Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೈಲರ್; ‘ಇವರ ಈ ನೃತ್ಯವನ್ನು ಅದೆಷ್ಟು ಸಲ ನೋಡಿದೆನೆಂದು ಕೇಳಬೇಡಿ’

Rajinikanth: ಕಾವಾಲಾ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿರುವ ವೃತ್ತಿಪರ ನೃತ್ಯ ಕಲಾವಿದರು ಬಹಳ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ಪಕ್ವವಾದ ಭಾವಾಭಿನಯ ಮತ್ತು ನೃತ್ಯಕ್ಕೆ ನೆಟ್ಟಿಗರು ಶಭಾಷ್​ ಎನ್ನುತ್ತಿದ್ದಾರೆ.

Viral Video: ಜೈಲರ್; 'ಇವರ ಈ ನೃತ್ಯವನ್ನು ಅದೆಷ್ಟು ಸಲ ನೋಡಿದೆನೆಂದು ಕೇಳಬೇಡಿ'
ನೃತ್ಯ ಕಲಾವಿದೆ ಅಂಜನಾ ಚಂದ್ರನ್
Follow us
ಶ್ರೀದೇವಿ ಕಳಸದ
|

Updated on: Jul 28, 2023 | 12:00 PM

Kaavaala : ಎಲ್ಲಿ ನೋಡಿದರೂ ಜೈಲರ್​ (Jailer) ಹವಾ. ಸಾಮಾಜಿಕ ಜಾಲತಾಣಿಗರು, ನೃತ್ಯ ಕಲಾವಿದರು ಕಾವಾಲಾ ಹಾಡಿಗೆ ಹೆಜ್ಜೆ ಹಾಕುವುದರಲ್ಲಿ ಮುಳುಗಿದ್ದಾರೆ. ನಿನ್ನೆಯಷ್ಟೇ ಮಿಸ್​ ಇಂಡಿಯಾ ಕೇರಳ ಪ್ರಿಯಾಂಕಾ ಶೆಣೈ ಮೆನನ್​ ವೈರಲ್ ಆದ ವಿಡಿಯೋ ನೋಡಿದ್ದಿರಿ. ಇದಿಗ ಅಂಜನಾ ಚಂದ್ರನ್ ಎಂಬ ನೃತ್ಯಕಲಾವಿದೆಯ ನೃತ್ಯ ವೈರಲ್ ಆಗುತ್ತಿದೆ. ಈ ವಿಡಿಯೋ ಅನ್ನು ಅವರು ಜು. 16 ರಂದು ಹಂಚಿಕೊಂಡಿದ್ದರು. ಅನೇಕರು ಇವರ ನೃತ್ಯವೈಖರಿಯನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Anjana Chandran (@anjanac_choreo)

ನೀವು ಅದ್ಭುತವಾಗಿ ನರ್ತಿಸಿದ್ದೀರಿ, ಈ ವಿಡಿಯೋ ಅನ್ನು ಅದೆಷ್ಟು ಸಲ ನೋಡಿದೆ ಎಂದು ಮಾತ್ರ ಕೇಳಬೇಡಿ ಎಂದಿದ್ದಾರೆ ಒಬ್ಬರು. ಇದಕ್ಕಿಂತ ಇನ್ನೂ ಉತ್ತಮವಾಗಿ ನರ್ತಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ ಮತ್ತೊಬ್ಬರು. ತುಂಟತನದಿಂದ ಕೂಡಿದ ನಿಮ್ಮ ಹಾವಭಾವ ನನ್ನನ್ನು ಹಿಡಿದಿಟ್ಟಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ರಾಜೀನಾಮೆಗೆ ಒತ್ತಾಯ​; ಕಣ್ಣೀರುಗರೆಯುತ್ತ ಸತ್ಯ ಬಹಿರಂಗಪಡಿಸಿದ ಬೈಜೂಸ್​ ಉದ್ಯೋಗಿ

ಜು. 6ರಂದು ಬಿಡುಗಡೆಯಾದ ರಜನಿಕಾಂತ್ ಮತ್ತು ತಮನ್ನಾ ಭಾಟಿಯಾ (Rajinikanth, Tamanna Bhatia) ಅಭಿನಯದ ಜೈಲರ್ ಸಿನೆಮಾದ ಈ ಹಾಡನ್ನು ಅರುಣರಾಜ್​ ಕಾಮರಾಜ್​ ಬರೆದಿದ್ದಾರೆ. ಅನಿರುದ್ಧ ರವಿಚಂದ್ರನ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿಲ್ಪಾ ರಾವ್ ಈ ಗೀತೆಯನ್ನು ಹಾಡಿದ್ದಾರೆ.

ಇದನ್ನೂ ಓದಿ : Viral: ಆನ್​ಲೈನ್​ ಶಾಪಿಂಗ್​​; ಈ ದಾಳಿಂಬೆಯ ವಾಸನೆ, ರುಚಿ ಥೇಟ್​ ನೇಲ್​ಪಾಲಿಷ್​ನಂತೆ!

ಗಮನ ಸೆಳೆಯುತ್ತಿರುವ ವಿಷಯವೆಂದರೆ ತಮನ್ನಾ ಈ ಹಾಡಿನಲ್ಲಿ ಎಂಥ ಉಡುಗೆ ಧರಿಸಿದ್ದಾರೋ ಅದೇ ಥರದ ಬಣ್ಣ, ವಿನ್ಯಾಸವುಳ್ಳ ಉಡುಗೆಯನ್ನು ಧರಿಸಿ ಕಲಾವಿದರು ನರ್ತಿಸುತ್ತಿದ್ದಾರೆ. ಇನ್ನು ಭಾವಾಭಿವ್ಯಕ್ತಿಯೂ ಸಮಸಮವಾಗಿ ಸಿಂಕ್​ ಆಗುತ್ತಿದೆ. ನರ್ತಿಸಿದ ಕಲಾವಿದರು ನೂರಕ್ಕೆ ನೂರರಷ್ಟು ನ್ಯಾಯ ಸಲ್ಲಿಸುತ್ತಿದ್ದಾರೆ ಎಂದು ಎಂದು ನೆಟ್ಟಗರು ಪ್ರಶಂಸಿಸುತ್ತಿದ್ದಾರೆ.

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ