Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಜೆಯ ಮಜೆ; ಮಕ್ಕಳೊಂದಿಗೆ ಬೋಟಿಂಗ್ ಹೊರಟ ನಾಯಿ

Dog Lovers : ಇದೆಂಥ ಮಜಾ? ಇದು ನಾಯಿಗೆ ಕೊಡುತ್ತಿರುವ ಸಜೆ. ಅವುಗಳ ಕೂಲಿಂಗ್​ ಗ್ಲಾಸ್​ ಹಿಂದೆ ಅದೆಷ್ಟು ಭಯ, ಆತಂಕ ಅಡಗಿದೆಯೋ. ನಿಮ್ಮ ಖುಷಿಗಾಗಿ ನಾಯಿಗಳಿಗೆ ಹೀಗೆಲ್ಲ ಹಿಂಸೆ ಕೊಡಬೇಡಿ ಎನ್ನುತ್ತಿದ್ದಾರೆ ಕೆಲ ನೆಟ್ಟಿಗರು. ನೀವು?

Viral Video: ರಜೆಯ ಮಜೆ; ಮಕ್ಕಳೊಂದಿಗೆ ಬೋಟಿಂಗ್ ಹೊರಟ ನಾಯಿ
ದೋಣಿ ವಿಹಾರದಲ್ಲಿ ನಾಯಿ ಕುಟುಂಬ
Follow us
ಶ್ರೀದೇವಿ ಕಳಸದ
|

Updated on: Jul 20, 2023 | 6:28 PM

Dog Lovers : ರಜೆಯಲ್ಲಿ ಮಜಾ ಮಾಡಲು ಮನುಷ್ಯರಿಗಷ್ಟೇ ಹಕ್ಕಿದೆಯೇ? ನಮಗೂ ಸಮಾನ  ಹಕ್ಕು ಇದೆ. ನಿಮ್ಮಂತೆ ಶಾಪಿಂಗ್​ ಮಾಡಿ ನಮಗೆ ಬೇಕಾದ ಬಟ್ಟೆ ಖರೀದಿಸಿ, ಬಣ್ಣಬಣ್ಣದ ಕೂಲಿಂಗ್​ ಗ್ಲಾಸ್, ಕ್ಯಾಪ್​ ಹಾಕಿಕೊಂಡು ನಮ್ಮ ಮಕ್ಕಳನ್ನು ನಾವೂ ಬೋಟಿಂಗ್​ಗೆ (Boating) ಕರೆದುಕೊಂಡು ಹೋಗುತ್ತೇವೆ. ಇದಕ್ಕೆ ನಿಮ್ಮ ತಕರಾರು ಏನಾದರೂ ಇದ್ದರೆ ಅದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ನಾವಂತೂ ಮಸ್ತ್ ಮಜಾ ಮಾಡುತ್ತಿದ್ದೇವೆ! ಎಂದು ಬಿಂದಾಸ್ ಆಗಿ ನಾಯಿಕುಟುಂಬವೊಂದು ಬೋಟಿಂಗ್ ಮಾಡುತ್ತಿದೆ. ಒಂದೊಂದು ನಾಯಿಯ ಹಾವಭಾವವನ್ನು ನೋಡಿದರೆ ಖಂಡಿತ ನಗುತ್ತೀರಿ, ನಿಮ್ಮ ಮನೆಯ ಮಕ್ಕಳಿಗೂ ತೋರಿಸುತ್ತೀರಿ!

ಆಮೇಲೆ ಅಷ್ಟೇ! ನಾಯಿ ತರೋಣ ಎಂದು ರಾಗ ತೆಗೆಯುವ ನಿಮ್ಮ ಮಕ್ಕಳನ್ನು ಸಮಾಧಾನಿಸಲು ನೀವು ರಾತ್ರಿಯಿಡೀ ಇಂಥ ನಾಯಿಗಳ ವಿಡಿಯೋಗಳನ್ನು ತೋರಿಸುತ್ತ ಕುಳಿತುಕೊಳ್ಳಬೇಕಾಗುತ್ತದೆ. ಈವತ್ತಷ್ಟೇ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ ಸುಮಾರು 3 ಲಕ್ಷ ಜನರು ನೋಡಿದ್ದಾರೆ. 4,000ಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಸುಮಾರು 600 ಜನರು ರೀಟ್ವೀಟ್ ಮಾಡಿದ್ದಾರೆ. ಈ ನಾಯಿಕುಟುಂಬದ ದೋಣಿಗಿಂತ ಜೋರಾಗಿ ಈ ವಿಡಿಯೋ ಓಡುತ್ತಿದೆ!

ಇದನ್ನೂ ಓದಿ : Viral Video: ಇಲ್ಲಿ ಈ ಆಟ ಆಡುವವರೆಲ್ಲ ಡೈಪರ್ ಹಾಕಿಕೊಳ್ಳಲೇಬೇಕು!

ಆದರೆ ನಾಯಿಗಳಿಗೆ ಈ ದೋಣಿವಿಹಾರ ರಜೆಯಲ್ಲ ಸಜೆ! ಎನ್ನುತ್ತಿದ್ದಾರೆ ಕೆಲ ನೆಟ್ಟಿಗರು. ನನಗಂತೂ ನಾಯಿಗಳು ತಮ್ಮ ಬದುಕನ್ನು ಸುಂದರವಾಗಿ ಮತ್ತು ಮಜಾ ಮಾಡುತ್ತ ಕಳೆಯುತ್ತಿವೆ ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೂ ಕೆಲವರು. ನಾವೂ ನಮ್ಮ ನಾಯಿಗಳನ್ನು ಹೀಗೆ ದೋಣಿವಿಹಾರಕ್ಕೆ ಆಗಾಗ ಕರೆದೊಯ್ಯುತ್ತೇವೆ ಎಂದಿದ್ದಾರೆ ಒಂದಿಷ್ಟು ಜನ.

ಇದನ್ನೂ ಓದಿ : Viral Video: ಎಐ ಬಾಲಿವುಡ್​ ಬಾರ್ಬಿ: ನಿಮ್ಮ ನೆಚ್ಚಿನ ನಟಿ ಇಲ್ಲಿದ್ದಾರೆಯೇ?

ಅಯ್ಯೋ ನನಗಿಂತ ಅತ್ಯುತ್ತಮವಾದ ಬದುಕನ್ನು ಅವು ಅನುಭವಿಸುತ್ತಿವೆಯಲ್ಲ! ಎಂದಿದ್ದಾರೆ ಒಬ್ಬರು. ನೀವು ನಿಮ್ಮ ಸಾಕುನಾಯಿಗಳನ್ನು ಹೇಗೆ ಖುಷಿಪಡಿಸುತ್ತೀರಿ? ನಿಮ್ಮ ಖುಷಿಯ ಮಾರ್ಗ ಮತ್ತು ಅವುಗಳ ಖುಷಿಯ ಮಾರ್ಗ ಎರಡೂ ಒಂದೇ? ಪ್ರತಿಕ್ರಿಯಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ