Dhanashree Verma: ಸಖತ್ ಹಾಟ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೊವನ್ನು ಮತ್ತೊಮ್ಮೆ ಹಂಚಿಕೊಂಡ ಚಹಾಲ್ ಪತ್ನಿ ಧನಶ್ರೀ ವರ್ಮಾ
ಧನಶ್ರೀ ಅವರು ತಮ್ಮ ಹಳೆಯ ವಿಡಿಯೋವನ್ನು ಮತ್ತೆ ಇನ್ಸ್ಟಾಗ್ರಾಮ್ನಲ್ಲಿ ಪಿನ್ ಮಾಡಿಕೊಂಡಿದ್ದಾರೆ. ಪತಿ ಯುಜ್ವೇಂದ್ರ ಚಹಾಲ್ ಜತೆಗೆ ಡಾನ್ಸ್ ಮಾಡಿರುವ ಮೂರು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದು, ಅವರ ಸಖತ್ ಹಾಟ್ ಡ್ಯಾನ್ಸ್ ವಿಡಿಯೋ ಇಲ್ಲಿದೆ.
ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ (Yuzvendra Chahal) ಅವರು ಪತ್ನಿ ಧನಶ್ರೀ ವರ್ಮಾ (dhanashree verma) ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು. ಅನೇಕ ಫೋಟೋ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈ ಹಿಂದೆ ಹಾಲಿವುಡ್ ಚಿತ್ರದ ‘ಬಾರ್ಬಿ’ ಸ್ಟೈಲಿನ ಸುಂದರವಾದ ಉಡುಪನ್ನು ಧರಿಸುವ ಮೂಲಕ ಭಾರೀ ವೈರಲ್ ಆಗಿದ್ದರು. ಇದರ ಜತೆಗೆ ಧನಶ್ರೀ ಅವರು ಹಾಟ್ ಡ್ರೆಸ್ ಸೇನ್ಸ್ ಕೂಡ ಹೊಂದಿದ್ದಾರೆ. ಯಾಕೆಂದರೆ ಅವರು ಮಾಡೆಲ್ ಕೂಡ ಹೌದು. ಇನ್ನೂ ಧನಶ್ರೀ ಅವರು ತಮ್ಮ ಹಳೆಯ ವಿಡಿಯೋವನ್ನು ಮತ್ತೆ ಇನ್ಸ್ಟಾಗ್ರಾಮ್ನಲ್ಲಿ ಪಿನ್ ಮಾಡಿಕೊಂಡಿದ್ದಾರೆ. ಪತಿ ಯುಜ್ವೇಂದ್ರ ಚಹಾಲ್ ಜತೆಗೆ ಡಾನ್ಸ್ ಮಾಡಿರುವ ಮೂರು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಹಂಚಿಕೊಂಡಿದ್ದು, ಆ ವಿಡಿಯೋಗಳು ಇಲ್ಲಿದೆ ನೋಡಿ.
ಒಂದು ವಿಡಿಯೋದಲ್ಲಿ ಧನಶ್ರೀ ಅವರು ಪತಿ ಚಹಾಲ್ ಮತ್ತು ಕ್ರಿಕೆಟಿಗ ಜಾಸ್ ಬಟ್ಲರ್ ಜತೆಗೆ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಧನಶ್ರೀ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ, ಇದರಲ್ಲಿ ಧನಶ್ರೀ ಮತ್ತು ಜಾಸ್ ಬಟ್ಲರ್ ಸೂಪರ್ ಆಗಿ ಡ್ಯಾನ್ಸ್ ಮಾಡುತ್ತಿದ್ದರೆ, ಚಹಾಲ್ ಒಂದು ಕಡೆ ನಿಂತುಕೊಂಡು ಪತ್ನಿಯ ಡ್ಯಾನ್ಸ್ ನೋಡುತ್ತಿರುವುದನ್ನು ಇದರಲ್ಲಿ ಕಾಣಬುಹುದು. ಈ ಪೋಸ್ಟ್ಗೆ ದಿ ಪಿಂಕ್ ಬಿಟ್ವೀನ್ ದ ಆರೆಂಜ್ ಅಂಡ್ ಪ್ರಫೋಲ್ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋ 1.6 ಲಕ್ಷ ಲೈಕ್ ಮತ್ತು 4, 699 ಮಂದಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಮೇ 30 2022ಕ್ಕೆ ಹಂಚಿಕೊಂಡಿದ್ದಾರೆ, ಇದೀಗ ಇದನ್ನು ಮತ್ತೆ ಪಿನ್ ಮಾಡಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಡ್ಯಾನ್ಸ್ ಮಾಡಲು ಹುಡುಗಿಯನ್ನು ಎತ್ತಲು ಹೋಗಿ ಆಯತಪ್ಪಿ ಬಿದ್ದ ವರ; ವಿಡಿಯೋ ವೈರಲ್
ಇನ್ನೂ ವಿಡಿಯೋದಲ್ಲಿ ಧನಶ್ರೀ ಅವರು ಡ್ಯಾನ್ಸ್ ರೂಮ್ನಲ್ಲಿ ಡ್ಯಾನ್ಸ್ ಮಾಸ್ಟರ್ ರವಿಸೋನಿ ಜೊತೆಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮಾಚರ್ಲ ನಿಯೋಜಕವರ್ಗಮ್ ಎಂಬ ತೆಲುಗು ಸಿನಿಮಾದ ರಾನು ರಾನು ಅಂತೂನೆ ಚಿನ್ನದೋ ಹಾಡಿಗೆ ಹಾಟ್ ಹಾಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಕೂಡ ಮತ್ತೆ ಇನ್ಸ್ಟಾಗ್ರಾಮ್ನಲ್ಲಿ ಪಿನ್ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಆಗಸ್ಟ್ 7 2022ರಂದು ಹಂಚಿಕೊಂಡಿದ್ದಾರೆ.
View this post on Instagram
ಇನ್ನೂ 2021, ಡಿಸೆಂಬರ್ 31ರಂದು ಹಂಚಿಕೊಂಡಿರುವ ಇನ್ನೊಂದು ವಿಡಿಯೋವನ್ನು ಇನ್ಸ್ಟಾಗ್ರಾಮ್ ಮತ್ತೆ ಸದ್ದು ಮಾಡಿದೆ. ಇಲ್ಲಿಯು ಕೂಡ ಧನಶ್ರೀ ಅವರು ಹಾಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ನಾಚ್ ನಾಚ್ ಮೇರಿ ರಾಣಿ ಮೇ ಎಂಬ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಕೂಡ 1.3 ಲಕ್ಷ ಲೈಕ್ ಪಡೆದುಕೊಂಡಿದೆ.
View this post on Instagram
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:24 pm, Mon, 24 July 23