Viral Video: ಅಣ್ಣತಂಗಿಯ ಜಬರ್ದಸ್ತ್ ಡ್ಯಾನ್ಸ್; ಉತ್ಸಾಹದಲ್ಲಿ ನೆಟ್ಟಿಗರು
Dance : ಈಗಲೇ ನನ್ನ ಅಕ್ಕತಂಗಿಯರೊಂದಿಗೆ ಡ್ಯಾನ್ಸ್ ಮಾಡಬೇಕು ಎನ್ನಿಸುತ್ತಿದೆ ಎಂದು ಒಬ್ಬರು. ಈ ವೀಕೆಂಡ್ನಲ್ಲಿ ತಂಗಿಯನ್ನು ಮನೆಗೆ ಆಹ್ವಾನಿಸುತ್ತೇನೆ, ನಿಮ್ಮ ನೃತ್ಯದಿಂದ ಸ್ಫೂರ್ತಿಗೊಂಡಿದ್ದೇನೆ ಎಂದು ಇನ್ನೊಬ್ಬರು. ನೀವು?
Brother Sister : ಸ್ನೇಹಿತರು, ಪ್ರೇಮಿಗಳು, ಗಂಡ ಹೆಂಡತಿ ಜೋಡಿನೃತ್ಯ ಮಾಡುವುದನ್ನು ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಣ್ಣತಂಗಿ ಭಲೇ ಹುರುಪಿನಿಂದ ಡ್ಯಾನ್ಸ್ (Dance) ಮಾಡಿದ್ದಾರೆ. ಈತನಕ ಸುಮಾರು 9 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 3 ಲಕ್ಷ ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಈ ಡ್ಯಾನ್ಸ್ ಬಹಳ ವಿಶೇಷವಾಗಿಯೇ ಇರಬೇಕು ಎಂದು ನೀವಂದುಕೊಳ್ಳುತ್ತಿದ್ದೀರಿ ಅಲ್ಲವೆ? ನೋಡಿಬಿಡಿ!
ಇದನ್ನೂ ಓದಿView this post on Instagram
ಫ್ಯಾಮಿಲಿ ಕ್ರ್ಯೂ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ರಸ್ತೆಯ ಮೇಲೆ ಇವರು ಹೀಗೆ ಫ್ರೀ ಸ್ಟೈಲ್ನಲ್ಲಿ ಡ್ಯಾನ್ಸ್ ಮಾಡಿರುವುದನ್ನು ನೋಡಿ ಈ ಚಳಿಮಳೆಯಲ್ಲಿ ನೆಟ್ಟಿಗರು ಆಹಾ ಎನ್ನುತ್ತಿದ್ದಾರೆ, ನಿಮ್ಮ ಈ ಉತ್ಸಾಹ ನಮ್ಮನ್ನೂ ಕುಣಿಯಲು ಪ್ರೇರೇಪಿಸುತ್ತಿದೆ ಎನ್ನುತ್ತಿದ್ದಾರೆ. ನಿಮ್ಮ ಎನರ್ಜಿ, ಸ್ಟೆಪ್ಸ್, ಎಕ್ಸ್ಪ್ರೆಷನ್ ಎಲ್ಲವೂ ಸೂಪರ್ ಎಂದಿದ್ಧಾರೆ ಒಬ್ಬರು. ಅದ್ಭುತವಾದ ಜೋಡಿ ನಿಮ್ಮದು. ನಾನು ಸ್ವಲ್ಪ ಕುಳ್ಳಗೆ ದಪ್ಪಗೆ, ನನಗೆ ಡ್ಯಾನ್ಸ್ ಗೊತ್ತಿದ್ದರೂ ಏನೋ ಸಂಕೋಚ. ಆದರೆ ಇದೀಗ ನಿಮ್ಮ ನೃತ್ಯ ನೋಡಿ ನನಗೂ ರೀಲ್ಸ್ ಮಾಡಬೇಕು ಎಂದೆನ್ನಿಸುತ್ತಿದೆ ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral Video: 10 ಬಿಯರ್ ಮಗ್ಗಳನ್ನು ತಲೆಯ ಮೇಲಿಟ್ಟುಕೊಂಡು ಮೆಟ್ಟಿಲೇರಿದ ಈ ವ್ಯಕ್ತಿ
ಸಿಸ್ ಅಂಡ್ ಬ್ರೋ ನೀವು ರಾಕಿಂಗ್! ಕೊನೆಯತನಕವೂ ನಿಮ್ಮ ಬಾಂಧವ್ಯ ಹೀಗೇ ಇರಲಿ ಎಂದು ಹಾರೈಸಿದ್ದಾರೆ ಅನೇಕರು. ಹುಷಾರು ರೀಲ್ಸ್ ಮಾಡುವಾಗ, ರಸ್ತೆಯಲ್ಲಿ ಗಾಡಿಗಳು ಓಡಾಡುತ್ತಿರುತ್ತವೆ. ಇದೀಗ ಪೊಲೀಸರು ವೈರಲ್ ಆದ ಇಂಥ ವಿಡಿಯೋಗಳನ್ನು ಗಮನಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಜೂ. 2ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಅಂದಿನಿಂದಲೂ ಇಂದಿನವರೆಗೂ ಇದನ್ನು ನೋಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ