Viral Video: ದಪ್ಪನೆಯ ಮಹಿಳೆಯನ್ನು ಅವಮಾನಿಸಿದ ವಿಮಾನ ಪ್ರಯಾಣಿಕ; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
Fat : ಮೀಸಲಿರಿಸಿದ್ದ ಮಧ್ಯದ ಸೀಟಿನಲ್ಲಿ ಆಕೆ ಯಾಕೆ ಕುಳಿತಿಲ್ಲ ಎನ್ನುವುದು ಕಣ್ಣಿಗೆ ಕಾಣುವ ಸತ್ಯ. ಆದರೂ ಫೋಟೋ ಸಮೇತ ಅದನ್ನು ಟ್ವೀಟ್ ಮಾಡಿ ಅಪಹಾಸ್ಯ ಮಾಡುವುದು ವಿಕೃತ ಮನಸ್ಥಿತಿ.
Body Shaming : ದಪ್ಪಗಿನ ಮಹಿಳೆಯನ್ನು (Fat Lady) ಅವಮಾನಿಸಲೆಂದೇ ಆಕೆಯ ಫೋಟೋ ಟ್ವೀಟ್ ಮಾಡಿದ ಟ್ವಿಟರ್ ಖಾತೆದಾರನನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಪೋಸ್ಟ್ ವೈರಲ್ ಆಗುತ್ತಿದೆ; ಇದನ್ನು ನೋಡಿಯಾದರೂ ನೀವು ನಿಮಗೆಂದೇ ಮೀಸಲಾಗಿರಿಸಿದ ಮಧ್ಯದ ಸೀಟಿನಲ್ಲಿ ಹೋಗಿ ಕುಳಿತುಕೊಳ್ಳಬಹುದೆ? ಎಂಬ ಒಕ್ಕಣೆಯನ್ನು ಬರೆದು ಈತ ಟ್ವೀಟ್ ಮಾಡಿದ್ದಾನೆ. ಇವನ ಈ ಮನಸ್ಥಿತಿಯನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ. ಇನ್ನೊಬ್ಬರ ದೇಹ, ಬಣ್ಣದ ಕುರಿತು ಅಪಹಾಸ್ಯ ಮಾಡಿ ಆ ಮೂಲಕ ವಿಕೃತ ಆನಂದವನ್ನು ಇಂಥ ಕೆಲವರು ಪಡೆಯುತ್ತಾರೆ. ದುರಾದೃಷ್ಟವೆಂದರೆ ಈ ಕ್ರೂರ ಸತ್ಯವನ್ನು ನೋಡಿಯೂ ನೋಡದವರಂತೆ ಸಮಾಜವೂ ನಿರ್ಲಕ್ಷಿಸುತ್ತ ಬಂದಿದೆ.
You got to get into your assigned middle seat and see this, what do you do/say? pic.twitter.com/BZ3PcOPo6h
ಇದನ್ನೂ ಓದಿ— E (@ElijahSchaffer) July 16, 2023
ಅನೇಕರು ತಮ್ಮ ಅನುಭವಗಳನ್ನು ಈ ಟ್ವೀಟಿನಡಿ ಹಂಚಿಕೊಂಡಿದ್ದಾರೆ. ‘ನಾನು ಎಕಾನಾಮಿ ಕ್ಲಾಸ್ನಲ್ಲಿ 17 ಗಂಟೆಗಳ ಸುದೀರ್ಘ ಪ್ರಯಾಣದಲ್ಲಿ ಒಬ್ಬ ದಪ್ಪಗಿನ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದೆ. ಆಕೆಯ ಹೆಸರು ಏಂಜೆಲ್. ಕ್ಷಮಿಸಬೇಕು, ನಾನು ಸಾಕಷ್ಟು ಜಾಗವನ್ನು ಆಕ್ರಮಿಸಿಕೊಂಡಿದ್ದೇನೆ ಎಂದರು. ಅಕಸ್ಮಾತ್ ನಿಮಗೆ ನಿದ್ರೆ ಬಂದರೆ ನನ್ನನ್ನು ದಿಂಬಾಗಿಸಿಕೊಳ್ಳಬಹುದು ಎಂದು ಹೇಳಿದರು. ನಂತರ ತಮ್ಮ ಮಗಳ ಬಗ್ಗೆ ಮತ್ತು ತಮ್ಮ ಪ್ರಾಣಿಪ್ರೇಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಅವರು ಹಂಚಿಕೊಂಡರು. ನಿಜವಾದ ರೀತಿಯಲ್ಲಿ ಅವರೊಬ್ಬ ಸಂತುಷ್ಟ ವ್ಯಕ್ತಿ ಎನ್ನಿಸಿತು. ಈತನಕದ ವಿಮಾನಯಾನದಲ್ಲಿ ಪಡೆದುಕೊಂಡ ಒಳ್ಳೆಯ ಅನುಭವಗಳ ಪೈಕಿ ಇದೂ ಒಂದು’ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ನಾವು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರೊಂದಿಗೆ ಪ್ರಯಾಣಿಸುತ್ತಿದ್ದೇವೆ; ಮನಗೆದ್ದ ಇಂಡಿಗೋ
ಈ ಟ್ವೀಟ್ ಅನ್ನು ಈಗಾಗಲೇ 14.8 ಮಿಲಿಯನ್ ಜನರು ನೋಡಿದ್ದಾರೆ. 30.3 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸುಮಾರು 1,200 ಜನರು ರೀಟ್ವೀಟ್ ಮಾಡಿದ್ದಾರೆ. ಅಕಸ್ಮಾತ್ ಆಕೆ ನನ್ನ ಪಕ್ಕದಲ್ಲಿ ಕುಳಿತಿದ್ದರೆ ಖಂಡಿತ ನಾನು ನಿಮ್ಮಂತೆ ಟ್ವೀಟ್ ಮಾಡುತ್ತಿರಲಿಲ್ಲ, ನನ್ನಲ್ಲಿ ಇನ್ನೂ ಮನುಷ್ಯತ್ವ ಇದೆ ಎಂದಿದ್ದಾರೆ ಮತ್ತೊಬ್ಬರು. ದಪ್ಪಗಿರುವ ವ್ಯಕ್ತಿಗಳು ಎರಡು ಸೀಟ್ ಬುಕ್ ಮಾಡುವುದು ಒಳ್ಳೆಯದು. ಆಗ ಈ ಎಲ್ಲ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದಿದ್ದಾರೆ ಮಗದೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:35 pm, Mon, 24 July 23