Viral: 54 ವರ್ಷಗಳ ನಂತರ ಪ್ಯಾರೀಸ್​ನಿಂದ ಬಂದ ಪತ್ರ

Paris : 1969ರಲ್ಲಿ ಪ್ಯಾರೀಸ್​ನಿಂದ ಕಳುಹಿಸಿದ ಪೋಸ್ಟ್‌ಕಾರ್ಡ್ 2023 ರಲ್ಲಿ ತಲುಪಿದೆ. ಅಂದರೆ ಆ ಪತ್ರ ತಲುಪಲು ಬರೋಬ್ಬರಿ 54 ವರ್ಷಗಳನ್ನು ತೆಗೆದುಕೊಂಡಿದೆ.

Viral: 54 ವರ್ಷಗಳ ನಂತರ ಪ್ಯಾರೀಸ್​ನಿಂದ ಬಂದ ಪತ್ರ
ಪ್ಯಾರೀಸ್​ನಿಂದ ಬಂದ ಪತ್ರ
Follow us
ಶ್ರೀದೇವಿ ಕಳಸದ
|

Updated on: Jul 21, 2023 | 10:48 AM

America : ಈಗೇನಿದ್ದರೂ ಮೇಲ್​ಕಾಲ, ಮೊಬೈಲ್​ಕಾಲ. ಹಾಗಾಗಿ ಪೋಸ್ಟ್​ಕಾರ್ಡ್​ (Post Card) ಅಂತರದೇಶಿ ಪತ್ರಗಳ ಮೇಲೆ ಅವಲಂಬಿತರಾಗಿರುವವರು ಇಲ್ಲವೆಂದೇ ಹೇಳಬಹುದು. ಆದರೆ ಪತ್ರೋತ್ತರ ಕಾಲದಲ್ಲಿ ಅದೊಂದೇ ಸಂವಹನ ಮಾರ್ಗ. ಹಾಗಾಗಿ ಪತ್ರಗಳಿಗಾಗಿ ಕಾಯುವುದು ಅನಿವಾರ್ಯವಾಗಿತ್ತು. ಕೆಲವೊಮ್ಮೆ ಅವು ತಡವಾಗಿಯೂ ತಲುಪುತ್ತಿದ್ದವು, ತಡವೆಂದರೆ ವಾರ ಎರಡು ವಾರ ಬಹಳ ಎಂದರೆ ಮೂರು ವಾರ ಎಂದುಕೊಳ್ಳಬಹುದು. ಆದರೆ ಇದೀಗ ವೈರಲ್ ಆಗಿರುವ ಈ ಪತ್ರ ಬರೋಬ್ಬರಿ 54 ವರ್ಷಗಳ ನಂತರ ತಲುಪಿದೆ.

ಫೇಸ್‌ಬುಕ್ ಖಾತೆದಾರರಾದ ಜೆಸ್ಸಿಕಾ ಮೀನ್ಸ್ ಈ ಪತ್ರವುಳ್ಳ ಪೋಸ್ಟ್​ ಹಂಚಿಕೊಂಡಿದ್ದಾರೆ. ‘ಈ ಪೋಸ್ಟ್​ ಅನ್ನು ರೀಶೇರ್​ ಮಾಡಿಕೊಳ್ಳಿ. ಈ ಮೂಲಕ ಇದರ ರಹಸ್ಯ ಬಿಡಿಸಲು ಸಹಾಯ ಮಾಡಿ. ಈ ಪತ್ರವನ್ನು ಯಾರು ಬರೆದಿರಬಹುದು ಎಂಬ ಸುಳಿವು ಸಿಗಬಹುದು.’ ಎಂದಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ರಜೆಯ ಮಜೆ; ಮಕ್ಕಳೊಂದಿಗೆ ಬೋಟಿಂಗ್ ಹೊರಟ ನಾಯಿ

‘ಈ ಪೋಸ್ಟ್​ ಕಾರ್ಡ್​ ಮೇಲೆ ಮಿಸ್ಟರ್ ಅಂಡ್​ ಮಿಸೆಸ್​ ರೆನೆ ಗ್ಯಾಗ್ನನ್ಸ್​​​ ಎಂದು ಬರೆಯಲಾಗಿದೆ. ಇದನ್ನು 1969ರ ಮಾರ್ಚ್​​ 15ರಂದು ಪ್ಯಾರೀಸ್​ನಿಂದ ಪೋಸ್ಟ್​ ಮಾಡಲಾಗಿದೆ. ತಲ್ಲಹಸ್ಸಿಯ ಪೋಸ್ಟ್​ ಅನ್ನು ಇದು ತಲುಪಿದ್ದು 2023ರ ಜು. 12ರಂದು. ಇದರ ಮೇಲೆ ಪೋಸ್ಟ್​ ಆಫೀಸಿನ ದಿನಾಂಕ ಮುದ್ರೆಯನ್ನೂ ಕಾಣಬಹುದಾಗಿದೆ.  ಪೋರ್ಟ್‌ಲ್ಯಾಂಡ್‌ನ ಅಲೆನ್ ಅವೆನ್‌ನಲ್ಲಿರುವ ನನ್ನ ಮನೆಯ ಮೂಲ ಮಾಲಿಕರ ಹೆಸರು ಗ್ಯಾಗ್ನನ್ಸ್​. 1930ರಲ್ಲಿ ಈ ಮನೆಯನ್ನು ಕಟ್ಟಿದ್ದಾರೆ. ಅಕ್ಕಪಕ್ಕದ ಮನೆಯವರ ಪ್ರಕಾರ 1980ರ ತನಕವೂ ಅವರು ಇಲ್ಲಿ ವಾಸವಾಗಿದ್ದರು.’ ಎಂದಿದ್ದಾರೆ ಜೆಸ್ಸಿಕಾ.

ಇದನ್ನೂ ಓದಿ : Viral Video: ಇಲ್ಲಿ ಈ ಆಟ ಆಡುವವರೆಲ್ಲ ಡೈಪರ್ ಹಾಕಿಕೊಳ್ಳಲೇಬೇಕು!

ಈ ಪೋಸ್ಟ್ ಅನ್ನು ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಕೆಲವರು ಈ ಪೋಸ್ಟ್​ಗೆ ಪ್ರತಿಕ್ರಿಯಿಸಿ ಈ ಪತ್ರದಲ್ಲಿರುವ ವಿಳಾಸಿಗರು ನಿಮಗೆ ಸಂಬಂಧಿಯೇ? ಎಂದು ಕೆಲವರನ್ನು ಟ್ಯಾಗ್ ಮಾಡಿ ಕೇಳಿದ್ಧಾರೆ.

ನಿಮಗೂ ಪತ್ರಗಳು ತಡವಾಗಿ ತಲುಪಿರಬಹುದಲ್ಲ? ಇಂಥ ನೆನಪುಗಳಿವೆಯೇ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ