AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಇಲ್ಲಿ ಈ ಆಟ ಆಡುವವರೆಲ್ಲ ಡೈಪರ್ ಹಾಕಿಕೊಳ್ಳಲೇಬೇಕು!’

Rollercoaster : ಬದುಕಿನುದ್ದಕ್ಕೂ ರೋಲರ್​ಕೋಸ್ಟರ್ ಆಡಿದ್ದೇನೆ, ಆಡುತ್ತಲೂ ಇದ್ದೇನೆ. ಹಾಗಾಗಿ ಮತ್ತಿದನ್ನು ಹಣಕೊಟ್ಟು ಇದನ್ನು ಆಡುವುದು ಬೇಡವೆಂದು ತೀರ್ಮಾನಿಸಿದ್ದೇನೆ ಎಂದಿದ್ದಾರೆ ನೆಟ್ಟಿಗರೊಬ್ಬರು. ನೀವು?

Viral Video: 'ಇಲ್ಲಿ ಈ ಆಟ ಆಡುವವರೆಲ್ಲ ಡೈಪರ್ ಹಾಕಿಕೊಳ್ಳಲೇಬೇಕು!'
ರೋಲರ್​ಕೋಸ್ಟರ್​
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jul 20, 2023 | 6:06 PM

Share

Amusement Games : ಈ ವಿಡಿಯೋ ನೋಡಿಯೇ ನನ್ನ ಎದೆಬಡಿತ ನಿಂತುಹೋಗಿದೆ. ನಾನು ಭೂಮಿಯ ಮೇಲೆಯೇ ಇರಬಯಸುತ್ತೇನೆ. ನಾನಂತೂ ರೋಲರ್​ಕೋಸ್ಟರ್ ಆಡಲಾರೆ, ಆದರೆ ನಿಂತು ನೋಡುವಷ್ಟು ಧೈರ್ಯ ಇದೆ. ಈ ವಿಡಿಯೋದಿಂದ ತಿರುಗುತ್ತಿರುವ ತಲೆಯನ್ನೇ ನಿಲ್ಲಿಸಿಕೊಳ್ಳಲಾಗುತ್ತಿಲ್ಲ ಇನ್ನೂ… ಅಂತೆಲ್ಲ ನೆಟ್ಟಿಗರು ಈ ವಿಡಿಯೋದಡಿ ಪ್ರತಿಕ್ರಿಯಿಸುತ್ತಿದ್ದಾರೆ. ಈತನಕ 3.4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 28,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 4,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಇದು ಕೆನಡಾದ ವಂಡರ್​​​ಲ್ಯಾಂಡ್​ನಲ್ಲಿರುವ ಯುಕಾನ್​! ಎಂದು ಹೇಳಿದ್ಧಾರೆ ಒಬ್ಬರು. ಅರೆ ನಾನು ಕಳೆದ ವರ್ಷ ಇದನ್ನು ಇಲ್ಲಿಯೇ ಆಡಿದ್ದೆ, ಹಳೆಯ ಮೊಬೈಲ್​ನಲ್ಲಿ ವಿಡಿಯೋ ಕೂಡ ಇದೆ ಎಂದಿದ್ದಾರೆ. ಇದು ಭಯಂಕರವಾಗಿದೆ, ಆಡುವುದಲ್ಲ ನಾನಂತೂ ಮತ್ತೊಮ್ಮೆ ಈ ವಿಡಿಯೋ ನೋಡಲಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​

ನಾನು ಇಡೀ ಜೀವನಪೂರ್ತಿ ರೋಲರ್​ಕೋಸ್ಟರ್​ ಸವಾರಿ ಮಾಡಿದ್ಧೇನೆ ಹಾಗಾಗಿ ಇದನ್ನು ಅಮ್ಯೂಸ್​ಮೆಂಟ್​ ಪಾರ್ಕ್​ಗೆ ಹಣ ಕೊಟ್ಟು ಆಡಲು ಸಾಧ್ಯವೇ ಇಲ್ಲ ಎಂದಿದ್ದಾರೆ ಒಬ್ಬರು. ಇನ್ನೊಮ್ಮೆ ಇಂಥ ವಿಡಿಯೋಗಳನ್ನು ದಯವಿಟ್ಟು ಪೋಸ್ಟ್​ ಮಾಡಬೇಡಿ ಕನಸಿನಲ್ಲಿಯೂ ಭಯ ಬೀಳುವಂತಿದೆ ಎಂದಿದ್ದಾರೆ ಮತ್ತೊಬ್ಬರು. ಖಂಡಿತ ಈ ಆಟ ಆಡುವವರು ಡೈಪರ್ ಹಾಕಿಕೊಳ್ಳಲೇಬೇಕು ಎಂದಿದ್ಧಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು! ಜೋಕೆ ನೀವು ಪಾಪದ ಇಲಿಗಳೇ?

ಚಿಕ್ಕಂದಿನಲ್ಲಿ ಜಾತ್ರೆಗಳಲ್ಲಿ ಜಾಯಿಂಟ್​ ವ್ಹೀಲ್​ ಆಡಿಯೇ ನಾನು ವಾಂತಿ ಮಾಡಿಕೊಳ್ಳುತ್ತಿದ್ದೆ. ಇನ್ನು ಇದನ್ನು ಆಡಿದರೆ ಖಂಡಿತ ಹಾರ್ಟ್​ ಅಟ್ಯಾಕ್ ಎಂದಿದ್ಧಾರೆ ಮಗದೊಬ್ಬರು. ನಿಮಗೆ ರೋಲರ್ ಕೋಸ್ಟರ್​ ಆಡಿ ಅಭ್ಯಾಸವಿದೆಯೇ, ಇಂಥ ಆಟಗಳನ್ನು ಆಡುವುದಕ್ಕೆ ಇಷ್ಟ ಇದೆಯೇ? ಇಲ್ಲವಾದಲ್ಲಿ ಯಾಕೆ ಎಂದು ಕಾರಣ ತಿಳಿಸಬಹುದೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:03 pm, Thu, 20 July 23

Follow Us
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್