Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಆನ್​ಲೈನ್​ ಶಾಪಿಂಗ್​​; ಈ ದಾಳಿಂಬೆಯ ವಾಸನೆ, ರುಚಿ ಥೇಟ್​ ನೇಲ್​ಪಾಲಿಷ್​ನಂತೆ!

Online Shopping : 'ಒಂದು ಚಮಚ ದಾಳಿಂಬೆಯನ್ನು ಬಾಯಿಗಿಡುತ್ತಿದ್ದಂತೆ ನಾಲಗೆಯೆಲ್ಲ ಉರಿದಂತಾಗಿ ತಕ್ಷಣವೇ ಉಗುಳಿದೆ. ಎರಡು ದಿನಗಳಾದರೂ ನಾಲಗೆ ಚುರುಗುಡುತ್ತಲೇ ಇತ್ತು' ಎಂದಿದ್ದಾರೆ ಇದನ್ನು ಪೋಸ್ಟ್​ ಮಾಡಿದ ಯೂಟ್ಯೂಬರ್.

Viral: ಆನ್​ಲೈನ್​ ಶಾಪಿಂಗ್​​; ಈ ದಾಳಿಂಬೆಯ ವಾಸನೆ, ರುಚಿ ಥೇಟ್​ ನೇಲ್​ಪಾಲಿಷ್​ನಂತೆ!
ನೇಲ್​ಪಾಲಿಶ್​ನ ವಾಸನೆ ಮತ್ತು ರುಚಿಯಂತಿರುವ ದಾಳಿಂಬೆ
Follow us
ಶ್ರೀದೇವಿ ಕಳಸದ
|

Updated on:Jul 27, 2023 | 6:39 PM

Pomegranate : ಅನುಕೂಲಕ್ಕಾಗಿ ಅನೇಕರು ಆನ್​​ಲೈನ್​ ಶಾಪಿಂಗ್​ಗೆ ಮೊರೆ ಹೋಗುವುದು ಸಾಮಾನ್ಯ. ಗ್ರಾಹಕರ ಅನುಕೂಲ ಮತ್ತು ಆಕಾಂಕ್ಷೆಗೆ ತಕ್ಕಂತೆ ಅನೇಕ ಕಂಪೆನಿಗಳು ಸುಲಿದ ಬಾಳೆಹಣ್ಣನ್ನೇ ಅವರ ಬಾಯಿಗೆ ಇಡುವಲ್ಲಿ ಪೈಪೋಟಿ ನಡೆಸುವುದಂತೂ ಈಗೀಗ ತೀರಾ ಸಾಮಾನ್ಯ. ಅಂತೆಯೇ ಕತ್ತರಿಸಿದ ತರಕಾರಿ, ಹಣ್ಣು, ಸೊಪ್ಪು ಮುಂತಾದವುಗಳು ನೇರ ಬಾಣಲೆಗೆ ಇಲ್ಲವೆ ಪ್ಲೇಟಿಗೆ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ಗಮನಿಸಿ. ಯೂಟ್ಯೂಬರ್ ಸಮದೀಶ್ ಭಾಟಿಯಾ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ (Swiggy Instamart) ನಿಂದ ಸುಲಿದ ದಾಳಿಂಬೆಯನ್ನು ಆರ್ಡರ್ ಮಾಡಿದ್ದಾರೆ. ಆದರೆ ಪ್ಯಾಕೆಟ್ ಬಿಚ್ಚುತ್ತಿದ್ದಂತೆ ಅವರ ಮೂಗಿಗೆ ನೇಲ್​ಪಾಲಿಷ್​ನ ವಾಸನೆ ಅಡರಿಬಿಟ್ಟಿದೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by samdish bhatia (@samdishbhatia)

ಸಮದೀಶ್​ ದಾಳಿಂಬೆಯನ್ನು ಬಾಯಿಗಿಟ್ಟಾಗ ಹುಳಿಹುಳಿ ಅನ್ನಿಸಿ ಉಗಿದೇ ಬಿಟ್ಟರು. ನಂತರ ಇನ್​ಸ್ಟಾಗ್ರಾಂನಲ್ಲಿ ತಮಗಾದ ಅನುಭವವನ್ನು ಫೋಟೋ ಸಮೇತ ಪೋಸ್ಟ್ ಮಾಡಿದರು. ‘ಒಂದು ಚಮಚ ದಾಳಿಂಬೆಯನ್ನು ಬಾಯಿಯೊಳಗೆ ಹಾಕಿಕೊಂಡೆ. ಆದರೆ ಇದು ದಾಳಿಂಬೆಯಂತಿರದೆ ಬೇರೆಯದೇ, ಆದರೆ ನನಗೆ ಗೊತ್ತಿರುವಂಥ ವಾಸನೆಯಿಂದ ಕೂಡಿತ್ತು. ಅದು ಏನೆಂದರೆ ನೇಲ್​ಪಾಲಿಷ್​! ಇದನ್ನು ತಕ್ಷಣವೇ ಉಗುಳಿದೆನಾದರೂ ಎರಡು ದಿನಗಳವರೆಗೆ ನನ್ನ ನಾಲಗೆ ಸುಟ್ಟಂತೆ ಚುರುಗುಡುತ್ತಲೇ ಇತ್ತು’ ಎಂದಿದ್ದಾರೆ.

ಇದನ್ನೂ ಓದಿ : Viral Video: ತುಮಕೂರಿನ ಈ ಮಗ್ಗಿಬಾಲೆಗೆ 45ರ ಮಗ್ಗಿಯೂ ನೀರುಕುಡಿದಂತೆ!

ನಿನ್ನೆ ಹಂಚಿಕೊಂಡ ಈ ಪೋಸ್ಟ್​ ಅನ್ನು ಈತನಕ ಸುಮಾರು 5,000 ಜನರು ಲೈಕ್ ಮಾಡಿದ್ದಾರೆ. ಆನ್​ಲೈನ್​ನಲ್ಲಿ ತಮಗಾದ ಅನುಭವಗಳನ್ನು ಅನೇಕರು ಹಂಚಿಕೊಂಡಿದ್ದಾರೆ. ಬಿಡಿಸಿಟ್ಟ ಹಣ್ಣುಗಳನ್ನು ಪ್ಯಾಕ್​ ಮಾಡಿಟ್ಟು ಬಹಳ ದಿನಗಳಾದಾಗ ರಾಸಾಯನಿಕ ಪ್ರಕ್ರಿಯೆಗಳು ನಡೆದು ಹೀಗೆ ಆಗುವ ಸಂಭವ ಇರುತ್ತದೆ ಎಂದು ಕೆಲವರು ಹೇಳಿದ್ದಾರೆ. ಅಲ್ಲದೆ, ತಾಜಾತನದಿಂದ ಕೂಡಿರಲೆಂದು ಹಾಕಿಟ್ಟ ಪ್ರಿಸರ್ವೇಟಿವ್​ನಿಂದಲೂ ಹೀಗೆ ವಾಸನೆ ಬರುವ ಸಾಧ್ಯತೆ ಇದೆ ಎಂದಿದ್ಧಾರೆ ಒಬ್ಬರು.

ಇದನ್ನೂ ಓದಿ : Viral Video: ಹರಿಯಾಣ; 13 ಗಂಟೆಗಳ ಕ್ಯಾಬ್​ರೈಡ್​; ಚಾಲಕನಿಗೆ ಹಣ ಕೊಡಲು ನಿರಾಕರಿಸಿದ ಮಹಿಳೆ

ಇದೇ ಅರ್ಬನ್​ ಹಾರ್ವೆಸ್ಟ್ ನಿಂದ ಪಪ್ಪಾಯಿಯನ್ನು ಆರ್ಡರ್ ಮಾಡಿದ್ದೆ. ಕೆಲ ಕಾರಣಗಳಿಂದ ನಾನದನ್ನು ತಿನ್ನದೇ ಈತನಕವೂ ಫ್ರಿಡ್ಜ್​ನಲ್ಲಿಟ್ಟಿದ್ದೇನೆ. ಈಗದನ್ನು ತೆಗೆದು ಅದರಿಂದ ಯಾವ ವಾಸನೆ ಹೊಮ್ಮುತ್ತದೆ ಎಂದು ಪತ್ತೆ ಹಚ್ಚಲು ಕುತೂಹಲ ಉಂಟಾಗುತ್ತಿದೆ ಎಂದು ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಅನ್ನು ಟ್ಯಾಗ್ ಮಾಡಿದ್ದಾರೆ ಒಬ್ಬರು. ಪೋಸ್ಟ್​ ವೈರಲ್ ಆಗುತ್ತಿದ್ದಂತೆ ಅರ್ಬನ್​ ಹಾರ್ವೆಸ್ಟ್, ‘ನೈಸರ್ಗಿಕವಾಗಿ ಸಿಗುವ ದಾಳಿಂಬೆಯ ರುಚಿಯನ್ನು, ಘಮವನ್ನು ಬದಲಾಯಿಸಿಲ್ಲ ಮತ್ತು ನೇಲ್​ ಪಾಲಿಶ್​ನಲ್ಲಿಯೇ ದಾಳಿಂಬೆಯ ಪರಿಮಳ ಅಡಕವಾಗಿರುತ್ತದೆ. ಈ ವಿಚಾರವಾಗಿ ಭಾಟಿಯಾ ಅವರನ್ನು ಸಂಪರ್ಕಿಸಲು ಹಲವಾರು ಬಾರಿ ಪ್ರಯತ್ನಿಸಿದೆವು, ಆದರೆ ಅವರು  ಪ್ರತಿಕ್ರಿಯಿಸಿಲ್ಲ. ಈ ವಿಷಯವಾಗಿ ಅವರನ್ನು ನೇರ ಸಂಪರ್ಕಿಸಿ ಪರಿಹರಿಸಲು ಇಚ್ಛಿಸುತ್ತೇವೆ’ ಎಂದು ತಿಳಿಸಿದೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:34 pm, Thu, 27 July 23

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ