Viral Video: ರಾಜೀನಾಮೆಗೆ ಒತ್ತಾಯ​; ಕಣ್ಣೀರುಗರೆಯುತ್ತ ಸತ್ಯ ಬಹಿರಂಗಪಡಿಸಿದ ಬೈಜೂಸ್​ ಉದ್ಯೋಗಿ

Salary Withheld : ಬೈಜೂಸ್​​ ಉದ್ಯೋಗಿ ಆಕಾಂಶಾ ಖೇಮ್ಕಾ ಅವರಿಗೆ ಎಡ್​ಟೆಕ್​ ಕಂಪೆನಿಯು ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ. ಇಲ್ಲವಾದಲ್ಲಿ ಸಂಬಳ ತಡೆಹಿಡಿಯಲಾಗುವುದು ಎಂದು ಬೆದರಿಸಿದೆ.

Viral Video: ರಾಜೀನಾಮೆಗೆ ಒತ್ತಾಯ​; ಕಣ್ಣೀರುಗರೆಯುತ್ತ ಸತ್ಯ ಬಹಿರಂಗಪಡಿಸಿದ ಬೈಜೂಸ್​ ಉದ್ಯೋಗಿ
ಆಕಾಂಶಾ ಖೇಮ್ಕಾ
Follow us
ಶ್ರೀದೇವಿ ಕಳಸದ
|

Updated on:Jul 28, 2023 | 10:58 AM

BYJUs : ‘ಎಡ್​ಟೆಕ್​ (Edtech)  ಕಂಪೆನಿಯು ನನಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದೆ. ಅಕಸ್ಮಾತ್​ ರಾಜೀನಾಮೆ (Resignation) ನೀಡಲಿದ್ದಲ್ಲಿ, ಆ.1ರಿಂದ ಸಂಬಳವನ್ನು ಕಡಿತಗೊಳಿಸಲಾಗುವುದು ಎಂದೂ ಬೆದರಿಕೆ ಒಡ್ಡಿದೆ. ಈ ಹಿನ್ನೆಲೆಯಲ್ಲಿ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆದರೆ ನನ್ನ ದುಡಿಮೆಯಿಂದಲೇ ನನ್ನ ಇಡೀ ಮನೆ ನಡೆಯುತ್ತದೆ. ಈ ಕಂಪೆನಿಯಿಂದ ಬರಬೇಕಾಗಿರುವ ನನ್ನ ಹಣ ನನಗೆ ಸಿಗದಿದ್ದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬೈಜೂಸ್​ನಲ್ಲಿ ಶಿಕ್ಷಣ ತಜ್ಞೆಯಾಗಿರುವ ಆಕಾಂಶಾ ಖೇಮ್ಕಾ ಮನನೊಂದು, ಕಣ್ಣೀರು ಹಾಕುತ್ತ ಈ ವಿಷಯವನ್ನು ವಿಡಿಯೋ ಮಾಡಿ ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರು ಆಕಾಂಕ್ಷಾ ಅವರಿಗೆ ಸಮಾಧಾನ ಹೇಳುತ್ತ ಧೈರ್ಯ ತುಂಬುತ್ತಿದ್ದಾರೆ.

‘ನನ್ನ ನಡೆವಳಿಕೆ ಮತ್ತು ಕಾರ್ಯಕ್ಷಮತೆಯ ಹಿನ್ನೆಲೆಯಲ್ಲಿ ಮ್ಯಾನೇಜರ್​ ನನ್ನನ್ನು ಕೆಲಸದಿಂದ ವಜಾ ಮಾಡಿರುವುದಾಗಿ ಹೇಳಿದ್ದಾರೆ. ಈ ವಿಷಯವಾಗಿ ಸರ್ಕಾರದಿಂದ ಬೆಂಬಲವನ್ನು ನಿರೀಕ್ಷಿಸುತ್ತೇನೆ. ನನಗೆ ಈಗ ಯಾವುದೇ ದಾರಿಗಳು ಕಾಣುತ್ತಿಲ್ಲ, ಸೂಕ್ತ ನ್ಯಾಯ ದೊರೆಯದಿದ್ದರೆ ಸಾವಿಗೆ ಶರಣಾಗಬೇಕಾಗುತ್ತದೆ, ದಯವಿಟ್ಟು ಸಹಾಯ ಮಾಡಿ. ಜು. 28 ರೊಳಗೆ ನಾನು ಈ ಕೆಲಸವನ್ನು ಬಿಡಬೇಕು ಅಲ್ಲದೆ ಆಗಸ್ಟ್​ 1ರಂದು ನನಗೆ ಸಂಬಳವನ್ನೂ ನೀಡಲಾಗುವುದಿಲ್ಲ ಎಂದು ಮೀಟಿಂಗ್​ನಲ್ಲಿ ಹೇಳಿದ್ದಾರೆ. ಆದರೆ ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಾಲ ಬೇರೆ ಬಾಕಿ ಇದೆ. ಈಗ ಬೈಜೂಸ್​ ಕೊಡಬೇಕಾಗಿರುವ ಹಣವನ್ನು ಕೊಡದಿದ್ದರೆ ಹೇಗೆ ಜೀವನ ಸಾಗಿಸಬೇಕು? ಎಂದಿದ್ದಾರೆ ಆಕೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ತುಮಕೂರಿನ ಈ ಮಗ್ಗಿಬಾಲೆಗೆ 45ರ ಮಗ್ಗಿಯೂ ನೀರುಕುಡಿದಂತೆ!

ಈ ವಿಡಿಯೋ ಅನ್ನು ಆಕೆ ಲಿಂಕ್ಡ್​ಇನ್​ನಲ್ಲಿ ಅಪ್​ಲೋಡ್​ ಮಾಡಿದಾಗಿನಿಂದ ಸಾಮಾಜಿಕ ಜಾಲತಾಣಿಗರು ಅವರಿಗೆ ಬೆಂಬಲಿಸುತ್ತಿದ್ದಾರೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಹೊಸ ಉದ್ಯೋಗ ಹುಡುಕಲು ನಿಮಗೆ ಸಹಾಯ ಬೇಕಾದರೆ ನನ್ನನ್ನು ಸಂಪರ್ಕಿಸಿ. ದುಡುಕಬೇಡಿ, ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ ಹಲವಾರು ಜನ. ನಿಮಗೆ ಆ ದೇವರು ಒಳ್ಳೆಯ ತಿರುವನ್ನು ಕೊಡಲಿ ಎಂದು ಹಾರೈಸಿದ್ದಾರೆ ಅನೇಕರು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ 

Published On - 10:56 am, Fri, 28 July 23