Viral: ಧಾರವಾಡ ಪೇಡಾ; ಮುತ್ತಿನಂತೆ, ಒಂದು ಇನ್ನೊಂದು ಮತ್ತೊಂದಕ್ಕಾಗಿ ಹಾತೊರೆಯುತ್ತೀರಿ

Peda : 'ಬಂಗಾರವರ್ಣದ ಹಾಳೆಗಳಲ್ಲಿ ಒಂದೊಂದು ಪೇಡಾಗಳನ್ನೂ ಸುತ್ತಿಟ್ಟರೆ ಆಮದು ಮಾಡಿಕೊಂಡ ಚಾಕೋಲೇಟುಗಳ ಮೌಲ್ಯವನ್ನೇ ಈ ಪೇಡಾ ಕೂಡ ಪಡೆಯಬಹುದಲ್ಲವೆ?' ಎಂದಿದ್ದಾರೆ ನೆಟ್ಟಿಗರು. ನೀವೇನಂತೀರಿ?

Viral: ಧಾರವಾಡ ಪೇಡಾ; ಮುತ್ತಿನಂತೆ, ಒಂದು ಇನ್ನೊಂದು ಮತ್ತೊಂದಕ್ಕಾಗಿ ಹಾತೊರೆಯುತ್ತೀರಿ
ಧಾರವಾಡದ ಪೇಡಾ
Follow us
|

Updated on:Jul 17, 2023 | 5:43 PM

Dharwad : ‘ನಿನ್ನೆಯಷ್ಟೇ ಧಾರವಾಡದಿಂದ ಪೇಡಾ (Peda) ಬಾಕ್ಸ್ ತಲುಪಿತು. ಪೇಡಾಗಳು ಮಗುವಿನಂತೆ, ಬೆಣ್ಣೆಯಂತೆ ಅತ್ಯಂತ ಮೃದುವಾಗಿವೆ. ಕುತೂಹಲದಿಂದ ಅವುಗಳ ಗುಳಿಕೆನ್ನೆಯ ಮೇಲೆ ಬೆರಳಿಟ್ಟು ಎತ್ತಿಕೊಂಡೆ. ಖೋವಾ ಮತ್ತು ಸಕ್ಕರೆಯ ಮಿಶ್ರಣ ಮಂದಉರಿಯಲ್ಲಿ ತಾಸುಗಟ್ಟಲೆ ಹದವಾಗಿ ಬೆಂದು ಹೊಮ್ಮಿದ್ದೇ ಈ ಪೇಡಾ, ಟಾಫಿಯಂತೆ ಕಂದುಬಣ್ಣದಿಂದ ಕೂಡಿವೆ. ಧಾರವಾಡ ಪೇಡಾ ಎಂದರೆ ಮುತ್ತು, ನಿಮ್ಮ ತುಟಿಗಳ ಮೇಲೆ ಅದು ಸುಳಿದಾಡುತ್ತಲೇ ಇರುತ್ತದೆ, ಒಂದು ಇನ್ನೊಂದು, ಮತ್ತೊಂದಕ್ಕಾಗಿ ಹಾತೊರೆಯುವಂತೆ ಮಾಡುತ್ತದೆ.’

ಲೇಖಕಿ, ನಟಿ ತಾರಾ ದೇಶಪಾಂಡೆ ಇದನ್ನು ಟ್ವೀಟ್ ಮಾಡಿದ್ದಾರೆ. ಅನೇಕರು ಪೇಡಾ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಧಾರವಾಡದ ಪೇಡಾಗಳನ್ನು ಬಂಗಾರವರ್ಣದ ಹಾಳೆಗಳಲ್ಲಿ ಒಂದೊಂದನ್ನೂ ಸುತ್ತಿಟ್ಟರೆ ಆಮದಾದ ಚಾಕೋಲೇಟ್​ಗಳಂತೆ ಇವೂ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ ಎಂದಿದ್ಧಾರೆ ಒಬ್ಬರು. ಅತ್ಯಂತ ಮಧುರವಾದ ಸಿಹಿತಿಂಡಿ ಇದು, ಒಂದು ತಿಂದರೆ ಸಾಕಾಗುವುದಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಮೊಟ್ಟೆಯ ತಾಜಾತನವನ್ನು ಪರೀಕ್ಷಿಸುವುದು ಹೇಗೆ?

ಪೇಡಾದ ಹೊರತಾಗಿ ಧಾರವಾಡವು ಪ್ರಸಿದ್ಧ ಕವಿ ದ.ರಾ.ಬೇಂದ್ರೆಯವರನ್ನು ನಾಡಿಗೆ ಪರಿಚಯಿಸಿದೆ ಎಂದಿದ್ದಾರೆ ಇನ್ನೂ ಒಬ್ಬರು. ಠಾಕೂರ್​ ಮತ್ತು ಮಿಶ್ರಾ ಪೇಡಾಗಳು ನನ್ನ ಸ್ಮೃತಿಪಟಲದಲ್ಲಿ ತಮ್ಮ ರುಚಿಯನ್ನು ಹಾಗೇ ಉಳಿಸಿವೆ ಎಂದು ಮಗದೊಬ್ಬರು. ತಾರಾ ಪೇಡಾದ ತಯಾರಿಕೆ, ಇತಿಹಾಸದ ಬಗ್ಗೆ ಮಾಹಿತಿಯನ್ನು ಹಂಚಿಕೊಟ್ಟಿದ್ದಕ್ಕಾಗಿ ಅನೇಕರು ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 5:38 pm, Mon, 17 July 23