Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಉಚಿತ ಐಸ್ಕ್ರೀಮ್​​ಗಾಗಿ ಬೆಂಗಳೂರಿಗರು ಹೇಗೆ ನೃತ್ಯ ಮಾಡಿದ್ದಾರೆ ನೋಡಿ

Bengaluru : ಸಿಸಿ ಕ್ಯಾಮೆರಾ ಮುಂದೆ ನಿಮಗೆ ತಿಳಿದಂತೆ ಡ್ಯಾನ್ಸ್​ ಮಾಡಬೇಕು, ಅಂದರೆ ಮಾತ್ರ ಫ್ರೀ ಐಸ್ಕ್ರೀಮ್​ ಎಂಬ ಷರತ್ತು ಈ ಅಂಗಡಿಯದಾಗಿತ್ತು. ಒಂದು ವಾರದತನಕ ಇದು ಯಶಸ್ವಿಯಾಗಿ ನಡೆಯಿತು ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿ.

Viral Video: ಉಚಿತ ಐಸ್ಕ್ರೀಮ್​​ಗಾಗಿ ಬೆಂಗಳೂರಿಗರು ಹೇಗೆ ನೃತ್ಯ ಮಾಡಿದ್ದಾರೆ ನೋಡಿ
ಬೆಂಗಳೂರಿನ ಕಾರ್ನರ್​ ಹೌಸ್​ ಐಸ್ಕ್ರೀಮ್​ನ ದೃಶ್ಯಗಳು
Follow us
ಶ್ರೀದೇವಿ ಕಳಸದ
|

Updated on:Jul 25, 2023 | 10:23 AM

Ice cream : ಐಸ್​ಕ್ರೀಮ್​ ಪ್ರಿಯರಿಗೆ ಯಾವ ಕಾಲವಾದರೇನು? ಈ ಮಳೆಗಾಲದ ಮಧ್ಯರಾತ್ರಿಯೂ ಐಸ್​ಕ್ರೀಮ್​ ಎಂದರೆ ಎದ್ದು ಕುಳಿತುಕೊಳ್ಳುತ್ತಾರೆ. ಇನ್ನು ಉಚಿತ ಐಸ್ಕ್ರೀಮ್​ ಎಂದರೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ರಾಷ್ಟ್ರಿಯ ಐಸ್ಕ್ರೀಮ್​ ದಿನದ (July 16, National Ice Cream Day) ಪ್ರಯುಕ್ತ ಬೆಂಗಳೂರಿನ ಕಾರ್ನರ್​ ಹೌಸ್​ ಐಸ್ಕ್ರೀಮ್ಸ್​ (Corner House Ice creams) ಒಂದು ವಾರದ ತನಕ ಹೀಗೊಂದು ಮಜಾ ಆಫರ್​ ಇಟ್ಟಿತ್ತು. ಈ ಅಂಗಡಿಗೆ ಬಂದು ಸಿಸಿ ಕ್ಯಾಮೆರಾ ಎದುರು ಡ್ಯಾನ್ಸ್​ ಮಾಡಿದವರಿಗೆಲ್ಲರಿಗೂ ಫ್ರೀ ಐಸ್ಕ್ರೀಮ್​! ಉಲ್ಲಾಸದಿಂದ ಕೂಡಿದ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಇದನ್ನು ನೋಡಿ ಖುಷಿಗೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Corner House Ice Creams (@cornerhouseicecreams)

ಬೆಂಗಳೂರಿನ ಇಂದಿರಾನಗರ ಶಾಖೆಯ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ ಜನರು ಆಫರ್​ ಮುಗಿದ ಮೇಲೆಯೂ ಇಲ್ಲಿಗೆ ಡ್ಯಾನ್ಸ್​ ಮಾಡುವ ಉತ್ಸಾಹ ಮತ್ತು ಉಚಿತ ಐಸ್ಕ್ರೀಮ್​ ಪಡೆದುಕೊಳ್ಳಲು ಬರುತ್ತಿದ್ದರು. ವಯಸ್ಸಿನ ಭೇದವಿಲ್ಲದೆ ಇಲ್ಲಿ ಎಲ್ಲರೂ ಪುಟ್ಟ ಮಕ್ಕಳಂತೆ ಐಸ್ಕ್ರೀಮ್​ಗಾಗಿ ಡ್ಯಾನ್ಸ್ ಮಾಡುವುದನ್ನು ನೋಡಲು ಬಹಳೇ ಖುಷಿ ಎನ್ನಿಸುತ್ತಿದೆ ಎನ್ನುತ್ತಿದ್ದಾರೆ ಅನೇಕರು.

ಇದನ್ನೂ ಓದಿ : Viral Video: ಇಲ್ಲಿದ್ದಾರೆ ತೇಲುವ ಚಹಾದಂಗಡಿಯ ಛಾಯಕ್ಕ

ಪ್ರೊಮೋಷನಲ್​ ಆ್ಯಕ್ಟಿವಿಟಿಯ ಕಾನ್ಸೆಪ್ಟ್ ಚೆನ್ನಾಗಿದೆ. ಆದರೆ ಹೊಸ ಕ್ಯಾಮೆರಾಗಳನ್ನು ಇಟ್ಟಿದ್ದರೆ ಒಳ್ಳೆಯ ವಿಶುವಲ್ಸ್​ ಸಿಗುತ್ತಿದ್ದವಲ್ಲ ಎಂದಿದ್ದಾರೆ ಒಬ್ಬರು. ಆಗಾಗ ಇಂಥ ಆಫರ್​​​ಗಳನ್ನು ಆಯೋಜಿಸಿ, ನಿಮ್ಮ ಅಂಗಡಿಗೆ ನಾವೂ ಬರುತ್ತೇವೆ ಎಂದಿದ್ದಾರೆ ಕೆಲವರು. ಇಂಥ ಪರಿಕಲ್ಪನೆಯನ್ನು ಈತನಕ ಎಲ್ಲಿಯೂ ನೋಡಿರಲಿಲ್ಲ, ಬಹಳ ಖುಷಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಶಿವಾಜಿನಗರದ ಡಂಪ್​ಯಾರ್ಡ್​ನಿಂದ ಸೆಲ್ವಮ್ಮನ ತಳ್ಳುಗಾಡಿ ಮರಳುವುದೇ?

ಹೀಗೆಯೇ ಡ್ಯಾನ್ಸ್​ ಮಾಡಬೇಕೆಂಬ ನಿಯಮವೇನೂ ಇಲ್ಲಿರಲಿಲ್ಲ. ಒಟ್ಟು ಕ್ಯಾಮೆರಾ ಮುಂದೆ ಅವರಿಗನ್ನಿಸಿದಂತೆ ಕೆಲ ಕ್ಷಣಗಳ ಕಾಲ ಹೆಜ್ಜೆ ಹಾಕಿದರೆ ಮುಗಿಯಿತು. ತಕ್ಷಣವೇ ಉಚಿತ ಐಸ್ಕ್ರೀಮ್​ ಕೈಯಲ್ಲಿಡಲಾಗುತ್ತಿತ್ತು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:21 am, Tue, 25 July 23

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ