AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಸ್ಟಾಗ್ರಾಮ್​​ನಲ್ಲಿ ಅರಳಿತು ಪ್ರೀತಿ; ಪ್ರಿಯಕರನಿಗಾಗಿ ಭಾರತಕ್ಕೆ ಬಂದ 49ವರ್ಷದ ಪೋಲೆಂಡ್‌ ಮಹಿಳೆ

ಪೋಲೆಂಡ್‌ನ 49 ವರ್ಷದ ಮಹಿಳೆಯೊಬ್ಬರು ಜಾರ್ಖಂಡ್‌ನ ತನ್ನ 35 ವರ್ಷದ ಪ್ರಿಯರಕನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದಾರೆ. ಇನ್ನಷ್ಟು ವಿವರ ಇಲ್ಲಿದೆ.

ಇನ್ಸ್ಟಾಗ್ರಾಮ್​​ನಲ್ಲಿ ಅರಳಿತು ಪ್ರೀತಿ; ಪ್ರಿಯಕರನಿಗಾಗಿ ಭಾರತಕ್ಕೆ ಬಂದ 49ವರ್ಷದ ಪೋಲೆಂಡ್‌ ಮಹಿಳೆ
ಬಾರ್ಬರಾ ಪೋಲಾಕ್​​​ ಮತ್ತು ಶಾದಾಬ್​​​​ ಮಲ್ಲಿಕ್Image Credit source: India Today
ಅಕ್ಷತಾ ವರ್ಕಾಡಿ
|

Updated on: Jul 23, 2023 | 5:48 PM

Share

ಇತ್ತೀಚಿನ ದಿನಗಳಲ್ಲಿ ಆನ್ಲೈನ್​​ ಪ್ರೇಮ್​​​ ಕಹಾನಿಗಳು ಹೆಚ್ಚಾಗಿ ಸುದ್ದಿಯಲ್ಲಿವೆ. ಇದೀಗಾ ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಪೋಲೆಂಡ್‌ನ 49 ವರ್ಷದ ಮಹಿಳೆಯೊಬ್ಬರು ಜಾರ್ಖಂಡ್‌ನ ತನ್ನ 35 ವರ್ಷದ ಪ್ರಿಯರಕನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದಾರೆ. ಈ ಸುದ್ದಿ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​​ ಆಗಿದೆ. 2021ರಲ್ಲಿ ಪೋಲೆಂಡ್‌ನ ಬಾರ್ಬರಾ ಪೋಲಾಕ್​​​(49) ಮತ್ತು ಜಾರ್ಖಂಡ್‌ನ ಶಾದಾಬ್​​​​ ಮಲ್ಲಿಕ್​​​(35) ಇವರಿಬ್ಬರಿಗೆ ಇನ್ಸ್ಟಾಗ್ರಾಮ್​ ಮೂಲಕ ಪರಿಚಯವಾಗಿದೆ. ವರ್ಷ ಕಳೆದಂತೆ ಪರಿಚಯ ಪ್ರೀತಿಯಾಗಿ ತಿರುಗಿದೆ. ಇದೀಗಾ ಬಾರ್ಬರಾ ಪೋಲಾಕ್ ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ತನ್ನ 6ವರ್ಷದ ಮಗುವಿನೊಂದಿಗೆ 2027 ರವರೆಗೆ ಮಾನ್ಯವಾಗಿರುವ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ.

ಇದೀಗಾ ಇವರಿಬ್ಬರು ಸಪ್ತಪದಿ ತುಳಿಯಲು ನಿರ್ಧರಿಸಿದ್ದು, ಇದಕ್ಕಾಗಿ ಹಜಾರಿಬಾಗ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ನ್ಯಾಯಾಲಯದಲ್ಲಿ ಮದುವೆಗೆ ಅರ್ಜಿ ಸಲ್ಲಿಸಿದ್ದಾರೆ. ಬಾರ್ಬರಾ ಪೋಲಾಕ್​​ಗೆ ಈಗಾಗಲೇ ಮದುವೆಯಾಗಿದ್ದು 6 ವರ್ಷದ ಮಗಳಿದ್ದಾಳೆ. ಆದರೆ ಆಕೆ ಪತಿಯಿಂದ ವಿಚ್ಛೇದನ ಪಡೆದಿದ್ದಾಳೆ ಎಂದು ತಿಳಿದು ಬಂದಿದೆ. ಬಾರ್ಬರಾ ಮತ್ತು ಶಬಾದ್ ಅವರ ಮದುವೆಗೆ ಗ್ರಾಮದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

ಇದನ್ನೂ ಓದಿ: Video Viral: 210 ಕೆಜಿ ಭಾರ ಎತ್ತುವ ಸಾಹಸ ಮಾಡಿ ಕುತ್ತಿಗೆ ಮುರಿತಕ್ಕೊಳಗಾಗಿ ಸಾವನ್ನಪ್ಪಿದ ಜಿಮ್​​ ಟ್ರೈನರ್

“ನನಗೆ ನನ್ನದೇ ಆದ ಮನೆ, ಕಾರು ಮತ್ತು ಒಳ್ಳೆಯ ಕೆಲಸವಿದೆ. ನಾನು ಪೋಲೆಂಡ್‌ನಿಂದ ಬಂದಿದ್ದೇನೆ, ಆದರೆ ನಾನು ಶಾದಾಬ್ಗಾಗಿ ಭಾರತ ಮತ್ತು ಹಜಾರಿಬಾಗ್‌ಗೆ ಬಂದಿದ್ದೇನೆ. ನಾನು ಅವನೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ನಾವು ಶೀಘ್ರದಲ್ಲೇ ಪರಸ್ಪರ ಮದುವೆಯಾಗಲಿದ್ದೇವೆ. ನನ್ನ ಮಗಳು ಈಗಾಗಲೇ ಶಾದಾಬ್ ಅನ್ನು “ಅಪ್ಪ” ಎಂದು ಕರೆಯಲು ಪ್ರಾರಂಭಿಸಿದ್ದಾಳೆ” ಎಂದು ಬಾರ್ಬರಾ ಹೇಳಿಕೊಂಡಿರುವುದು ವರದಿಯಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: