Viral Video: ಗುಜರಾತ್; ರಸ್ತೆಯಲ್ಲಿ ಗರ್ಭಾನೃತ್ಯ ಮಾಡಿದ ರೀಲಿಗರನ್ನು ಜೈಲಿಗೆ ಅಟ್ಟಿದ ಪೊಲೀಸರು
Reels : ಸಂಚಾರಿ ನಿಯಮ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ರೀಲ್ಸ್ ಮಾಡಿದ ಹಿನ್ನೆಲೆಯಲ್ಲಿ ಜಾಮನಗರ ಪೊಲೀಸರು ಗರ್ಭಾ ಟೀಮ್ನ ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
Gujarat : ಸಾಮಾಜಿಕ ಜಾಲತಾಣಗಳಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್ ಮಾಡುವವರ ಬಗ್ಗೆ ಆಗಾಗ ಟೀಕೆಟಿಪ್ಪಣಿಗಳು ಕೇಳಿ ಬರುತ್ತಲೆ ಇರುತ್ತವೆ. ಕೆಲವೆಡೆ ಪೊಲೀಸರು ಕ್ರಮ ಕೈಗೊಂಡ ಉದಾಹರಣೆಗಳೂ ಇವೆ. ನೆಟ್ಟಿಗರಂತೂ ಈ ಬಗ್ಗೆ ದನಿ ಎತ್ತದೇ ಇರುವ ದಿನವೇ ಇಲ್ಲ. ಆದರೂ ರೀಲಿಗರು ಮಾತ್ರ ತಮಗೇನೂ ಕೇಳುತ್ತಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಹಾಗೆಂದು ಅವರು ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳದೇ ಇರಲಾರರು. ಈ ಹಿನ್ನೆಲೆಯಲ್ಲಿ ಗುಜರಾತಿನ ಜಾಮನಗರದ (Jamnagar) ಬಳಿ ಇರುವ ಬೇಡಿ ಬಂದರ್‌ನ ರಸ್ತೆಮಧ್ಯದಲ್ಲಿ ಗರ್ಭಾ ನೃತ್ಯ (Garba Dance) ರೀಲ್ ಮಾಡಿದವರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಇದನ್ನೂ ಓದಿ : Viral Video: 3 ಮೊಟ್ಟೆಗಳನ್ನು ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ನಲ್ಲಿ ಹಾಕಿ, ಮುಂದೇನಾಗುತ್ತದೆ ನೋಡಿ
ಸಂಚಾರಿ ನಿಯಮ ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ರೀಲ್ಸ್ ಮಾಡಿ ಹಿನ್ನೆಲೆಯಲ್ಲಿ ಪೊಲೀಸರು ಪ್ರಸ್ತುತ ಗರ್ಭಾ ಟೀಮ್ನ ಮ್ಯಾನೇಜರ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಇಲ್ಲಿಯ ಇಸ್ಕಾನ್ ಸೇತುವೆಯ ಬಳಿ ಅಪಘಾತವಾದ ನಂತರವೂ ರೀಲಿಗರು ಯಾವುದೇ ರೀತಿಯ ಪಾಠವನ್ನು ಕಲಿಯಲಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಇದನ್ನೂ ಓದಿ : Viral: ವರ್ಕ್ ಫ್ರಂ ಹೋಮ್ ಮಾಡಿದರೆ ಕೆಲಸದಿಂದ ವಜಾ ಮಾಡುವುದಾಗಿ ಮೇಲಧಿಕಾರಿ ಬೆದರಿಕೆ
ಕಾರು ಬಸ್ಸು ಮತ್ತು ಭಾರೀ ವಾಹನಗಳ ಓಡಾಟದ ಮಧ್ಯೆಯೇ ಪ್ರಾಣವನ್ನು ಪಣಕ್ಕಿಟ್ಟು ಈ ತಂಡದ ಸದಸ್ಯರು ಗರ್ಭಾ ನೃತ್ಯವನ್ನು ಮಾಡಿದ್ದಾರೆ. ಇಂಥ ಅಸುರಕ್ಷಿತ ನಡೆಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ರಾಸರಸಿಯಾ ಗರ್ಭಾ ಅಕಾಡೆಮಿಯ ಸದಸ್ಯರದ್ದು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಸಾರ್ವಜನಿಕ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ ರೀಲ್ಸ್ ಮಾಡಿದ ಹಿನ್ನೆಲೆಯಲ್ಲಿ ಈ ಅಕಾಡೆಮಿ ನಿರ್ವಹಿಸುವವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ಧಾರೆ.
ಇದನ್ನೂ ಓದಿ : Viral: ತಲೆಯ ಮೇಲೆ ಕೂರಿಸಿಕೊಳ್ಳೋದು ಎಂದರೆ ಇದೇ!?
ಸಾರ್ವಜನಿಕ ನಿಯಮಗಳನ್ನು ಗಾಳಿಗೆ ತೂರಿ ಮತ್ತು ಪ್ರಾಣವನ್ನು ಒತ್ತೆ ಇಟ್ಟುಕೊಂಡು ರೀಲ್ಸ್ ಮಾಡಿ ಸಾಧಿಸುವುದಾದರೂ ಏನಿದೆ? ಯಾಕೆ ರೀಲಿಗರು ಈ ವಿಷಯವಾಗಿ ಗಮನ ವಹಿಸುತ್ತಿಲ್ಲ ಎನ್ನುವುದು ಮಾತ್ರ ಬಗೆಹರಿಯಲಾಗದ ಸಮಸ್ಯೆಯಾಗಿದೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:25 pm, Tue, 25 July 23