Viral: ಬಿಹಾರ್; ತನಗೆ ಎರಡೇ ಮಕ್ಕಳು ಎಂದು ಸುಳ್ಳು ಹೇಳಿದ್ದ ಛಾಪ್ರಾ ಮೇಯರ್ ಇದೀಗ ವಜಾ

Mayor : ಬಿಜೆಪಿ ಬೆಂಬಲಿತ ರಾಖಿ ಗುಪ್ತಾ ಎಂಬಿಎ ಪದವೀಧರೆ ಮತ್ತು ರೂಪದರ್ಶಿಯಾಗಿದ್ದರು. ಚುನಾವಣಾ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮುನ್ಸಿಪಲ್ ಕಾಯ್ದೆ 2007ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Viral: ಬಿಹಾರ್; ತನಗೆ ಎರಡೇ ಮಕ್ಕಳು ಎಂದು ಸುಳ್ಳು ಹೇಳಿದ್ದ ಛಾಪ್ರಾ ಮೇಯರ್ ಇದೀಗ ವಜಾ
ಛಾಪ್ರಾದ ಮೇಯರ್ ಸ್ಥಾನದಿಂದ ವಜಾಗೊಂಡ ರಾಖಿ ಗುಪ್ತಾ
Follow us
|

Updated on:Jul 28, 2023 | 3:04 PM

Bihar : ಛಾಪ್ರಾದ ಮೇಯರ್​ ರಾಖಿ ಗುಪ್ತಾ (Rakhi Gupta, Chhapra) ಅವರನ್ನು ಮೇಯರ್ ಸ್ಥಾನದಿಂದ ಕೆಳಗಿಳಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ತಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಸಾಬಿತಾದ ಹಿನ್ನೆಲೆಯಲ್ಲಿ ಗುರುವಾರದಂದು ರಾಜ್ಯ ಚುನಾವಣಾ ಆಯೋಗವು (Election Commission) ಈ ಕ್ರಮ ಕೈಗೊಂಡಿದೆ. ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ತಮಗೆ ಎರಡು ಮಕ್ಕಳಿವೆ ಎಂದು ಈಕೆ ಹೇಳಿದ್ದಾರೆ. ಆದರೆ ಇವರು ಮೂರು ಮಕ್ಕಳ ತಾಯಿ. ಲಕ್ನೋ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದ ಇವರು ಈ ಹಿಂದೆ ರೂಪದರ್ಶಿಯೂ ಆಗಿದ್ದರು. ರಾಜಕೀಯಕ್ಕೆ ಸೇರುವ ಮೊದಲು ಪತಿಯೊಂದಿಗೆ ಚಿನ್ನದ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು.

ಇದನ್ನೂ ಓದಿ : Viral: ಆನ್​ಲೈನ್​ ಶಾಪಿಂಗ್​​; ಈ ದಾಳಿಂಬೆಯ ವಾಸನೆ, ರುಚಿ ಥೇಟ್​ ನೇಲ್​ಪಾಲಿಷ್​ನಂತೆ!

ರಾಖಿ ಗುಪ್ತಾ ತಮ್ಮ ಮೂರನೇ ಮಗುವನ್ನು ಮಕ್ಕಳಿಲ್ಲದ ತಮ್ಮ ಸಂಬಂಧಿಯೊಬ್ಬರಿಗೆ ದತ್ತು ನೀಡಿದ್ದರು. ಆದರೆ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮಕ್ಕಳನ್ನು ದತ್ತು ಕೊಟ್ಟ ನಂತರವೂ ಆ ಮಗುವಿನ ತಂದೆತಾಯಿ ಹೆತ್ತವರೇ ಆಗುತ್ತಾರೆ ಎಂದು ಪರಿಗಣಿಸಲಾಗುತ್ತದೆ. ರಾಖಿ ಮೂರು ಮಕ್ಕಳ ತಾಯಿ ಎನ್ನುವ ಬಗ್ಗೆ ದಾಖಲೆಗಳ ಮೂಲಕ ಸಾಬೀತಾಗಿದ್ದು, ಶ್ರೀಯಾನ್ವಿ ಪ್ರಕಾಶ್, ಶಿವಾಂಶಿ ಪ್ರಕಾಶ್ ಮತ್ತು ಶ್ರೀಶ್ ಪ್ರಕಾಶ್ ಎನ್ನುವ ಮೂರು ಮಕ್ಕಳನ್ನು ಹೊಂದಿದ್ದಾರೆ ಎನ್ನುವ  ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ರಾಜೀನಾಮೆಗೆ ಒತ್ತಾಯ​; ಕಣ್ಣೀರುಗರೆಯುತ್ತ ಸತ್ಯ ಬಹಿರಂಗಪಡಿಸಿದ ಬೈಜೂಸ್​ ಉದ್ಯೋಗಿ ಬಿಹಾರ ಮುನ್ಸಿಪಲ್ ಕಾರ್ಪೊರೇಷನ್ ಆ್ಯಕ್ಟ್​ 2007 ಪ್ರಕಾರ ಮೂರು ಮಕ್ಕಳನ್ನು ಹೊಂದಿರುವ ಪೋಷಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ. ಕಾಯಿದೆ 2007 ರ ಸೆಕ್ಷನ್ 18 (1) (ಇ) ಪ್ರಕಾರ, 2008ರ ಏಪ್ರಿಲ್ 4ರ ನಂತರ ಮೂರನೇ ಮಗುವನ್ನು ಹೊಂದಿರುವ ಪೋಷಕರು ಚುನಾವಣೆಗೆ ಅನರ್ಹರು. ಇದಲ್ಲದೆ 2022 ರಲ್ಲಿ ಅಭ್ಯರ್ಥಿಗಳಿಗೆ ಹೊಸ ನಿಯಮಗಳನ್ನು ಜಾರಿ ಮಾಡಲಾಯಿತು. ಈ ಪ್ರಕಾರ ಮೂರನೇ ಮಗುವನ್ನು ಕಾನೂನುಬದ್ಧವಾಗಿ ದತ್ತು ಪಡೆದ ಪೋಷಕರು ಮಗುವಿನ ಅಸಲಿ ಪೋಷಕರೆಂದೇ ಪರಿಗಣಿಸಲಾಗುತ್ತದೆ. ಆದಕಾರಣ ಅವರು ಚುನಾವಣೆಗೆ ಅನರ್ಹರಾಗಿರುತ್ತಾರೆ. ಇನ್ನು ಮೊದಲ ಮಗುವಿನ ನಂತರ ಅವಳಿ ಮಕ್ಕಳಾಗಿದ್ದಲ್ಲಿ ಅಂಥ ಅಭ್ಯರ್ಥಿಯು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು.

ಇದನ್ನೂ ಓದಿ : Viral: ಚಿಪ್ಪುಮೀನಿನ ಖಾದ್ಯದಲ್ಲಿ ಸಿಕ್ಕ ಮುತ್ತು; ಅದನ್ನಾಕೆ ನಿಶ್ಚಿತಾರ್ಥದ ಉಂಗುರವಾಗಿಸಿಕೊಂಡಳು

2021ರಲ್ಲಿ ಐ-ಗ್ಲಾಮ್ ಮಿಸೆಸ್​​ ಬಿಹಾರ್​ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ರಾಖೀ ಪಡೆದುಕೊಂಡಿದ್ದರು. ಇವರ ಕುಟುಂಬಕ್ಕೆ ಯಾವುದೇ ರೀತಿಯ ರಾಜಕೀಯ ಹಿನ್ನೆಲೆ ಇಲ್ಲ. ಆದರೆ ಚಿನ್ನದ ಉದ್ಯಮಿಯಾಗಿರುವ ಪತಿ ವರುಣ್ ಪ್ರಕಾಶ್ ಅವರೊಂದಿಗೆ ಕೊರೊನಾ ಸಮಯದಲ್ಲಿ ಜನರ ಕಷ್ಟ ನೋವುಗಳಿಗೆ ಸ್ಪಂದಿಸಿ ಸಹಾಯ ಮಾಡಿದರು. ಈ ಮೂಲಕ ಬಿಜೆಪಿ ಒಡನಾಟವು ಬೆಳೆಯಿತು, ಕ್ರಮೇಣ ರಾಜಕೀಯದಲ್ಲಿ ಸಕ್ರಿಯರಾದರು.

ಇದನ್ನೂ ಓದಿ : Viral Video: ಜೈಲರ್; ಇವರ ಈ ನೃತ್ಯವನ್ನು ಅದೆಷ್ಟು ಸಲ ನೋಡಿದೆನೆಂದು ಕೇಳಬೇಡಿ

ಆನಂತರ ಬಿಜೆಪಿ ಬೆಂಬಲಿತ ರಾಖಿ ಗುಪ್ತಾ ಮೊದಲ ಸಲವೇ 17,389 ಮತಗಳಿಂದ ಭರ್ಜರಿ ಗೆಲುವನ್ನು ಸಾಧಿಸಿದರು. ಈ ಮೂಲಕ ಪ್ರತಿಸ್ಪರ್ಧಿ ರಫಿ ಇಕ್ಬಾಲ್​​ನನ್ನು ಭಾರೀ ಅಂತರದಲ್ಲಿ ಸೋಲಿಸಿದರು. ಆದರೆ ಇದೀಗ ರಾಜಕೀಯ ಭವಿಷ್ಯಕ್ಕಾಗಿ ಇವರು ತಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಇವರನ್ನು ಮೇಯರ್​ ಹುದ್ದೆಯಿಂದ ವಜಾ ಮಾಡಲಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:59 pm, Fri, 28 July 23

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ