Viral: ವರ್ಕ್​ ಫ್ರಂ ಹೋಮ್​ ಮಾಡಿದರೆ ಕೆಲಸದಿಂದ ವಜಾ ಮಾಡುವುದಾಗಿ ಮೇಲಧಿಕಾರಿ ಬೆದರಿಕೆ

Gaslighting : ನಿಮ್ಮ ಬಾಸ್​ ಗ್ಯಾಸ್​ಲೈಟಿಂಗ್ ಮಾಡುತ್ತಿದ್ದಾರೆ. ನಿಮ್ಮ ನೈತಿಕತೆಯನ್ನು ಮತ್ತು ಚೈತನ್ಯವನ್ನು ಗಾಸಿ ಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬೇಗ ಈ ನರಕದಿಂದ ಹೊರಬನ್ನಿ ಎಂದು ಅನೇಕರು ಸಲಹೆ ನೀಡುತ್ತಿದ್ದಾರೆ.

Viral: ವರ್ಕ್​ ಫ್ರಂ ಹೋಮ್​ ಮಾಡಿದರೆ ಕೆಲಸದಿಂದ ವಜಾ ಮಾಡುವುದಾಗಿ ಮೇಲಧಿಕಾರಿ ಬೆದರಿಕೆ
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 25, 2023 | 1:30 PM

Work From Home : ಕೊವಿಡ್​ ಸಮಯದಲ್ಲಿ ಬಹುಪಾಲು ಜನರು ವರ್ಕ್​ ಫ್ರಂ ಹೋಂನಲ್ಲಿ ಉಳಿದರು. ಇದಕ್ಕಿಂತ ಮೊದಲು ಉದ್ಯೋಗಿಗಳು ಅನಾರೋಗ್ಯಕ್ಕೆ ಈಡಾದಾಗ ಅಥವಾ ಕಚೇರಿಗೆ ಓಡಾಡಲು ಕಷ್ಟವಾದಾಗ ವರ್ಕ್​ ಫ್ರಂ ಹೋಮ್​ ಆಯ್ಕೆಯಡಿ ಕೆಲಸ ಮಾಡಲು ಅನುವು ಮಾಡಿಕೊಡಲಾಗುತ್ತಿತ್ತು. ಮತ್ತಿದು ಈಗಲೂ ಮುಂದುವರಿದಿದೆ. ಆದರೆ ಕೆಲ ಕಂಪೆನಿಗಳು ಬೇಡವಾದ ಉದ್ಯೋಗಿಗಳನ್ನು ವಜಾಗೊಳಿಸಲು ವರ್ಕ್​ ಫ್ರಂ ಹೋಮ್​ ರದ್ದತಿಯನ್ನು ತಂತ್ರದಂತೆ ಬಳಸಿಕೊಂಡರು, ಬಳಸಿಕೊಳ್ಳುತ್ತಿದ್ಧಾರೆ. ಈ ಹಿನ್ನೆಲೆಯಲ್ಲಿ ರೆಡ್ಡಿಟ್ ನಲ್ಲಿ ವೈರಲ್ ಆಗುತ್ತಿರುವ ಪೋಸ್ಟ್​ ಗಮನ ಸೆಳೆಯುತ್ತಿದೆ. ‘ನನ್ನ ಮೇಲಧಿಕಾರಿಯು (Boss) ವರ್ಕ್​ ಫ್ರಂ ಹೋಂ ಆಯ್ಕೆಯನ್ನು ರದ್ದು ಮಾಡಿದ್ದು, ಆದಷ್ಟು ಬೇಗ ಹೊಸ ಕೆಲಸವನ್ನು ಹುಡುಕಿಕೊಳ್ಳಲು ನನಗೆ ಹೇಳಿದ್ದಾರೆ’ ಎಂದು ಉದ್ಯೋಗಿಯೊಬ್ಬರು ಅಸಹಾಯಕರಾಗಿ ಪೋಸ್ಟ್ ಮಾಡಿದ್ದಾರೆ. ಈ ವಿಷಯ ನೆಟ್ಟಿಗರಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

My boss revoked my work from home day and told me to hurry up and find a new job. by u/AHogwartsDropout394 in antiwork

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರೆಡ್ಡಿಟ್​ನ ಖಾತೆದಾರರೊಬ್ಬರು, ಅನಾರೋಗ್ಯದ ನಿಮಿತ್ತ ವರ್ಕ್​ ಫ್ರಂ ಹೋಂನಲ್ಲಿದ್ದರು. ಆದರೆ ಅವರ ಮೇಲಧಿಕಾರಿಯು, ಕಚೇರಿಗೆ ಹಾಜರಾಗದಿದ್ದರೆ ಕೆಲಸದಿಂದ ತೆಗೆದು ಹಾಕಲಾಗುವುದೆಂದು ಬೆದರಿಸಿದರು. ಕಚೇರಿಗೆ ಹಾಜರಾದ ಮೇಲೆ ಉದ್ಯೋಗಿಯನ್ನು ನಿಷ್ಪ್ರಯೋಜಕರೆಂಬಂತೆ ನಡೆಸಿಕೊಂಡರಲ್ಲದೆ ಹೊಸ ಕೆಲಸವನ್ನು ಹುಡುಕಿಕೊಳ್ಳುವಂತೆಯೂ ಹೇಳಿದರು.  ಇದರಿಂದ ಮನನೊಂದ ಉದ್ಯೋಗಿಯು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ಬೆಂಗಾಲಿಯನ್ನು ಫ್ರೆಂಚ್​ ಶೈಲಿಯಲ್ಲಿ, ಮರಾಠಿಯನ್ನು ಐರಿಷ್​ ಶೈಲಿಯಲ್ಲಿ ಮಾತನಾಡಿದಾಗ

‘ಅನಾರೋಗ್ಯದ ನಿಮಿತ್ತ ನಾನು ವರ್ಕ್​ ಫ್ರಂ ಹೋಮ್​ನಲ್ಲಿದ್ದೆ. ನನ್ನ ಮತ್ತು ಮೇಲಧಿಕಾರಿಯ ಮಧ್ಯೆ ಕೆಲ ಮೇಲ್​ಗಳು ವಿನಿಮಯವಾದವು, ಆನಂತರ ಆಫೀಸಿಗೆ ಬರಬೇಕೆಂದು ಅವರು ತಿಳಿಸಿದರು. ಮೀಟಿಂಗ್​​ನಲ್ಲಿ, ನನ್ನಿಂದ ಸರಳ ಕೆಲಸವನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಆಫೀಸ್​ ವಾತಾವರಣದಿಂದ ಕಲಿಯುವುದು ಬಹಳಷ್ಟು ಇದೆ, ಹಾಗಾಗಿ ಇನ್ನು ಮುಂದೆ ವರ್ಕ್​ ಫ್ರಂ ಹೋಂ ಮಾಡುವಂತಿಲ್ಲ ಎಂದರು. ಕೆಲಸದಿಂದ ತೆಗೆದು ಹಾಕುವ ಮೊದಲು ನಾನು ಹೊಸ ಕೆಲಸವನ್ನು ಆದಷ್ಟು ಬೇಗ ಹುಡುಕಿಕೊಳ್ಳಬೇಕಿದೆ.’

ಇದನ್ನೂ ಓದಿ : Viral: ತಲೆಯ ಮೇಲೆ ಕೂರಿಸಿಕೊಳ್ಳೋದು ಎಂದರೆ ಇದೇ!?

‘ಪ್ರತೀ ದಿನವೂ ಮೀಟಿಂಗ್​​​ಗಳಲ್ಲಿ ನಾನು ನಿಷ್ಪ್ರಯೋಜಕ ಮತ್ತು ಮೂರ್ಖ ಎಂಬ ಭಾವನೆಯನ್ನು ಹುಟ್ಟುಹಾಕುತ್ತಿದ್ದರು. ನಾನು ಕ್ರಮೇಣ ಖಿನ್ನತೆಗೆ ಒಳಗಾದೆ. ಪಂಚಿಂಗ್​ ಬ್ಯಾಗ್​​​ನಂತೆ ಆಗುತ್ತ ಹೋದೆ. ಇನ್ನುಮುಂದೆ  ಅಲ್ಲಿ ಏನು ಕೆಲಸ ಮಾಡಲೂ ನನಗೆ ಭಯವಾಗುತ್ತಿದೆ, ಯಾವುದೇ ರೀತಿಯ ಪ್ರೇರಣೆಯೇ ಇಲ್ಲದಂತೆ ಆಗಿದೆ. ನನ್ನ ಅನಾರೋಗ್ಯವು ಪರಿಸ್ಥಿತಿಯ ವ್ಯಂಗ್ಯದಂತೆ ತೋರಿದೆ. ಆದರೆ ಈವತ್ತು ನನಗೆ ಹೊಸ ಕಂಪೆನಿಯಲ್ಲಿ ಇಂಟರ್ವ್ಯೂ ಇದೆ. ಅಲ್ಲಿ ಕೆಲಸ ಸಿಗಬಹುದು ಎಂಬ ಭರವಸೆಯೂ ಇದೆ, ಈ ನರಕದಿಂದ ಮುಕ್ತಿ ಸಿಕ್ಕರೆ ಸಾಕು.’ಎಂದು ಹೇಳಿದ್ದಾರೆ ಅವರು.

ಇದನ್ನೂ ಓದಿ : Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?

17 ಗಂಟೆಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್​ 5,900 ಅಪ್​ವೋಟ್​ ಗಳಿಸಿದೆ. ನಿಮ್ಮ ಮೇಲಧಿಕಾರಿಯು ನಿಮಗೆ ತಕ್ಕವರಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.  ಅನೇಕರು ಬೇರೆ ಕಡೆ ಕೆಲಸ ಹುಡುಕಿಕೊಳ್ಳಿ ಎಂದಿದ್ದಾರೆ. ಇದಕ್ಕೆ ನೀವೇನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 1:24 pm, Tue, 25 July 23