AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸ್ಪೈರಲ್​ ಬನಾನಾ ಟ್ವಿಸ್ಟರ್ ಎಲ್ಲಿ ಸಿಗುತ್ತದೆ? ಹುಡುಕಾಟದಲ್ಲಿ ಬೆಂಗಳೂರಿಗರು

Banana : ಈ ಹೊಸ ಬಗೆಯ ಸ್ಟ್ರೀಟ್​ ಫುಡ್​ ನೆಟ್ಟಿಗರಲ್ಲಿ ಮೆಚ್ಚುಗೆಯನ್ನೂ ಕುತೂಹಲವನ್ನೂ ಮತ್ತು ತಕರಾರನ್ನೂ ಒಟ್ಟಿಗೇ ಹುಟ್ಟುಹಾಕಿದೆ. ಇದನ್ನು ಬಾಳೆಕಾಯಿ ಚಿಪ್ಸ್​ನ ತಂಗಿ ಎಂತಲೂ ಕರೆಯಬಹುದು.

Viral Video: ಸ್ಪೈರಲ್​ ಬನಾನಾ ಟ್ವಿಸ್ಟರ್ ಎಲ್ಲಿ ಸಿಗುತ್ತದೆ? ಹುಡುಕಾಟದಲ್ಲಿ ಬೆಂಗಳೂರಿಗರು
ಸ್ಪೈರಲ್ ಬನಾನಾ ಟ್ವಿಸ್ಟರ್
ಶ್ರೀದೇವಿ ಕಳಸದ
|

Updated on:Jul 24, 2023 | 11:31 AM

Share

Twister : ಪೊಟ್ಯಾಟೋ ಟ್ವಿಸ್ಟರ್! ​ಹೆಸರು ಕೇಳಿದ ತಕ್ಷಣ ಎಂಥವರಿಗೂ ನೀರು ಬರುತ್ತದೆ. ಆಲೂಗಡ್ಡೆ ಅಥವಾ ಬಟಾಟಿಯ ರುಚಿಯೇ ಅಂಥದ್ದು. ಪೊಟ್ಯಾಟೋ ಟ್ವಿಸ್ಟರ್​ ಎಂದರೆ ಆಲೂಗಡ್ಡೆ ಚಿಪ್ಸ್​ನ ತಂಗಿ ಎನ್ನಬಹುದು. ಇತ್ತೀಚಿನ ವರ್ಷಗಳಲ್ಲಿ ಜನರ ನಾಲಗೆಯ ರುಚಿಯನ್ನಾಳುತ್ತಿರುವ ಸಂಜೆಯ ತಿಂಡಿಗಳಲ್ಲಿ ಇದೂ ಒಂದು. ಬಗೆಬಗೆಯ ಫ್ಲೇವರ್​​ಗಳಲ್ಲಿ ಇದು ಎಲ್ಲೆಡೆಯೂ ಲಭ್ಯ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಟ್ವಿಸ್ಟರ್​ ಇಲ್ಲಿ ಹೊಸತನವನ್ನು ಪಡೆದುಕೊಂಡಿದೆ. ಆಲೂಗಡ್ಡೆಯ ಬದಲಾಗಿ ಬಾಳೆಕಾಯಿಯನ್ನು ಉಪಯೋಗಿಸಿ ಬನಾನಾ ಟ್ವಿಸ್ಟರ್ (Spiral Banana Twister)​ ಮಾಡಲಾಗಿದೆ. ಎಲ್ಲಿ ಎಂದು ಕೇಳುತ್ತಿರುವಿರಾ? ನಿಮ್ಮ ಬೆಂಗಳೂರಿನಲ್ಲಿಯೇ!

ನೆಟ್ಟಿಗರು ಈ ವಿಡಿಯೋ ನೋಡಿ ಆರೋಗ್ಯಕರ ಆಯ್ಕೆ! ಎಂದು ಹೇಳುತ್ತಲೇ ಸಲಹೆಗಳನ್ನೂ ನೀಡುತ್ತಿದ್ಧಾರೆ.  ಆಲೂಗಡ್ಡೆಗಿಂತ ಇದು ಉತ್ತಮ ಆಯ್ಕೆ ಆದರೆ ನೀವು ಇದಕ್ಕೆ ಕೃತಕ ಬಣ್ಣಗಳನ್ನು ಸೇರಿಸದೇ ಮಾಡಬಹುದಿತ್ತು ಮತ್ತು ಎಣ್ಣೆಯ ಗುಣಮಟ್ಟ ಚೆನ್ನಾಗಿಲ್ಲವೆಂದು ತೋರುತ್ತಿದೆ ಎಂದಿದ್ದಾರೆ ಅನೇಕರು. ಬೆಂಗಳೂರಿನ ಯಾವ ಸ್ಥಳದಲ್ಲಿ ಈ ಅಂಗಡಿ ಇದೆ ಎಂದು ಕೇಳಿದ್ದಾರೆ ಕೆಲವರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral: ‘13 ವರ್ಷಗಳ ಕಾಲ ಗೃಹಿಣಿಯಾಗಿದ್ದ’ ಲಿಂಕ್ಡ್​ಇನ್​ನಲ್ಲಿ ಸಿವಿ ವೈರಲ್

ಈ ತನಕ ಈ ವಿಡಿಯೋ ಅನ್ನು 132 ಮಿಲಿಯನ್​ ಜನರು ನೋಡಿದ್ದಾರೆ. 14,000 ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೃತಕ ಬಣ್ಣಗಳನ್ನು ಹಾಕುವ ಅವಶ್ಯಕತೆ ಏನಿದೆ? ಆರೋಗ್ಯ ಕೆಟ್ಟರೆ ಯಾರು ಹೊಣೆ? ವ್ಯಾಪಾರದ ಆಕರ್ಷಣೆಗಾಗಿ ನೀವು ಮಾಡುವ ಕೆಲಸದಿಂದ ನಿಮ್ಮ ಕಾಲ ಮೇಲೆ ನೀವೇ ಕಲ್ಲು ಹಾಕಿಕೊಳ್ಳುತ್ತೀರಿ. ಹೀಗೆಲ್ಲ ಮಾಡದೆ ಆರೋಗ್ಯಕರ ಕ್ರಮದಲ್ಲಿ ತಿಂಡಿಗಳನ್ನು ತಯಾರಿಸಿ ಎಂದು ಹೇಳುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು! ಜೋಕೆ ನೀವು ಪಾಪದ ಇಲಿಗಳೇ? 

ಯಮ್ ಯಮ್ ಇಂಡಿಯಾ ಎಂಬ ಫೇಸ್​ಬುಕ್​ ಪುಟದಲ್ಲಿ ಈ ವಿಡಿಯೋ ಟ್ವೀಟ್ ಮಾಡಲಾಗಿದ್ದು, ಬೆಂಗಳೂರಿನ ಯಾವ ಭಾಗ ಮತ್ತು ಸ್ಥಳದಲ್ಲಿ ಸ್ಪೈರಲ್ ಬನಾನಾ ಟ್ವಿಸ್ಟರ್ ತಯಾರಿಸಲಾಗುತ್ತದೆ ಎಂಬ ವಿವರವನ್ನುಈ ಪೋಸ್ಟ್​ನಡಿ ನೀಡಲಾಗಿಲ್ಲ. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:30 am, Mon, 24 July 23