Viral: ಶಿವಾಜಿನಗರದ ಡಂಪ್ಯಾರ್ಡ್ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?
Street Vendor : ಈವತ್ತು ಸೋಮವಾರ, ಬಿಬಿಎಂಪಿ ತಾನು ನೀಡಿದ ಭರವಸೆಯ ಪ್ರಕಾರ ಆಕೆಯ ಸೋಲಾರ್ ವ್ಯವಸ್ಥೆಯುಳ್ಳ ತಳ್ಳುಗಾಡಿಯನ್ನು ಆಕೆಗೆ ಮರಳಿಸಬೇಕಿತ್ತು. ಆದರೆ...
Bengaluru: ಕಳೆದ ಮೂವತ್ತು ವರ್ಷಗಳಿಂದ ಕಬ್ಬನ್ ಪಾರ್ಕ್ನ (Cubban Park) ಎಂಎಸ್ ಬಿಲ್ಡಿಂಗ್ನ ಬಳಿ ಇರುವ ಗೇಟಿನ ಬಳಿ ಜೋಳ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು ಈ ವಯೋವೃದ್ಧೆ ಸೆಲ್ವಮ್ಮ. ಆದರೆ ಶನಿವಾರದಂದು ಅಕ್ಕಪಕ್ಕದ ಚಹಾ ಮತ್ತು ತಿಂಡಿತಿನಿಸು ಮಾರುವವರು ಈಕೆಯ ತಳ್ಳುಗಾಡಿಯನ್ನು ಎತ್ತಿ ಬಿಬಿಎಂಪಿ ಟ್ರಕ್ನಲ್ಲಿ ಸಾಗಿಸಿದ್ದಾರೆ. ಎರಡು ದಿನಗಳಿಂದ ಉಪವಾಸವಿರುವ ಈ ಅಜ್ಜಿ ಇದೇ ಜಾಗದಲ್ಲಿ ತನ್ನ ತಳ್ಳುಗಾಡಿಗಾಗಿ ಕಾಯ್ದು ಕುಳಿತಿದ್ದಾಳೆ.
A pic in better times when sm1 sponsored a solar-powered burner for bhutta. She’s independent, doughty & come rain or shine, has sold roasted bhutta for nearly 30 years at the same spot. A beloved park fixture why are we doing this to her? She wants a livelihood, not a handout? pic.twitter.com/U1qSrNhBS6
ಇದನ್ನೂ ಓದಿ— Priya Chetty Rajagop (@priyachettyr) July 21, 2023
ಜೋಳವನ್ನು ಸುಡಲು ಈಕೆ ಸೌರಶಕ್ತಿಯನ್ನು ಬಳಸುತ್ತಿದ್ದಳು ಎನ್ನುವುದನ್ನು ಮೇಲಿನ ಚಿತ್ರದಿಂದ ತಿಳಿದುಕೊಳ್ಳಬಹುದು. 30 ವರ್ಷಗಳಿಂದಲೂ ಇದೇ ಜಾಗದಲ್ಲಿ ಕುಳಿತು ತನ್ನಷ್ಟಕ್ಕೆ ತಾನು ದುಡಿದು ತಿನ್ನುತ್ತಿದ್ದ ಈಕೆ ಪಾರ್ಕಿಗೆ ಬರುವ ಜನರಿಗೂ ಪರಿಚಿತಳು. ಆದರೆ ಶನಿವಾರದಂದು ಇದ್ದಕ್ಕಿದ್ದ ಹಾಗೆ ಈಕೆಯ ಜೀವನೋಪಾಯಕ್ಕೆ ಸಂಚಕಾರ ಒದಗಿದೆ. ಪ್ರಿಯಾ ಚೆಟ್ಟಿ ರಾಜಗೋಪಾಲ್ ಎನ್ನುವವರು ಈಕೆಗೆ ಒದಗಿದ ಸಂದರ್ಭವನ್ನು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಕಾಳಜಿ ವಹಿಸಿ ಬಿಬಿಎಂಪಿಗೆ ವಿಚಾರಿಸಿದ್ದಾರೆ.
Temporary cart arranged for Selvamma. She’s not looking too happy with the pile of wood but pleased she can earn again … Thank you everyone. Meena Vinay and all who cared enough to worry and share her plight. Will keep you posted. pic.twitter.com/g5cjI5dLfZ
— Priya Chetty Rajagop (@priyachettyr) July 23, 2023
ಶಿವಾಜಿನಗರದ ಡಂಪ್ ಯಾರ್ಡ್ ಈಗ ಮುಚ್ಚಿರುವುದರಿಂದ ಸೋಮವಾರದವರೆಗೆ ಆಕೆ ಕಾಯಬೇಕಾಗುತ್ತದೆ ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದೆ. ಸದ್ಯ ಪ್ರಿಯಾ, ಮೀನು ಮತ್ತು ಲಲಿತಾ ಎಂಬ ಟ್ವೀಟಿಗರು ಸೆಲ್ವಮ್ಮನಿಗೆ ಸಹಾಯ ಮಾಡಿ ಮತ್ತೊಂದು ತಳ್ಳುಗಾಡಿಯ ವ್ಯವಸ್ಥೆ ಮಾಡಿದ್ದಾರೆ. ಆದರೆ ಸೋಲಾರ್ ವ್ಯವಸ್ಥೆಯಿದ್ದ ಆ ಗಾಡಿಗಾಗಿ ಆಕೆ ಕಾಯುತ್ತಿದ್ದಾರೆ. ಈ ವಯಸ್ಸಿನಲ್ಲಿ, ಇಂಥ ಮಳೆಯಲ್ಲಿ ಆಕೆ ಕಟ್ಟಿಗೆಯಿಂದ ಜೋಳವನ್ನು ಸುಟ್ಟು ಮಾಡುವುದು ಸುಲಭವೇ?
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:19 pm, Mon, 24 July 23