Viral: ಸ್ವಿಗ್ಗಿ ಇನ್ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು; ನೆಟ್ಟಿಗರ ಒತ್ತಾಯ
Resignation Letter : ಈ ಉದ್ಯೋಗಿ ಖಂಡಿತ ಪ್ರತಿಭಾವಂತರು ಮತ್ತು ಬೌದ್ಧಿಕ ಸಾಮರ್ಥ್ಯವುಳ್ಳವರು. ಬಹುಶಃ ಮೇಲಧಿಕಾರಿಗೆ ಅಭದ್ರತೆ ಮತ್ತು ಅರಿವಿನ ಕೊರತೆ ಇದ್ದಿರಬೇಕು. ಇಂಥವರನ್ನು ಕಂಪೆನಿ ಉಳಿಸಿಕೊಳ್ಳಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.
Swiggy Instamart : ರಾಜೀನಾಮೆ ಯಾಕೆ ನೀಡುತ್ತಾರೆ? ಆರೋಗ್ಯಕರ ಕೆಲಸದ ವಾತಾವರಣ, ತಕ್ಕಂಥ ಸಂಬಳ ಮತ್ತು ಸಾಮರ್ಥ್ಯ, ಕನಸುಗಳಿಗೆ ಪೂರಕವಾದ ಕೆಲಸ ಸಿಗದೇ ಇದ್ಧಾಗ. ಹೀಗಿದ್ದಾಗಲೂ ಕೆಲವರು ವೈಯಕ್ತಿಕ ಕಾರಣಗಳನ್ನು ಬರೆದು ರಾಜೀನಾಮೆ ಸಲ್ಲಿಸುತ್ತಾರೆ. ಇನ್ನೂ ಕೆಲವರು ಕಚೇರಿಯಲ್ಲಿ ತಮಗಾದ ನೋವು ಬೇಸರವನ್ನು ವ್ಯಕ್ತಪಡಿಸಿ ರಾಜೀನಾಮೆ ಕೊಡುತ್ತಾರೆ. ಮತ್ತೂ ಕೆಲವರು ಕೊಡಬೇಕಾದುದನ್ನು ಶಾಲ್ನಲ್ಲಿ ಸುತ್ತಿ ಕೊಟ್ಟು, ಅಲ್ಲಿಯೂ ತಮ್ಮ ಸೃಜಶೀಲತೆ ಮೆರೆಯುತ್ತಾರೆ. ಇದೀಗ ಟ್ವಿಟರ್ನಲ್ಲಿ ವೈರಲ್ ಆಗುತ್ತಿರುವ ರಾಜೀನಾಮೆ ಪತ್ರ ಕೊನೆಯ ವರ್ಗಕ್ಕೆ ಸೇರಿದ್ದು.
how to quit your job using Instamart ?♀️ pic.twitter.com/CyhSDyvWaq
ಇದನ್ನೂ ಓದಿ— Swiggy Instamart (@SwiggyInstamart) July 24, 2023
ಸ್ವಿಗ್ಗಿ ಇನ್ಸ್ಟಾಮಾರ್ಟ್ ಸ್ವತಃ ಈ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದೆ. ಸಾಮಾನ್ಯವಾಗಿ ಅನೇಕರು ರಾಜೀನಾಮೆ ಪತ್ರ ಬರೆಯಲು ಟೆಂಪ್ಲೆಟ್ಗಾಗಿ ಗೂಗಲ್ನ ಮೊರೆ ಹೋಗುವುದುಂಟು. ಆದರೆ ಪ್ರತಿಭೆ, ನಿಷ್ಠೆ, ಶ್ರದ್ಧೆಯುಳ್ಳ ಉದ್ಯೋಗಿ ಏನೇ ಮಾಡಿದರೂ ಅದಕ್ಕೆ ಸೃಜನಶೀಲ ಸ್ಪರ್ಶವಿದ್ದೆ ಇರುತ್ತದೆ. ಈ ಪತ್ರದಲ್ಲಿ ಇನ್ಸ್ಟಾನಲ್ಲಿ ಸಿಗುವ ನಿತ್ಯಬಳಕೆಯ ವಸ್ತುಗಳನ್ನು ಉಪಯೋಗಿಸಿ ರೀಬಸ್ ಸ್ಟೋರಿ ಮಾದರಿಯಲ್ಲಿ ಅರ್ಥಪೂರ್ಣವಾಗಿ ವಿನ್ಯಾಸ ಮಾಡಲಾಗಿದೆ. ಹೀಗಿದ್ದಮೇಲೆ ನೆಟ್ಟಿಗರಿಗೆ ಪ್ರತಿಕ್ರಿಯಿಸಲು ಉತ್ಸಾಹ ಉಕ್ಕದೇ ಇದ್ದೀತೇ?
ಇದನ್ನೂ ಓದಿ : Viral Video: ಪಾಕಿಸ್ತಾನ; ಇವರು ತಮ್ಮ ಹಳ್ಳಿಯನ್ನು ತಲುಪಲು ಈ ಅಪಾಯಕಾರಿ ಸೇತುವೆಯ ಮೇಲೆ ನಡೆಯಲೇಬೇಕು
ಎರಡು ದಿನಗಳ ಹಿಂದೆ ಇದನ್ನು ಟ್ವೀಟ್ ಮಾಡಲಾಗಿದ್ದು, ಸುಮಾರು 90,000 ಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. 240 ಜನರು ರೀಟ್ವೀಟ್ ಮಾಡಿದ್ದಾರೆ. ಈ ಸೃಜನಶೀಲತೆ ಔಟ್ ಆಫ್ ದಿ ಬಾಕ್ಸ್ ಎಂದಿದ್ದಾರೆ ಒಬ್ಬರು. ಇದು ಬಹಳ ಮುದ್ದಾದ ಪತ್ರ ಎಂದು ಇನ್ನೊಬ್ಬರು. ಇವರ ರೆಸ್ಯೂಮ್ ಹೇಗಿದ್ದಿರಬೇಡ!? ಎಂದು ಕೇಳಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಅಣ್ಣತಂಗಿಯ ಜಬರ್ದಸ್ತ್ ಡ್ಯಾನ್ಸ್; ಉತ್ಸಾಹದಲ್ಲಿ ನೆಟ್ಟಿಗರು
ಹಾಗೆ ನೋಡಿದರೆ ಈ ಉದ್ಯೋಗಿಯನ್ನು ಕಂಪೆನಿಯು ಕಳೆದುಕೊಳ್ಳಬಾರದು, ಏಕೆಂದರೆ ರಾಜೀನಾಮೆ ಪತ್ರವನ್ನೇ ಇಷ್ಟು ಸೃಜನಶೀಲತೆಯಿಂದ ಬರೆದಿದ್ದಾರೆ ಎಂದರೆ ಅವರೊಳಗಿನ ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಗಮನಿಸಬೇಕು. ಅವರಿಗೆ ತಕ್ಕದಾದ ಹುದ್ದೆ ಮತ್ತು ಸಂಬಳ ನೀಡಿ ಗೌರವಿಸಬೇಕು. ಇದರಿಂದ ಪರಸ್ಪರ ಒಳ್ಳೆಯದಾಗುತ್ತದೆ. ಯಾರಿಂದ ಯಾವ ಕೆಲಸವನ್ನು ಹೇಗೆ ತೆಗೆಯಬೇಕು ಎನ್ನುವುದೂ ಕೂಡ ಸೃಜನಶೀಲತೆಗೆ ಸಂಬಂಧಿಸಿದ್ದು!
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:48 am, Wed, 26 July 23