Viral Video: ಕೇಕ್​ ತಯಾರಿಸುವ ಈ ವಿಡಿಯೋ ನೋಡಿದ್ದೀರಾ?

Cake Making : ಬೇಕ್ ಮಾಡುವುದರಿಂದ ಅದರಲ್ಲಿರುವ ಕ್ರಿಮಿಗಳೆಲ್ಲ ಮಾಯವಾಗುತ್ತವೆ! ಎಂದುಕೊಳ್ಳಬೇಕೇ? ಅಥವಾ ಕೇಕ್ ತಿನ್ನುವುದನ್ನೇ ಬಿಡಬೇಕೆ? ಈ ವಿಡಿಯೋ ನೋಡಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ.

Viral Video: ಕೇಕ್​ ತಯಾರಿಸುವ ಈ ವಿಡಿಯೋ ನೋಡಿದ್ದೀರಾ?
ಬೇಕರಿಯಲ್ಲಿ ಕೇಕ್ ತಯಾರಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on: Jul 24, 2023 | 4:16 PM

Cake : ಬಾಯಿ ಚಪ್ಪರಿಸಿ ತಿನ್ನುವ ಪಾನೀಪೂರಿ ಹೇಗೆ ತಯಾರಿಸುತ್ತಾರೆ ಮತ್ತು ಉಪ್ಪುಪ್ಪಾಗಿರುವ ಹಸಿರು ಬಟಾಣಿಯನ್ನು ಹೇಗೆ ತಯಾರಿಸುತ್ತಾರೆ ಎನ್ನುವ ವಿಡಿಯೋಗಳನ್ನು ಇತ್ತೀಚೆಗಷ್ಟೇ ನೋಡಿದಿರಿ. ಕೆಲವೆಡೆ ಕೇಕ್​ಗಳನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನೂ ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ನೋಡಬಹುದು. ಬಣ್ಣದ ಬಣ್ಣದ ಕ್ರೀಮ್​ ಕೇಕ್​ಗಳ ತಯಾರಿಕೆಯ ವಿಡಿಯೋ ನೋಡುತ್ತಿರುವ ನೆಟ್ಟಿಗರು ಹೌಹಾರಿದ್ದಾರೆ. ಜನ್ಮದಲ್ಲಿ ಕೇಕ್​ ತಿನ್ನುವುದಿಲ್ಲ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಇಂಥ ಕೇಕ್​ಗಳನ್ನು ತಿನ್ನುತ್ತಿರುವುದಕ್ಕೇ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದು ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿದ ನೀವೇನು ಹೇಳುತ್ತೀರಿ?

@chiragbarjatyaa ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಕೇಕ್ ತಯಾರಿಸುವ ಕೋಣೆ ಹೇಗಿದೆ ಮತ್ತು ಅದಕ್ಕೆ ಬಳಸುವ ಪರಿಕರಗಳು ಹೇಗಿವೆ ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ. ಇಲ್ಲಿರುವ ಪೊರಕೆ ನೆಟ್ಟಿಗರ ವಿಶೇಷ ಗಮನ ಸೆಳೆದಿದೆ ಜೊತೆಗೆ ಕೇಕ್​ ಹಿಟ್ಟನ್ನು ಸುರಿ ನ್ಯೂಸ್​ ಪೇಪರ್​ಗಳ ಮೇಲೆ ಸುರಿಯುವ ದೃಶ್ಯವೂ.

ಇದನ್ನೂ ಓದಿ : Viral Video: ಸ್ಪೈರಲ್​ ಬನಾನಾ ಟ್ವಿಸ್ಟರ್ ಎಲ್ಲಿ ಸಿಗುತ್ತದೆ? ಹುಡುಕಾಟದಲ್ಲಿ ಬೆಂಗಳೂರಿಗರು

ಸುಮಾರು 1 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕೆಲವರು ಶುಚಿತ್ವಕ್ಕೆ ಸಂಬಂಧಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ಇದರಲ್ಲಿ ಅಚ್ಚರಿಯಾಗುವಂಥದ್ದೇನಿಲ್ಲ, ಬಾಲ್ಯದಿಂದ ಇಂಥ ಕೇಕ್​​​ಗಳಿಗಾಗಿ ನಾವು ವರ್ಷಗಟ್ಟಲೇ ಕಾಯ್ದಿದ್ದಿಲ್ಲವೆ? ನಾಲಗೆಯ ಮೇಲಿಟ್ಟಾಗ ಎಂದಾದರೂ ಇದನ್ನು ಹೇಗೆ ತಯಾರಿಸಿದರು ಎಂದೆಲ್ಲ ಯೋಚಿಸಿದ್ದೆದೆಯೇ? ಈಗಲೂ ಅಷ್ಟೇ, ಕೇಕ್ ತಿನ್ನುವಾಗ ಈಗ ವೈರಲ್ ಆಗಿರುವ ಈ ವಿಡಿಯೋ ಕೂಡ ಮರೆತುಹೋಗುತ್ತದೆ! ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ದಪ್ಪನೆಯ ಮಹಿಳೆಯನ್ನು ಅವಮಾನಿಸಿದ ವಿಮಾನ ಪ್ರಯಾಣಿಕ; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು 

ಈಗ ನೀವೇನು ನಿರ್ಧಾರ ತೆಗೆದುಕೊಳ್ಳುತ್ತೀರಿ? ಬೇಕರಿಗಳಲ್ಲಿ ತಯಾರಾಗುವ ಇಂಥ ಕೇಕ್​​ಗಳಿಂದ ದೂರವಿರುತ್ತೀರೇ? ಅಥವಾ ಮನೆಯಲ್ಲಿಯೇ ಮಾಡಿ ತಿನ್ನುತ್ತೀರೇ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ