Viral Video: ಥಟ್​ ಅಂತ ಹೇಳಿ! ಇವರನ್ನು ಹೀಗೆ ಬೇಸರಗೊಳಿಸಿದ್ದು ಯಾರು?

Na Someshwar: ಈ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳು ನಕಾರಾತ್ಮಕ ತಂತ್ರ ಬಳಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ ಸೋಮೇಶ್ವರ. ಹಾಗೆಂದು ಈ ಕಾರ್ಯಕ್ರಮದಿಂದ ಅವರೇನು ಹಿಂದೆ ಸರಿದಿಲ್ಲ. ತಂತ್ರಕ್ಕೆ ಪ್ರತಿತಂತ್ರ ಹೂಡಿದ್ದಾರೆ. ಏನದು?

Viral Video: ಥಟ್​ ಅಂತ ಹೇಳಿ! ಇವರನ್ನು ಹೀಗೆ ಬೇಸರಗೊಳಿಸಿದ್ದು ಯಾರು?
ಡಾ. ನಾ. ಸೋಮೇಶ್ವರ
Follow us
|

Updated on:Jul 17, 2023 | 3:46 PM

Quiz Program : ಡಾ. ನಾ ಸೋಮೇಶ್ವರ! (Na Someshwar) ಹೆಸರು ಕೇಳಿದ ತಕ್ಷಣ ಥಟ್​ ಅಂತ ನೆನಪಾಗೋದು ಚಂದನವಾಹಿನಿಯ (Chandana) ಕನ್ನಡ ರಸಪ್ರಶ್ನೆ ಕಾರ್ಯಕ್ರಮ. ಕಳೆದ ಇಪ್ಪತ್ತು ವರ್ಷಗಳಿಂದ ಸಾಮಾನ್ಯ ಜ್ಞಾನ, ವಿಚಾರ ವೈವಿಧ್ಯತೆ ಮತ್ತು ಸರಳ ಪ್ರಸ್ತುತಿಯಿಂದಾಗಿ ಕೋಟ್ಯಂತರ ಜನರನ್ನು ಇದು ಹಿಡಿದಿಟ್ಟುಕೊಂಡಿದೆ. ಸೋಮೇಶ್ವರರು ಅಂದಿನಿಂದ ಇಂದಿನವರೆಗೂ ಒಂದೇ ಲಯದಲ್ಲಿ ಒಂದೇ ಹದದಲ್ಲಿ ನಿರೂಪಿಸುತ್ತಾ ತಮ್ಮ ಶೈಲಿಯನ್ನು ಕಾಯ್ದುಕೊಂಡಿದ್ದಾರೆ. ಆದರೆ ಇದೀಗ ಈ ಕಾರ್ಯಕ್ರಮದ ಶೀರ್ಷಿಕೆಯನ್ನೇ ಬದಲಾಯಿಸುವಷ್ಟು ಕೋಪ ಅವರಿಗೆ ಬಂದಿದೆ! ಹಾಗಾಗಿ ಇದೀಗ ‘ಥಟ್​​ ಅಂತ ಹಚ್ಚಿ’! ಅರೆ ಹೀಗೇಕೆ ಮಾಡಿದರು? ಎಂದಾದರೂ ಸೋಮೇಶ್ವರರು ಹೀಗೆ ಕೋಪಗೊಂಡಿದ್ದನ್ನು ನೀವು ನೋಡಿದ್ದಿದೆಯೇ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by ULLAS Agarbathi (@ullasagarbathi)

ನೋಡಿದಿರಲ್ಲ ‘ಥಟ್​ ಅಂತ ಹಚ್ಚಿ’ ಸೋಮೇಶ್ವರರನ್ನು? ಈಗಾಗಲೇ ಇದರ ಹೂರಣ ನಿಮ್ಮ ಅರಿವಿಗೆ ಬಂದಿರಲು ಸಾಕು. ಅಗರಬತ್ತಿ ಕಂಪೆನಿಯ ಪ್ರಾಯೋಜಕತ್ವದಲ್ಲಿ ಈ ಎಪಿಸೋಡ್​ ಮೂಡಿಬರುತ್ತಿರುವುದರಿಂದ ಪ್ರೋಮೋದ ಪರಿಕಲ್ಪನೆಯನ್ನು ಹೀಗೆ ಕಟ್ಟಿಕೊಡಲಾಗಿದ್ದು, ಜತೆಗೆ ತಾತ್ಕಾಲಿಕವಾಗಿ ಶೀರ್ಷಿಕೆಯಲ್ಲಿ ಮಾರ್ಪಾಡು ಮಾಡಲಾಗಿದೆ. ಅನುಭಾ ಎನ್ನುವವರು ತಮ್ಮ ಟ್ವಿಟರ್​ ಖಾತೆಯಲ್ಲಿಯೂ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ಪ್ರೋಮೋ ನಿರ್ಮಿಸಿದ ತಂಡಕ್ಕೆ ಅಭಿನಂದನೆ ಎಂದಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ನನ್ನ ಅಮ್ಮ ಬೇಸಿಗೆ ರಜೆಯಲ್ಲಿ ಈ ಕಾರ್ಯಕ್ರಮದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯಲು ಹೇಳುತ್ತಿದ್ದದ್ದು ನನಗಿನ್ನೂ ನೆನಪಿದೆ ಎಂದಿದ್ದಾರೆ ಒಬ್ಬರು. ಇದು ತುಂಬಾ ಸುಂದರವಾಗಿ ಮೂಡಿಬಂದಿದೆ ಎಂದಿದ್ದಾರೆ ಅನೇಕರು. ಇವರು ನನ್ನ ನೆಚ್ಚಿನ ಕ್ವಿಝ್​ ಮಾಸ್ಟರ್​. ಇವರಿಗೆ ನಟನೆಯೂ ಗೊತ್ತಿದೆ! ಎಂದಿದ್ದಾರೆ ಕೆಲವರು. ಸುಮಾರು 2,000ಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಸುಮಾರು 50 ಜನರು ರೀಟ್ವೀಟ್ ಮಾಡಿದ್ದಾರೆ.

ನಕಾರಾತ್ಮಕ ತಂತ್ರಗಳಿಂದ ತಪ್ಪಿಸಿಕೊಂಡು ಹೊರಬರಲು ಗಂಧದ ಕಡ್ಡಿ ಹಚ್ಚಿದರೆ ಸಾಕೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:42 pm, Mon, 17 July 23

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು