Viral Video: ಕಾವಾಲಾ; ‘ತಮನ್ನಾಗೇ ಕಾಂಪಿಟಿಷನ್ನು ಬ್ರೋ’ ಮಂಡೇ ಬ್ಲ್ಯೂಸ್​ ಮಂಡೆಯಿಂದಾನೇ ಮಾಯ!

Tamanna Bhatiya : ಸೂಪರ್ ಗುರು, ಜಗತ್ತಿನಲ್ಲಿ ಯಾವ ಕಾಸ್ಟ್ಯೂಮ್ ಡಿಸೈನರೂ ನಿಮ್ಮ ಹಾಗೆ ಯೋಚಿಸಿರೋದಕ್ಕೆ ಸಾಧ್ಯವೇ ಇಲ್ಲ. ರೀ, ತಮನ್ನಾ ನೋಡಿ ನಿಮ್ಮ ಅಣ್ತಮ್ಮಾ! ಎಂದು ನೆಟ್ಟಿಗರು ಭಾರೀ ಹುರುಪಿನಿಂದ ಪ್ರತಿಕ್ರಿಯಿಸುತ್ತಿದ್ದಾರೆ.

Viral Video: ಕಾವಾಲಾ; 'ತಮನ್ನಾಗೇ ಕಾಂಪಿಟಿಷನ್ನು ಬ್ರೋ' ಮಂಡೇ ಬ್ಲ್ಯೂಸ್​ ಮಂಡೆಯಿಂದಾನೇ ಮಾಯ!
ತಮನ್ನಾರಂತೆ ಕಾವಾಲಾ ಹಾಡಿಗೆ ವಸ್ತ್ರವಿನ್ಯಾಸ ಮಾಡಿಕೊಂಡು ಹೆಜ್ಜೆ ಹಾಕುತ್ತಿರುವ ಪುರುಷ
Follow us
ಶ್ರೀದೇವಿ ಕಳಸದ
|

Updated on:Jul 31, 2023 | 11:14 AM

Jailer : ರಜಿನಿಕಾಂತ್ ಮತ್ತು ತಮನ್ನಾ ಅಭಿನಯದ ಜೈಲರ್​ನ ಹವಾ ಈಗ ಎಲ್ಲೆಲ್ಲಿಯೂ. ಕಾವಾಲಾ (Kaavaalaa) ಹಾಡಿಗೆ ಇಷ್ಟು ದಿನ ವೃತ್ತಿಪರ ನೃತ್ಯ ಕಲಾವಿದೆಯರು, ರೂಪದರ್ಶಿಗಳು ಥೇಟ್​ ತಮ್ಮನ್ನಾರಂತೆ ಹೆಜ್ಜೆ ಹಾಕಿದ್ದನ್ನು ನೋಡಿದ್ದೀರಿ ಮತ್ತು ನೋಡುತ್ತಿದ್ದೀರಿ. ನೃತ್ಯದಿಂದ ಉಡುಗೆಯತನಕವೂ ತಮನ್ನಾರನ್ನೇ ಅನುಕರಿಸಲು ಪ್ರಯತ್ನಿಸಿದ್ದು ರೀಲ್​ಗಳಿಗೆ ಮತ್ತಷ್ಟು ರಂಗನ್ನು ತಂದಿದೆ. ಹೆಣ್ಣುಮಕ್ಕಳಷ್ಟೇ ಯಾಕೆ ಈ ಹಾಡಿಗೆ ಕುಣಿಯಬೇಕು ಮತ್ತು ಅವರಷ್ಟೇ ಯಾಕೆ ತಮನ್ನಾರ ಉಡುಪನ್ನು ಅನುಕರಿಸಬೇಕು ಎಂದು ಯೋಚಿಸಿದ ನೃತ್ಯಪ್ರಿಯ ಪುರುಷೋತ್ತಮರೊಬ್ಬರು ತಮನ್ನಾರನ್ನು ಅವರ ಉಡುಗೆಯನ್ನು ಸಾಧ್ಯವಾದಷ್ಟು ಅನುಕರಿಸಿದ್ದಾರೆ. ನೆಟ್ಟಿಗರಿಂದ ಮೆಚ್ಚುಗೆಯನ್ನೂ ಪಡೆದಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Gc gowda_oficial (@g.c.gowda_official)

ಜಿ.ಸಿ. ಗೌಡ ಎನ್ನುವವರು ಇನ್​ಸ್ಟಾಗ್ರಾಂನಲ್ಲಿ ಇವರ ವಿಡಿಯೋ ಹಂಚಿಕೊಂಡಿದ್ದಾರೆ. ನೋಡೋಕೆ ಸ್ವಲ್ಪ ವಿಚಿತ್ರವಾಗಿ ಕಂಡರೂ ಇವರ ಪ್ರೊಫೈಲ್ ನೋಡಿದ್ ಮೇಲೆ ತುಂಬಾ ಒಳ್ಳೆಯ ಡ್ಯಾನ್ಸರ್ ಅಂತ ಗೊತ್ತಾಯ್ತು ಎಂದು ಇವರು ಈ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಒಟ್ಟಿನಲ್ಲಿ ಈ ರೀಲ್​ ಎಲ್ಲಾ ರೀತಿಯಿಂದ ನೆಟ್ಟಿಗರನ್ನು ವಿಶೇಷವಾಗಿ ಸೆಳೆಯುತ್ತಿದೆ. ಅನೇಕರು ಇವರ ಮತ್ತಷ್ಟು ಡ್ಯಾನ್ಸ್​ ರೀಲ್ಸ್ ನೋಡಬೇಕೆಂದು ಇವರ ಪ್ರೊಫೈಲ್ ಲಿಂಕ್​ ಕೊಡಿ ಎಂದಿದ್ಧಾರೆ.

ಇದನ್ನೂ ಓದಿ : Viral: ಬಾರ್ಬಿ: ಗುಲಾಬಿ ಜ್ವರ ಮೋದಿ, ಸೋನಿಯಾ, ರಾಹುಲ್, ಲಾಲೂ ಇನ್ನ್ಯಾರಿಗೆಲ್ಲ?

ಈತನಕ ಈ ವಿಡಿಯೋ ಅನ್ನು ಸುಮಾರು 17,000 ಜನರು ಲೈಕ್ ಮಾಡಿದ್ದಾರೆ. 50,000ಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ವೀಕೆಂಡ್​ನಲ್ಲಿ ಈ ವಿಡಿಯೋ ನೋಡಿ ನನ್ನ ಮೂಡ್​ ಫ್ರೆಷ್ ಆಯ್ತು ಎಂದಿದ್ದಾರೆ ಕೆಲವರು. ಇವರು ತಮನ್ನಾರ ಅಣ್ತಮ್ಮ ಎಂದಿದ್ದಾರೆ ಒಬ್ಬರು. ತಮನ್ನಾಗೇ ಕಾಂಪಿಟಿಷನ್ನು ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ಸೂಪರ್​, ನನ್ನ ತಲೆನೋವು ಓಡಿ ಹೋಯ್ತು ಎಂದಿದ್ದಾರೆ ಮಗದೊಬ್ಬರು. ಹತ್ತು ಸಲವಾದರೂ ನೋಡಿದೆ ಈ ವಿಡಿಯೋ, ಕಾಸ್ಟ್ಯೂಮ್​ ಅಂತೂ ಸೂಪರ್​ ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:21 am, Mon, 31 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ