AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಯಮುನಾ ನದಿಯಿಂದ ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸು ದಾಖಲು

ಸಾಮಾಜಿಕ ಮಾಧ್ಯಮದಲ್ಲಿ ಮೀನುಗಾರರು ಡಾಲ್ಫಿನ್​​ನ್ನು ಹಿಡಿದು ತರುತ್ತಿದ್ದ ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಪೋಲಿಸರು ಮೀನುಗಾರನನ್ನು ಬಂಧಿಸಿದ್ದಾರೆ.

Viral News: ಯಮುನಾ ನದಿಯಿಂದ ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸು ದಾಖಲು
ಡಾಲ್ಫಿನ್ ಹಿಡಿದು ತಿಂದ ಮೀನುಗಾರರ ವಿರುದ್ಧ ಕೇಸು ದಾಖಲು
Follow us
ಅಕ್ಷತಾ ವರ್ಕಾಡಿ
|

Updated on: Jul 25, 2023 | 1:20 PM

ಉತ್ತರಪ್ರದೇಶ: ಯಮುನಾ ನದಿಯಲ್ಲಿ ಮೀನುಗಾರರ ಬಲೆಯಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದ ಡಾಲ್ಫಿನ್ (Dolphin) ಹಿಡಿದು ತಂದು ಅಡುಗೆ ಮಾಡಿ ತಿಂದ ನಾಲ್ವರು ಮೀನುಗಾರರ ವಿರುದ್ಧ ಕೇಸು ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಮೀನುಗಾರರು ಡಾಲ್ಫಿನ್​​ನ್ನು ಹಿಡಿದು ತರುತ್ತಿದ್ದ ವಿಡಿಯೋ ವೈರಲ್​​​ ಆಗುತ್ತಿದ್ದಂತೆ ಪೋಲಿಸರು ಮೀನುಗಾರನನ್ನು ಬಂಧಿಸಿದ್ದಾರೆ. ಸೋಮವಾರ ಚೈಲ್ ಅರಣ್ಯ ರಕ್ಷಕ ರವೀಂದ್ರ ಕುಮಾರ್ ನೀಡಿದ ದೂರಿನ ಪ್ರಕಾರ, ನಸೀರ್‌ಪುರ ಗ್ರಾಮದ ಮೀನುಗಾರರು ಜುಲೈ 22 ರಂದು ಬೆಳಿಗ್ಗೆ ಯಮುನಾದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಯಲ್ಲಿ ಡಾಲ್ಫಿನ್ ಸಿಕ್ಕಿಬಿದ್ದಿದೆ. ನಂತರ ತಮ್ಮ ಭುಜದ ಮೇಲೆ ಇಟ್ಟುಕೊಂಡು ಮನೆಗೆ ಸಾಗಿಸಿ, ಬೇಯಿಸಿ ತಿಂದಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಪಿಪ್ರಿ ಠಾಣಾಧಿಕಾರಿ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಸರಸರನೇ ಸಾಲಾಗಿ ಮರಿಗಳಿಗೆ ಜನ್ಮ ನೀಡಿದ ಹಾವು, ಕುತೂಹಲಗೊಂಡ ಜನ!

ಡಾಲ್ಫಿನ್ ಅನ್ನು ಹೆಗಲ ಮೇಲೆ ಇಟ್ಟು ಮನೆಗೆ ಕೊಂಡೊಯ್ಯುತ್ತಿರುವುದನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ದೂರಿನ ಮೇರೆಗೆ ರಂಜೀತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗಾಗಲೇ ರಂಜಿತ್​​​ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಉಳಿದ ಆರೋಪಿಗಳು ನಾಪತ್ತೆಯಾಗಿದ್ದು, ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: