Viral: ಮರಗಳ ಪೊದೆಯಲ್ಲಿ ಅಡಗಿರುವ ಜಿಂಕೆಯನ್ನು ಗುರುತಿಸುವಿರಾ?
Brain Teaser : ಈ ಭ್ರಮಾತ್ಮಕ ಚಿತ್ರಗಳೇ ಹಾಗೇ. ಮೊದಲಿಗೆ ಏನೂ ಕಾಣುವುದಿಲ್ಲ ಆದರೆ ಸುಳಿವು ಕೊಟ್ಟಾಗ ಸ್ವಲ್ಪ ಅರಿವಿಗೆ ಬರುತ್ತವೆಯಾದರೂ ಗುಟ್ಟನ್ನೇನು ಬಿಟ್ಟುಕೊಡುವುದಿಲ್ಲ. ಏನಂತೀರಿ ಈ ವಿಷಯವಾಗಿ ನೀವು?
Optical Illusion : ಭ್ರಮಾತ್ಮಕ ಚಿತ್ರಗಳ ಪರಿಕಲ್ಪನೆ ಈಗಷ್ಟೇ ಪ್ರಚಲಿತವಾಗಿದ್ದಲ್ಲ. ಪುರಾತನ ಕಾಲದಿಂದ ಡಿಜಿಟಲ್ ಕಾಲದವರೆಗೂ ಜನರಿಗೆ ಸವಾಲುಗಳನ್ನು ಎಸೆಯುತ್ತಲೇ ಇವೆ. ಆದರೆ ಮಾಧ್ಯಮವಷ್ಟೇ ಬೇರೆ. ಇಂದಿನ ದಿನಮಾನಗಳಲ್ಲಿ ಡಿಜಿಟಲ್ ಮೂಲಕ ಇವು ಗಮನ ಸೆಳೆಯುತ್ತಿವೆ. ಹಿಂದಿನ ಕಾಲದಲ್ಲಿ ಗುಹೆಗಳಲ್ಲಿ, ಗೋಡೆಗಳಲ್ಲಿ, ದೇವಾಲಯದ ಕೆತ್ತನೆಗಳಲ್ಲಿ ಮತ್ತು ವರ್ಣಚಿತ್ರಗಳಲ್ಲಿ ಈ ಸವಾಲುಗಳನ್ನು ಕಾಣಬಹುದಾಗಿತ್ತು. ಇದೀಗ ವೈರಲ್ ಆಗಿರುವ ಈ ಕಾಡಿನ ಚಿತ್ರದಲ್ಲಿ ಒಂದು ಜಿಂಕೆ ಅಡಗಿದೆ. ಆರು ಸೆಕೆಂಡುಗಳ ಕಾಲಾವಕಾಶದಲ್ಲಿ ಅದನ್ನು ಕಂಡುಹಿಡಿಯಬೇಕು. ಪ್ರಯತ್ನಿಸುವಿರಾ?
ಇದನ್ನೂ ಓದಿ : Viral Video: ನಾವು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಯಾಣಿಸುತ್ತಿದ್ದೇವೆ; ಮನಗೆದ್ದ ಇಂಡಿಗೋ
ಈ ಚಿತ್ರವನ್ನು @kjt1084 ಎಂಬ ಟ್ವಿಟರ್ ಖಾತೆದಾರರು ಟ್ವೀಟ್ ಮಾಡಿದ್ದಾರೆ. ಇಲ್ಲಿ ಅಡಗಿರುವ ಪ್ರಾಣಿಯನ್ನು ಗುರುತಿಸಿ ಎಂದು ಕೇಳಿದ್ದಾರೆ. ನೋಡಿ ಆರು ಸೆಕೆಂಡುಗಳಲ್ಲಿ ನಿಮಗೆ ಈ ಪ್ರಾಣಿಯನ್ನು ಕಂಡು ಹಿಡಿಯಲು ಸಾಧ್ಯವಾಗುವುದೆ? ನೆಟ್ಟಿಗರನೇಕರು ಜಿಂಕೆಯನ್ನು ಕಂಡು ಹಿಡಿಯುವಲ್ಲಿ ಸೋತಿದ್ದಾರೆ. ನೀವು? ಪ್ರಯತ್ನ ವಿಫಲವಾದಲ್ಲಿ ಈ ಕೆಳಗಿನ ಚಿತ್ರವನ್ನು ನೋಡಿ.
ಈ ಭ್ರಮಾತ್ಮಕ ಚಿತ್ರಗಳೇ ಹಾಗೆ. ಮೊದಲಿಗೆ ಏನೂ ಸುಳಿವನ್ನು ಬಿಟ್ಟುಕೊಡುವುದಿಲ್ಲ. ಆದರೆ ಸುಳಿವು ಕೊಟ್ಟಾಗ ಅಥವಾ ಉತ್ತರವನ್ನು ಹೇಳಿದಾಗ ಅದು ಹೇಗೆ ನಮಗೆ ಕಾಣಲಿಲ್ಲ ಅಥವಾ ಹೊಳೆಯಲಿಲ್ಲ ಎಂದು ಅನ್ನಿಸುವುದುಂಟು. ಹೌದಲ್ಲವೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ