Viral: ‘13 ವರ್ಷಗಳ ಕಾಲ ಗೃಹಿಣಿಯಾಗಿದ್ದೆ’ ಲಿಂಕ್ಡ್​ಇನ್​ನಲ್ಲಿ ಸಿವಿ ವೈರಲ್

Woman : ಗೃಹಿಣಿಯೊಬ್ಬಳ ಸಿವಿ ಲಿಂಕ್ಡ್​ಇನ್​ನಲ್ಲಿ ವೈರಲ್ ಆಗಿದೆ. 13 ವರ್ಷಗಳ ಕಾಲ ಗೃಹಿಣಿಯಾಗಿದ್ದ ಆಕೆ ಪ್ರಾಮಾಣಿಕವಾಗಿ, ಆತ್ಮವಿಶ್ವಾಸದಿಂದ ತಾನು ನಿರ್ವಹಿಸಿದ ಕೆಲಸಗಳ ಪಟ್ಟಿ ಮಾಡಿದ್ದನ್ನು ಅಪ್​ಡೇಟ್ ಮಾಡಿದ್ದಾಳೆ.

Viral:  ‘13 ವರ್ಷಗಳ ಕಾಲ ಗೃಹಿಣಿಯಾಗಿದ್ದೆ' ಲಿಂಕ್ಡ್​ಇನ್​ನಲ್ಲಿ ಸಿವಿ ವೈರಲ್
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Jul 24, 2023 | 10:56 AM

Homemaker : ಹೌಸ್​ವೈಫ್ ಅಥವಾ ಹೋಮ್​ಮೇಕರ್​ ಎಂದರೆ ಕಡೆಗಣ್ಣಿನಿಂದಲೇ ನೋಡುತ್ತದೆ ನಮ್ಮ ಸಮಾಜ. ಆದರೆ ಆಕೆ ಇಡೀ ಕುಟುಂಬವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ರೀತಿ ಯಾವ ಹುದ್ದೆಗಿಂತಲೂ ಕಡಿಮೆಯಲ್ಲ. ಇದೀಗ ಲಿಂಕ್ಡ್​ಇನ್​ನಲ್ಲಿ ವೈರಲ್ ಆಗಿರುವ ಈ ಪೋಸ್ಟ್​ ಗಮನಿಸಿ. ಆಕೆ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕವಾಗಿ ಹೋಮ್​ಮೇಕರ್​ ಜವಾಬ್ದಾರಿಗಳನ್ನು ಪೂರೈಸಿರುವ ಪಟ್ಟಿಯನ್ನು ತನ್ನ ಸಿವಿಯಲ್ಲಿ (CV) ಸೇರಿಸಿದ್ದಾಳೆ. ಆಕೆ ಒಂದು ಕಂಪೆನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ್ದು 2009 ಕೊನೆ. ಆನಂತರ ಇದೀಗ ಮತ್ತೊಂದು ಕಂಪೆನಿಯಲ್ಲಿ  ಉದ್ಯೋಗಾಕಾಂಕ್ಷಿಯಾಗಿ ಹೊರಟಾಗ ಆಕೆಯ 13 ವರ್ಷಗಳ ಕಾಲ ಹೋಮ್​ಮೇಕರ್​ ಅನುಭವ ನೆಟ್ಟಿಗರಿಂದ ವಿಶೇಷವಾಗಿ ಗಮನ ಸೆಳೆದಿದೆ.

ಸಿವಿಯಲ್ಲಿ ಆಕೆ ನಿಸ್ಸಂಕೋಚದಿಂದ ತಾನು 13 ವರ್ಷಗಳ ಕಾಲ ಹೋಮ್​ಮೇಕರ್ ಆಗಿ ನಿರ್ವಹಿಸಿದ ಕೆಲಸಗಳ ಪಟ್ಟಿಯನ್ನೇ ನೀಡಿದ್ದಾಳೆ. ಆಕೆಯ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ಸಿವಿಯನ್ನು ಗ್ರೋಥಿಕ್​ ಎಂಬ ಕಂಟೆಂಟ್​ ಮಾರ್ಕೆಟಿಂಗ್​ ಕಂಪೆನಿಯ ಸ್ಥಾಪಕ ಯುಗಾಂಶ್​ ಚೋಕ್ರಾ ಲಿಂಕ್ಡ್​ಇನ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಇಲ್ಲಿ ಈ ಆಟ ಆಡುವವರೆಲ್ಲ ಡೈಪರ್ ಹಾಕಿಕೊಳ್ಳಲೇಬೇಕು!

ಈಕೆಯ ಸಿವಿಯಿಂದಾಗಿ ಪ್ರಭಾವಿತರಾದ ಯುಗಾಂಶ್​, ‘ಆಕೆಯ ಸಿವಿ ನೋಡಿದ್ದೇನೆ. 13 ವರ್ಷಗಳ ಕಾಲ ಹೋಮ್​ಮೇಕರ್​ ಅನುಭವ ಪಡೆದ ಈಕೆ ನಿಜಕ್ಕೂ ಸ್ತುತ್ಯಾರ್ಹಳು. ಕುಟುಂಬವನ್ನು ನಿಭಾಯಿಸುವುದು ನಿಜಕ್ಕೂ ಸವಾಲಿನದು. ಆದರೆ ಸಮಾಜವು ಇದನ್ನು ತಿರಸ್ಕಾರ ದೃಷ್ಟಿಯಿಂದ ನೋಡುತ್ತದೆ. ಕುಟುಂಬ ನಿರ್ವಹಣೆಗೆ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಸಣ್ಣ ಮಾತೇನಲ್ಲ’ ಎಂದಿದ್ದಾರೆ.

ಇದನ್ನೂ ಓದಿ : Viral Video: ರಜೆಯ ಮಜೆ; ಮಕ್ಕಳೊಂದಿಗೆ ಬೋಟಿಂಗ್ ಹೊರಟ ನಾಯಿ

ಗೃಹಿಣಿಯರನ್ನು ಸಮಾಜವು ನಿಕೃಷ್ಠವಾಗಿ ಕಾಣುತ್ತದೆ ಆದರೆ ಆಕೆಯ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸದಿಂದ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಅಬ್ಬಾ ಈಕೆ ನಿಜಕ್ಕೂ ಪ್ರಾಮಾಣಿಕಳು, ಅಸಹ್ಯ ಪಟ್ಟುಕೊಳ್ಳದೆ ಇದನ್ನು ಕೂಡ ಆಕೆ ಸಿವಿಯಲ್ಲಿ ಸೇರಿಸಿದ್ದಾಳೆ. ಗೃಹಿಣಿಯಾದವಳಿಗೆ ಸಮಯ ನಿರ್ವಹಣೆ, ನಿರ್ಧರಿಸುವ ಶಕ್ತಿ ಮತ್ತು ಚುರುಕುತನದಂಥ ಕೌಶಲದ ಜೊತೆಗೆ ರಜೆಯೇ ಇಲ್ಲದ ಕಠಿಣ ದುಡಿಮೆಯ ಅರಿವಿರುತ್ತದೆ ಎಂದಿದ್ದಾರೆ ಅವರು.

ಇದನ್ನೂ ಓದಿ : Viral Video: ಮಗಳು ವೈದ್ಯೆಯಾದ ಸುದ್ದಿ ಕೇಳಿ ಕಣ್ಣೀರಾದ ಅಪ್ಪ

ಆದರೆ ಸಿವಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹೊಗಳಿರುವ ಸಂಸ್ಥೆಯ ಸ್ಥಾಪಕರು ಮಾತ್ರ ಅರ್ಹತೆ ಮತ್ತು ಬಜೆಟ್ ಸಮಸ್ಯೆಯಿಂದ ಆಕೆಯನ್ನು ತಮ್ಮ ಕಂಪೆನಿಯಲ್ಲಿ ಉದ್ಯೋಗಿಯಾಗಿ ನೇಮಿಸಿಕೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:42 am, Mon, 24 July 23