Viral: ಬೆಂಗಳೂರು; 500 ಮೀ ಆಟೋ ಪ್ರಯಾಣಕ್ಕೆ ರೂ 100 ಪಾವತಿಸಿದ ಮುಂಬೈ ಸಿಇಒ

Auto : ಮುಂಬೈನಲ್ಲಿ ರೂ. 100ರಲ್ಲಿ 9 ಕಿ.ಮೀ ಪ್ರಯಾಣಿಸಬಹುದು. ಆದರೆ ಬೆಂಗಳೂರಿನಲ್ಲಿ!? ಎಂದು ಬೇಸರಕ್ಕೆ ಒಳಗಾಗಿದ್ದಾರೆ ಈ ವ್ಯಕ್ತಿ. ಮುಂಬೈ ಹೊರತುಪಡಿಸಿ ಎಲ್ಲ ಮಹಾನಗರಗಳ ಆಟೋ ಕಥೆ ಇಷ್ಟೇ ಎಂದಿದ್ದಾರೆ ನೆಟ್ಟಿಗರು.

Viral: ಬೆಂಗಳೂರು; 500 ಮೀ ಆಟೋ ಪ್ರಯಾಣಕ್ಕೆ ರೂ 100 ಪಾವತಿಸಿದ ಮುಂಬೈ ಸಿಇಒ
ಮಂದಾರ ನಾಟೇಕರ್ ಪ್ರಯಾಣಿಸಿದ ಆಟೋ
Follow us
ಶ್ರೀದೇವಿ ಕಳಸದ
|

Updated on:Jul 25, 2023 | 10:58 AM

Bengaluru : ಮುಂಬೈನ ನ್ಯೂರಲ್ ಗ್ಯಾರೇಜ್​ನ ಸಿಇಒ ಮಂದಾರ್​ ನಾಟೇಕರ್ ಬೆಂಗಳೂರಿನಲ್ಲಿ ಅನುಭವಿಸಿದ ಕಹಿ ಅನುಭವವನ್ನು ಟ್ವೀಟ್ ಮಾಡಿದ್ದಾರೆ. 500 ಮೀ. ಆಟೋ ಪ್ರಯಾಣಕ್ಕೆ ಅವರು ರೂ. 100 ಪಾವತಿಸಿದ ವಿಷಯದೊಂದಿಗೆ ಆ ಆಟೋದ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಎಂದೂ ಇಷ್ಟೊಂದು ದುಬಾರಿ ಆಟೋ ಪ್ರಯಾಣ ಮಾಡಿರಲಿಲ್ಲ, ಮುಂಬೈನಲ್ಲಿ ರೂ. 100ಕ್ಕೆ 9 ಕಿ.ಮೀ ಪ್ರಯಾಣಿಸಬಹುದೆಂದೂ ಹೇಳಿದ್ದಾರೆ. ವೈರಲ್ ಆಗುತ್ತಿರುವ ಈ ಟ್ವೀಟಿನಡಿ ಅನೇಕರು ತಮ್ಮ ಆಟೋ ಪ್ರಯಾಣದ ಅಭಿಪ್ರಾಯಗಳನ್ನು ವಿನೋದ ಪ್ರಸಂಗಗಳನ್ನು ಅಚ್ಚರಿಗಳನ್ನು ದಾಖಲಿಸಿದ್ಧಾರೆ. ​

7,000ಕ್ಕೂ ಹೆಚ್ಚು ಜನರು ಈ ಟ್ವೀಟ್ ನೋಡಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಟಿವಿಎಫ್ ಅಧ್ಯಕ್ಷ ವಿಜಯ್ ಕೋಶಿ, ಮುಂಬೈ ಬಿಟ್ಟರೆ ಉಳಿದ ಮಹಾನಗರಗಳ ಕಥೆ ಎಲ್ಲವೂ ಒಂದೇ ಥರ ಇದೆ. ಚೆನ್ನೈಗೆ ಬನ್ನಿ, ಇದಕ್ಕಿಂತಲೂ ದುಬಾರಿಯಾದ ಆಟೋ ಪ್ರಯಾಣವನ್ನು ಇಲ್ಲಿ ಮಾಡಬಹುದಾಗಿದೆ! ಎಂದಿದ್ದಾರೆ.

ಇದನ್ನೂ ಓದಿ : Viral Video: ಉಚಿತ ಐಸ್ಕ್ರೀಮ್​​ಗಾಗಿ ಬೆಂಗಳೂರಿಗರು ಹೇಗೆ ನೃತ್ಯ ಮಾಡಿದ್ದಾರೆ ನೋಡಿ

ಮುಂಬೈ ಆಟೋ ಚಾಲಕರ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಅಲ್ಲಿಯ ಆಟೋ ಆಟೋ ಮೀಟರ್​ಗೆ ಅನುಗುಣವಾಗಿ ಹಣ ಪಾವತಿಸಬಹುದಾಗಿದೆ ಎಂದಿದ್ದಾರೆ. ಸರ್ಕಾರವೇ ಮೀಟರ್ ದರವನ್ನು ನಿಗದಿ ಪಡಿಸುತ್ತದೆ. ಬೆಂಗಳೂರಿನಲ್ಲಿ ಆರಂಭದ ಎರಡು ಕಿ.ಮೀ ರೂ. 30, ಆನಂತರ ಪ್ರತೀ ಕಿ.ಮೀ. ಮೂಲ ಬೆಲೆ ರೂ. 15 ಎಂದು ಹೇಳಿದ್ದಾರೆ ಮತ್ತೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:57 am, Tue, 25 July 23