ತವಾ ಈ ಟೆಕ್ಕಿಕೋಳಿಗಳು? ಮಹಾನಗರದಲ್ಲಿರುವವರಿಗೆ ಈ ಸುದ್ದಿ ಮಾಮೂಲು. ಉಳಿದವರಿಗೆ? ಹೇಳಿ, ನೀವು ಹೇಗೆ ಮೊಟ್ಟೆಯ ತಾಜಾತನವನ್ನು ಪತ್ತೆ ಹಚ್ಚುತ್ತೀರಿ ಎಂದು.

Viral Video: ಮೊಟ್ಟೆಯ ತಾಜಾತನವನ್ನು ಪರೀಕ್ಷಿಸುವುದು ಹೇಗೆ?
ಮೊಟ್ಟೆಯ ತಾಜಾತನವನ್ನು ಪರೀಕ್ಷಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Jul 17, 2023 | 4:39 PM

Egg : ‘ನಾನು ಸುಂದರವಾದ ಮೊಟ್ಟೆಯನ್ನು ಇಟ್ಟಿದ್ದೇನೆ. ಇದನ್ನು ಯಾವಾಗ ತಿನ್ನಬೇಕೆಂಬುದನ್ನೂ ನಾನು ಟೈಪ್​ ಮಾಡುತ್ತೇನೆ’ ಮುಕುಂದ ಸೆಟ್ಲೂರ್ ಎನ್ನುವವರು ಕೆಲ ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ (Facebook) ಹೀಗೊಂದು ಕ್ಯಾಪ್ಷನ್​ನೊಂದಿಗೆ ದಿನಾಂಕ ಹೊತ್ತ ಮೊಟ್ಟೆಯ ಫೋಟೋ ಪೋಸ್ಟ್​ ಮಾಡಿದ್ದರು. ಇದರಡಿ ಕೆಲವು ಪ್ರತಿಕ್ರಿಯೆಗಳೂ ಇದ್ದವು; ಮೊಟ್ಟೆಯನ್ನು ಮೂರು ತಿಂಗಳುಗಳ ತನಕ ಇಟ್ಟು ತಿನ್ನಬಹುದೆ! ಅರೆ, ಇದು ಚೀನಾದ ಕೋಳಿಮೊಟ್ಟೇನೇ ಇರಬೇಕು, ಇಷ್ಟುದಿನಗಳವರೆಗೂ ಇದು ಹಾಳಾಗುವುದಿಲ್ಲವೆಂದರೆ…

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಾಗಿದ್ದರೆ ಮೊಟ್ಟೆಯ ತಾಜಾತನವನ್ನು ಕಂಡುಕೊಳ್ಳುವುದು ಹೇಗೆ? ಲೇಖಕ, ಅಂಕಣಕಾರ ವಾಲಾ ಆಫ್ಷರ್ ​ ಎಂಬುವವರು ಈ ಕುರಿತು ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಅನ್ನು ಈತನಕ 1.3 ಮಿಲಿಯನ್​ ಜನರು ನೋಡಿದ್ದಾರೆ. 7,200ಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. 1,700 ಜನರು ರೀಟ್ವೀಟ್ ಮಾಡಿದ್ದಾರೆ. ಪ್ರತಿಕ್ರಿಯೆಗಳೂ ರಾಶಿಯಾಗಿ ಹರಿದುಬಂದಿವೆ.

‘ತಾಜಾ ಮೊಟ್ಟೆಗಳ ಬಿಳಿಭಾಗವು ಕಡಿಮೆ pH ಪ್ರಮಾಣ ಹೊಂದಿದ್ದು ಆಮ್ಲದಾಂಶವನ್ನು ಹೊಂದಿರುತ್ತವೆ. ಬೇಯಿಸಿದಾಗ ಬಿಳಿಭಾಗವು ಚಿಪ್ಪಿಗೆ ಅಂಟಿಕೊಳ್ಳುತ್ತದೆ ಆಗ ಚಿಪ್ಪನ್ನು ತೆಗೆಯುವುದು ಕಷ್ಟ. ಮೊಟ್ಟೆಗಳು ಹಳೆಯವಾಗುತ್ತಿದ್ದಂತೆ pH ಪ್ರಮಾಣ ಹೆಚ್ಚಾಗುತ್ತದೆ, ಆಗ ಚಿಪ್ಪನ್ನು ಸುಲಭವಾಗಿ ತೆಗೆಯಬಹುದು. 7-10 ದಿನಗಳಷ್ಟು ಹಳೆಯ ಮೊಟ್ಟೆಗಳು ಬೇಯಿಸಲು ಮತ್ತು ತಿನ್ನಲು ಅನುಕೂಲಕರವಾಗಿರುತ್ತವೆ. ಹಾಗಾಗಿ ಯಾವಾಗಲೂ ತಾಜಾ ಮೊಟ್ಟೆ ಒಳ್ಳೆಯದು ಅಂತಲ್ಲ’ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಥಟ್​ ಅಂತ ಹೇಳಿ! ಇವರನ್ನು ಹೀಗೆ ಬೇಸರಗೊಳಿಸಿದ್ದು ಯಾರು?

ನಾನಿರುವ ಪ್ರದೇಶ ಉಷ್ಣವಲಯವಾದ್ದರಿಂದ ತಾಜಾಮೊಟ್ಟೆಗಳು ಸಿಗುವುದೇ ಇಲ್ಲವೇನೋ ಎಂದುಕೊಂಡಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ವಾಲಾ ಅವರು ತಿಳಿಸಿದ ಪ್ರಯೋಗವನ್ನು ಮಾಡಿ ನೋಡಿದೆ. ಆದರೆ ಫಲಿತಾಂಶದಲ್ಲಿ ಸ್ಪಷ್ಟತೆ ಇಲ್ಲ ಎಂದಿದ್ದಾರೆ ಇನ್ನೊಬ್ಬರು. ಒಂದು ತಿಂಗಳ ನಂತರವೂ ಮೊಟ್ಟೆಗಳನ್ನು ತಿನ್ನಬಹುದೇ? ಎಂದು ಕೆಲವರು ಕೇಳಿದ್ದಾರೆ. ಕೆಲ ಹೆಂಡತಿಯರು, ತಮ್ಮ ಗಂಡಂದಿರು ಮೋಸ ಮಾಡುತ್ತಿದ್ದಾರೆಯೇ? ಎಂದು ಕಂಡು ಹಿಡಿಯಲು ಈ ತಂತ್ರ ಬಳಸುತ್ತಾರೆ ಎಂದಿದ್ದಾರೆ ಮತ್ತೊಬ್ಬರು! ಇದೆಲ್ಲ ನಮ್ಮ ಅಜ್ಜಿಯರಿಗೂ ಗೊತ್ತಿತ್ತು ಎಂದಿದ್ದಾರೆ ಮಗದೊಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ 

Published On - 4:39 pm, Mon, 17 July 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ