Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ನಾವು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಯಾಣಿಸುತ್ತಿದ್ದೇವೆ’; ಮನಗೆದ್ದ ಇಂಡಿಗೋ

Param Vir Chakra : ವಿಶೇಷ ವ್ಯಕ್ತಿಯೊಬ್ಬರು ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಇಂಡಿಗೋ ವಿಮಾನ ಸಿಬ್ಬಂದಿಯು ಅವರನ್ನು ಗೌರವಿಸಿರುವ ರೀತಿ ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೋ ಯೋಧರ ಬಗ್ಗೆ ಹೆಮ್ಮೆ ಮೂಡಿಸುವಂತಿದೆ.

Viral Video: 'ನಾವು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಯಾಣಿಸುತ್ತಿದ್ದೇವೆ'; ಮನಗೆದ್ದ ಇಂಡಿಗೋ
ಪರಮ ವೀರ ಚಕ್ರ ಪುರಸ್ಕೃತ ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಅವರನ್ನು ಗೌರವಿಸುತ್ತಿರುವ ಇಂಡಿಗೋ ಸಿಬ್ಬಂದಿ
Follow us
ಶ್ರೀದೇವಿ ಕಳಸದ
| Updated By: ರಶ್ಮಿ ಕಲ್ಲಕಟ್ಟ

Updated on:Jul 24, 2023 | 7:05 PM

Indigo : ಬಸ್ಸಾದರೆ, ರೈಲಾದರೆ ಪರಸ್ಪರರ ಬಗ್ಗೆ ತಿಳಿದುಕೊಂಡು ಒಡನಾಡುತ್ತ ಪ್ರಯಾಣದ ದೂರವನ್ನು ಹತ್ತಿರ ಮಾಡಿಕೊಳ್ಳುವುದು ಸಹಜ. ಆದರೆ ವಿಮಾನದಲ್ಲಿ? ಅವರವರ ಗುಂಗಿನಲ್ಲಿ ಅವರೆಲ್ಲರೂ. ಆದರೆ  ಸಾಮಾನ್ಯವಾಗಿ ವಿಮಾನವೆಂದಾಕ್ಷಣ ಅಲ್ಲಿ ಒಬ್ಬರಾದರೂ ವಿಶೇಷ ವ್ಯಕ್ತಿ ಇದ್ದೇ ಇರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇಂಡಿಗೋ ವಿಮಾನವು ಟೇಕ್​ ಆಫ್​ ಆಗಲು ಸಜ್ಜಾಗಿರುವ ಹೊತ್ತಿನಲ್ಲಿ ಉದ್ಘೋಷಣೆಯೊಂದು ಎಲ್ಲರ ಗಮನ ಸೆಳೆಯುತ್ತದೆ; ಪರಮ ವೀರ ಚಕ್ರ ಪ್ರಶಸ್ತಿ (Param Vir Chakra) ಪುರಸ್ಕೃತರಾದ ಸುಬೇದಾರ್ ಮೇಜರ್ ಸಂಜಯ್ ನಾವು ಪ್ರಯಾಣಿಸುತ್ತಿದ್ದೇವೆ…

ಮೇಜರ್ ಸಂಜಯ್ ಭಾನುವಾರದಂದು ಪುಣೆಗೆ ಪ್ರಯಾಣಿಸುವಾಗ ಕ್ಯಾಪ್ಟನ್​ ಎಡ್ಸೆಲ್ ಪ್ರಯಾಣಿಕರ ಸಮ್ಮುಖದಲ್ಲಿ ಅವರನ್ನು ಹೀಗೆ ಗೌರವಿಸಿದ್ದಾರೆ. ನಂತರ ಸಂಜಯ್​ ಅವರು ಯುದ್ಧದ ಅನುಭವನ್ನು ಹಂಚಿಕೊಂಡರು. ಈ ವಿಡಿಯೋ ಅನ್ನು ಟ್ವೀಟ್ ಮಾಡಿದಾಗಿನಿಂದ 3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 1,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಇಲ್ಲಿ ಈ ಆಟ ಆಡುವವರೆಲ್ಲ ಡೈಪರ್ ಹಾಕಿಕೊಳ್ಳಲೇಬೇಕು!

ಸಂಜಯ್ ಅವರ ಬಗ್ಗೆ ಭಾರತೀಯರಾದ ನಮಗೆ ಹೆಮ್ಮೆ ಇದೆ ಎಂದು ನೆಟ್ಟಿಗರನೇಕರು ಹೇಳಿದ್ದಾರೆ. ಅಲ್ಲದೆ, ಅವರನ್ನು ಹೀಗೆ ಅಭಿನಂದಿಸಿರುವ ನಿಮ್ಮ ನಡೆ ಸ್ತುತ್ಯಾರ್ಹ ಎಂದು ಇಂಡಿಗೋಗೆ ತಿಳಿಸಿದ್ದಾರೆ. ಯೋಧರ ಪರಾಕ್ರಮ ಮತ್ತು ತ್ಯಾಗಗಳ ಫಲವಾಗಿಯೇ ನಾವೆಲ್ಲ ಇಂದು ನೆಮ್ಮದಿಯಾಗಿದ್ದೇವೆ ಎಂದಿದ್ದಾರೆ ಕೆಲವರು. ಇಂಥ ಹೆಮ್ಮೆಯ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಬಹಳ ಖುಷಿ ಎಂದು ಇನ್ನೂ ಕೆಲವರು ಇಂಡಿಗೋಗೆ ಧನ್ಯವಾದ ಅರ್ಪಿಸಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:32 pm, Mon, 24 July 23

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ