Viral: ಕಬ್ಬನ್ಪೇಟೆ ಟಿಫನ್ ರೂಮಿನಿಂದ ಶುರುವಾದ ಇವರ ತಿಂಡಿಯಾನ
Bengaluru : ತುಪ್ಪದಲ್ಲಿ ಹುರಿದ ಬಟನ್ ಮಶ್ರೂಮ್, ಆಲೂಗಡ್ಡೆ ತುಂಡುಗಳಿಂದ ಕೂಡಿದ ಮಸಾಲೆಯುಕ್ತ ಅಣಬೆ ಪುಲಾಬ್ ತಿನ್ನಲು ಭಾನುವಾರಕ್ಕಾಗಿ ಕಾಯಬೇಕು. ಬಾಳೆಎಲೆ ಮೇಲೆ ಚಟ್ನಿಯೊಂದಿಗೆ ಹಬೆಯಾಡುವ ಈ ಪುಲಾವ್ ತಿನ್ನುವುದೇ ಸ್ವರ್ಗ!
Tiffin : ಹೋಟೆಲ್ಗೆ ಹೋದರೆ ಎಷ್ಟು ಜನ ಹೋಗುತ್ತೀರಿ? ಕೆಲ ಸ್ನೇಹಿತರೊಡನೆ ಅಥವಾ ಕುಟುಂಬದವರೊಂದಿಗೆ. ಆದರೆ ನಿಮ್ಮ ಅಕ್ಕಪಕ್ಕದ ಮನೆಯವರನ್ನೂ ಸೇರಿಸಿಕೊಂಡು ಹೋಗಿದ್ದಿದೆಯೇ? ಇದೀಗ ವೈರಲ್ ಆಗಿರುವ ಈ ಟ್ವೀಟ್ ಥ್ರೆಡ್ ನೋಡಿ. ಮೇಲಿನ ಫೋಟೋದಲ್ಲಿರುವವರೆಲ್ಲರೂ ಭಾನುವಾರದಂದು ತಿಂಡಿ ತಿನ್ನಲೆಂದು ಒಟ್ಟಾಗಿ ಹೊರಟಿದ್ದಾರೆ. ಅವರು ಮೊದಲು ಹೋಗಿದ್ದು ಬಸವನಗುಡಿಯಲ್ಲಿರುವ ಕಬ್ಬನ್ಪೇಟೆ ಟಿಫನ್ ರೂಮಿಗೆ. ಮೋಹನ್ ಎನ್ನುವವರು ನಡೆಸುವ ಈ ಹೋಟೆಲ್ನಲ್ಲಿ ಭಾನುವಾರ (Sunday)ದ ಅಣಬೆ ಪುಲಾವ್ ಮತ್ತು ಸಬ್ಬಸಿಗೆ ಇಡ್ಲಿ, ಮಸಾಲೆ ದೋಸೆ ಮತ್ತು ರೈಸ್ಬಾತ್ಗಳಿಗಾಗಿ ಇವರು ದಾಂಗುಡಿ ಇಟ್ಟಿದ್ದಾರೆ.
And Mohan avaru relies on our memory to tell him what all we ordered so he could bill accordingly ❤️ Take the sabsige idli with thuppa ??? Their chutney is extremely fresh and delicious too! It comes with an aaloo sagu as well. Lovely, soft idlis 🙂 pic.twitter.com/LV03sbyXng
ಇದನ್ನೂ ಓದಿ— AB (@ajit_bhaskar) July 24, 2023
ತೆಗೆದುಕೊಂಡ ಆರ್ಡರ್ಗಳ ಪಟ್ಟಿ ಮೋಹನ್ ಅವರಿಗೆ ಚೆನ್ನಾಗಿ ನೆನಪಿರುತ್ತದೆಯಾದ್ದರಿಂದ ಬಿಲ್ ಮಾಡಲು ಅವರಿಗೆ ಅನುಕೂಲವಾಗುತ್ತದೆ. ಇಲ್ಲಿ ಸಬ್ಬಸಿಗೆ ಇಡ್ಲಿಗೆ ಕೊಡುವ ಚಟ್ನಿ ಬಹಳ ರುಚಿಯಾಗಿರುತ್ತದೆ. ಜೊತೆಗೆ ಆಲೂಗಡ್ಡೆ ಸಾಗೂ ಕೂಡ ಕೊಡುತ್ತಾರೆ. ಮೃದುವಾದ ಈ ಇಡ್ಲಿಗಳೊಂದಿಗೆ ಇದೆಲ್ಲವನ್ನೂ ಸವಿಯುವುದೆಂದರೆ ಸ್ವರ್ಗ.
Bath masalE. Palav (not mushroom, standard palav) tucked in along with pudi, aaloo palya inside a beautifully roasted dosE. Thick, vintage Cubbonpete style. And not much grease left in the banana leaf. Excellent technique! And very, very delicious ?❤️ pic.twitter.com/Aflihqpnfw
— AB (@ajit_bhaskar) July 24, 2023
ಇನ್ನು ಭಾನುವಾರ ಮಾತ್ರ ಮಾಡುವ ಅಣಬೆ ಪುಲಾವ್ ಸಾಕಷ್ಟು ಬಟನ್ ಮಶ್ರೂಮ್ ತುಪ್ಪದಲ್ಲಿ ಹುರಿದ ಆಲೂಗಡ್ಡೆ ತುಂಡುಗಳು ಮತ್ತು ಮಸಾಲೆಯಿಂದ ಕೂಡಿರುತ್ತದೆ. ಚಟ್ನಿಯೊಂದಿಗೆ ಹಬೆಯಾಡುವ ಈ ಪುಲಾವ್ ಅನ್ನು ಬಾಳೆ ಎಲೆಯಲ್ಲಿ ಮುಂಜಾನೆ ಹೊತ್ತಿನಲ್ಲಿ ತಿನ್ನುವುದು ಅತ್ಯಂತ ಸೊಗಸು.
ಈ ತಿಂಡಿ ಮತ್ತು ಹೋಟೆಲ್ಗಳ ಹೆಸರುಗಳ ಥ್ರೆಡ್ ಬೆಳೆಯುತ್ತಲೇ ಹೋಗುತ್ತದೆ. ಟ್ವೀಟ್ ಮಾಡಿರುವ ಫೋಟೋಗಳು ನಿಮ್ಮ ಬಾಯಲ್ಲಿ ನೀರೂರಿಸತೊಡಗುತ್ತವೆ. ನಿಮಗೂ ಈಗ ಈ ಹೋಟೆಲ್ಗಳಿಗೆ ಹೋಗಬೇಕೆಂಬ ಮನಸ್ಸಾಗುತ್ತಿದೆಯೇ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:40 pm, Mon, 24 July 23