Viral Video: ಇಲ್ಲಿದ್ದಾರೆ ತೇಲುವ ಚಹಾದಂಗಡಿಯ ಛಾಯಕ್ಕ
Kerala : ನೀರ ಮೇಲೆ ತೇಲಿ ಬರುವ ಈ ಚಹಾದ ಅಂಗಡಿ ಮತ್ತು ಇಲ್ಲಿ ತಯಾರಾಗುವ ಬಿಸಿಬಿಸಿ ಚಹಾ ಕುಡಿಯಲು ನೀವು ಕೇರಳದ ಕುಮಾರಕೊಮ್ಗೆ ಹೋಗಬೇಕು!
Floating Tea Stall: ಪ್ರವಾಸದಲ್ಲಿದ್ಧಾಗ ಅಂಗಡಿಗಳಿಗೆ, ಹೋಟೆಲ್ಗಳಿಗೆ ಹೋಗಿ ಚಹಾ ಕುಡಿಯುವುದುಂಟು. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಚಹಾದಂಗಡಿಯೇ ನಿಮ್ಮ ಬಳಿ ತೇಲಿ ಬರುತ್ತದೆ. ಕೇರಳದ ಕುಮಾರಕೊಮ್ನಲ್ಲಿರುವ ಕೋಕೋನಟ್ ಲಗೂನ್ (Coconut Lagoon) ರೆಸಾರ್ಟ್ನಲ್ಲಿ ಈ ತೇಲುವ ಚಹಾದಂಗಡಿಯ ಛಾಯಕ್ಕ ನಿಮ್ಮನ್ನು ಎದುರುಗೊಳ್ಳುತ್ತಾರೆ. ಸುತ್ತಮುತ್ತಲಿನ ಹಳ್ಳಿಗರಿಗೆ ಛಾಯಾ ಚೇಚಿ ಎಂದು ಪರಿಚಿತರಾಗಿರುವ ಈಕೆ ಸಂಜೆಯ ಹೊತ್ತಿಗೆ ಹೀಗೆ ತನ್ನ ಪುಟ್ಟ ದೋಣಿಯೊಂದಿಗೆ ನೀರಿಗಿಳಿಯುತ್ತಾರೆ. ಮನೆಯಲ್ಲಿ ತಯಾರಿಸಿಕೊಂಡು ಬಂದ ರುಚಿಕಟ್ಟಾದ ಚಹಾ ಮತ್ತು ಸಣ್ಣಪುಟ್ಟ ತಿಂಡಿಗಳನ್ನು ಮಾರುವುದನ್ನೇ ಇವರು ಕಾಯಕವನ್ನಾಗಿಸಿಕೊಂಡಿದ್ಧಾರೆ.
ಇದನ್ನೂ ಓದಿView this post on Instagram
2012ರಿಂದಲೂ ಕೋಕೋನಟ್ ಲಗೂನ್ನಲ್ಲಿ ಛಾಯಾ ಚೇಚಿ ಈ ತೇಲುವ ಅಂಗಡಿಯ ಮೂಲಕ ರುಚಿಯಾದ ಚಹಾ ಮತ್ತು ತಿಂಡಿಗಳನ್ನು ಮಾರುತ್ತಿದ್ದಾರೆ. ಈಕೆ ಮೊದಲಿದ್ದ ತನ್ನ ಚಹಾದ ಅಂಗಡಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ಕೇರಳದ CGH Earth Experience Hotels ಈಕೆಗೆ ಈ ವ್ಯವಸ್ಥೆಗೆ ತೆರೆದುಕೊಳ್ಳಲು ಸಹಾಯ ಮಾಡಿತು. ಈ ಛಾಯಕ್ಕ ಮತ್ತು ಆಕೆಯ ಚಹಾಗಾಗಿ ನಾನು ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದಿದ್ದೇನೆ ಎನ್ನುತ್ತಿದ್ದಾರೆ ನೆಟ್ಟಿಗರು. ನಾನು ಮತ್ತೊಮ್ಮೆ ಈಕೆಯ ಚಹಾಗೋಸ್ಕರ ಭೇಟಿ ನೀಡಬೇಕು ಹಾಗಿದ್ದರೆ! ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral: ಶಿವಾಜಿನಗರದ ಡಂಪ್ಯಾರ್ಡ್ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?
ದೆಹಲಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಕೇಜ್ರಿವಾಲ್ ಹೀಗೆಯೇ ಬದುಕುತ್ತಾರೆ ಎಂದಿದ್ದಾರೆ ಒಬ್ಬರು. ನೀವು ಈ ಪೋಸ್ಟ್ ಮಾಡುವಾಗ ಕೇರಳ ಎಂದು ರಾಜ್ಯದ ಹೆಸರನ್ನು ಹೇಳದೆ ದಕ್ಷಿಣ ಭಾರತ ಎಂದು ಹೇಳಿದ್ದೀರಲ್ಲ ಯಾಕೆ? ಎಂದು ಅನೇಕರು ಇಂಡಿಯಾ ಕಲ್ಚರ್ ಹಬ್ ಇನ್ಸ್ಟಾಗ್ರಾಂ ಪುಟದ ನಿರ್ವಾಹಕರಿಗೆ ಕೇಳಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 37 ಸಾವಿರ ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ಮತ್ತಷ್ಟು ಮಾಹಿತಿ ಕೇಳಿದ್ದಾರೆ ಮತ್ತು ಈ ತಾಣಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:01 pm, Mon, 24 July 23