AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಂಗಾಲಿಯನ್ನು ಫ್ರೆಂಚ್​ ಶೈಲಿಯಲ್ಲಿ, ಮರಾಠಿಯನ್ನು ಐರಿಷ್​ ಶೈಲಿಯಲ್ಲಿ ಮಾತನಾಡಿದಾಗ

Accent : ನೀವಿಬ್ಬರೂ ಅಸಾಮಾನ್ಯ ಪ್ರತಿಭಾವಂತರು. ಕೇಳಲು ಇದು ಬಹಳ ಸರಳವೆನ್ನಿಸುತ್ತದೆ. ಆದರೆ ನಮ್ಮಂಥವರ ಮೆದುಳುಗಳಿಗೆ ಇದು ಬಹಳ ಸಂಕೀರ್ಣ! ಎನ್ನುತ್ತಿದ್ದಾರೆ ನೆಟ್ಟಿಗರು. ಈ ವಿಡಿಯೋ ನೋಡಿದ ಮೇಲೆ ನೀವೇನಂತೀರಿ?

Viral Video: ಬೆಂಗಾಲಿಯನ್ನು ಫ್ರೆಂಚ್​ ಶೈಲಿಯಲ್ಲಿ, ಮರಾಠಿಯನ್ನು ಐರಿಷ್​ ಶೈಲಿಯಲ್ಲಿ ಮಾತನಾಡಿದಾಗ
ಕಲಾವಿದರಾದ ಸಾಯಿ ಗೋಡ್ಬೋಲೆ ಮತ್ತು ಅಹಿಲ್ಯಾ
ಶ್ರೀದೇವಿ ಕಳಸದ
|

Updated on:Jul 25, 2023 | 12:28 PM

Share

Accent Roulette : ಕನ್ನಡವನ್ನು ಇಂಗ್ಲಿಷ್​ನಂತೆ, ಇಂಗ್ಲಿಷ್ (English)​ ಅನ್ನು ಕನ್ನಡದಂತೆ ಮಾತನಾಡುವವರು ನಮ್ಮ ಮಧ್ಯೆ ಅನೇಕರಿದ್ದಾರೆ. ಮಾತೃಭಾಷೆಗೆ ಇರುವ ಲಯ, ಉಚ್ಚಾರದ ಪ್ರಭಾವ ಇನ್ನೊಂದು ಭಾಷೆಯನ್ನು ಮಾತನಾಡುವಾಗಲೂ ಸಹಜವಾಗಿ ಆಗುತ್ತದೆ. ಆಗ ಅದನ್ನು ಕೇಳಲು ಮಜಾ ಎನ್ನಿಸುವುದುಂಟು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಕಲಾವಿದರಾದ ಸಾಯಿ ಗೋಡ್ಬೋಲೆ ಮತ್ತು ಅಹಿಲ್ಯಾ ಬೆಂಗಾಲಿಯನ್ನು ಫ್ರೆಂಚ್​ ಶೈಲಿಯಲ್ಲಿ, ಮರಾಠಿಯನ್ನು ಐರಿಶ್​ ಶೈಲಿಯಲ್ಲಿ, ಹಿಂದಿಯನ್ನು ಬ್ರಿಟಿಷ್​ ಶೈಲಿಯಲ್ಲಿ, ಫ್ರೆಂಚ್ ಅನ್ನು ಭಾರತೀಯ ಶೈಲಿಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sai (@saigodbole)

ಈ ವಿಡಿಯೋ ಅನ್ನು 2.6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ. ಮಿಲಿಯನ್​ಗಟ್ಟಲೆ ಜನರು ಇದನ್ನು ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಹಿಂದಿಯನ್ನು ಬ್ರಿಟಿಷ್​ ಶೈಲಿಯಲ್ಲಿ ಉಚ್ಚರಿಸಿದ್ದು ಸೌತ್ ಬಾಂಬೆಯ ಲಾವಣ್ಯರನ್ನು (Tiktok)  ನೆನಪಿಸಿದೆ ಎಂದಿದ್ದಾರೆ ಒಬ್ಬರು. ಈ ಪ್ರತಿಕ್ರಿಯಿಗೆ 4,700 ಜನರು ಲೈಕ್ ಒತ್ತಿದ್ದಾರೆ.

ಇದನ್ನೂ ಓದಿ : Viral: ತಲೆಯ ಮೇಲೆ ಕೂರಿಸಿಕೊಳ್ಳೋದು ಎಂದರೆ ಇದೇ!?

ನೀವಿಬ್ಬರೂ ತುಂಬಾ ಪ್ರತಿಭಾವಂತರು ಎಂದಿದ್ದಾರೆ ಅನೇಕರು. ಬೆಂಗಾಲಿಯನ್ನು ಫ್ರೆಂಚ್​ ಶೈಲಿಯಲ್ಲಿ ಕೇಳಿ ನನ್ನೊಳಗಿಂದ ಏನೋ ಜಾಗೃತವಾದಂತೆ ಆಗುತ್ತಿದೆ ಎಂದಿದ್ದರೆ ಒಬ್ಬರು. ನಮ್ಮಂಥ ಸರಳ ಮೆದುಳಿಗರಿಗೆ ಇದು ಬಹಳ ಸಂಕೀರ್ಣವೆನ್ನಿಸುವಂತಿದೆ, ನಿಜಕ್ಕೂ ಈ ರೀಲ್​ ಬಹಳ ಚೆನ್ನಾಗಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?

ನೆಕ್ಸ್ಟ್​ ಲೆವಲ್​ ಟ್ಯಾಲೆಂಟ್​ ಎಂದರೆ ಇದೇ! ನಿಮ್ಮಿಬ್ಬರ ಬಗ್ಗೆ ಬಹಳ ಅಚ್ಚರಿ ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು. ಬೆಂಗಾಲಿಯನ್ನು ಫ್ರೆಂಚ್ ಶೈಲಿಯಲ್ಲಿ ಮಾತನಾಡಿದ್ದು ಮಾತ್ರ ಅದ್ಭುತವಾಗಿದೆ ಎಂದಿದ್ದಾರೆ ಮಗದೊಬ್ಬರು. ಅಬ್ಬಾ ದೆವ್ವಗಳು ಇಷ್ಟು ಸಿಹಿಯಾಗಿ ಮಾತನಾಡುತ್ತವೆಯೇ! ಲವ್​ ಯೂ ಗರ್ಲ್ಸ್​ ಎಂದಿದ್ದಾರೆ ಇನ್ನೂ ಒಬ್ಬರು. ಪ್ರತಿಭೆ ಮತ್ತು ಬುದ್ಧಿವಂತಿಕೆಯಿಂದ ಕೂಡಿದ ವಿಡಿಯೋ. ಇಂಥ ವಿಡಿಯೋ ಈತನಕ ನೋಡಿರಲಿಲ್ಲ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:24 pm, Tue, 25 July 23

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು