AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸನ್​ಗ್ಲಾಸ್ ಧರಿಸದ ಮೂರು ಪಾಂಡಾಗಳನ್ನು ಗುರುತಿಸಿ

Pandas : ಮುದ್ದಾಗಿರುವ ಈ ಪಾಂಡಾಗಳ ಗುಂಪಿನಲ್ಲಿ ಮೊಂಡಾಟ ಮಾಡಿ ಗುಂಪಿನ ನಿಯಮವನ್ನು ಮುರಿದ ಮೂರು ಪಾಂಡಾಗಳನ್ನು ಕಂಡುಹಿಡಿಯಿರಿ. ನಿಮ್ಮ ಸಮಯ ಇದೀಗ ಶುರು!

Viral: ಸನ್​ಗ್ಲಾಸ್ ಧರಿಸದ ಮೂರು ಪಾಂಡಾಗಳನ್ನು ಗುರುತಿಸಿ
ಸನ್​ಗ್ಲಾಸ್​ ಧರಿಸದ ಆ ಮೂರು ಪಾಂಡಾಗಳು ಎಲ್ಲಿ ಅಡಗಿವೆ?
ಶ್ರೀದೇವಿ ಕಳಸದ
|

Updated on:Jul 25, 2023 | 4:19 PM

Share

Brain Teaser : ಸನ್​ ಗ್ಲಾಸ್​ ಧರಿಸಿರುವ ನೂರಾರು ಪಾಂಡಾಗಳ ಮಧ್ಯೆ, ಸನ್​ಗ್ಲಾಸ್​ ಧರಿಸದ ಮೂರು ಪಾಂಡಾಗಳನ್ನು ಕಂಡುಹಿಡಿಯುವುದೇ ನಿಮ್ಮ ಮೆದುಳಿಗೂ ಕಣ್ಣಿಗೂ ನೀಡಿರುವ ಸವಾಲು. ಹಂಗೇರಿಯನ್​ ಕಲಾವಿದ ಗರ್ಗೆಲಿ ಡುಡಾಸ್​ (Gergely Dudás) ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಸವಾಲನ್ನು ಎಸೆದಿದ್ಧಾರೆ. ಜಾಲತಾಣಿಗರು ತಲೆ ಕೆರೆದುಕೊಂಡು, ಕನ್ನಡಕ ತೆಗೆದಿಟ್ಟು, ಕನ್ನಡಕ ಹಾಕಿಕೊಂಡು ಈ ಸವಾಲನ್ನು ಬಿಡಿಸುವಲ್ಲಿ ಒದ್ದಾಡುತ್ತಿದ್ದಾರೆ. ಆದರೆ ನಿಮಗಿದು ಬಹಳ ಸರಳ ಎನ್ನುವುದು ನಮ್ಮ ಭಾವನೆ. ಏನಂತೀರಿ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿನ್ನೆಯಷ್ಟೇ ಇದನ್ನು ಪೋಸ್ಟ್ ಮಾಡಲಾಗಿದೆ. ಈಗಾಗಲೇ ಸುಮಾರು 900 ಜನರು ಲೈಕ್ ಮಾಡಿದ್ದಾರೆ. ಸುಮಾರು 80 ಜನರು ಕಂಡುಕೊಂಡ ಉತ್ತರಗಳನ್ನು ತಿಳಿಸಿದ್ದಾರೆ. 170 ಜನರು ಇದನ್ನು ರೀಶೇರ್ ಮಾಡಿಕೊಂಡಿದ್ದಾರೆ. ನನಗೆ ಎರಡು ಬೋ ಟೈ, ಒಂದು ಗ್ಲಾಸು, ಒಂದು ಸೋಡಾ ಬಾಟಲಿ ಹಿಡಿದುಕೊಂಡಿರುವ ಮತ್ತು ಕೌಬಾಯ್ ಟೋಪಿ, ನೆಕ್‌ಟೈ ಧರಿಸಿರುವ ಪಾಂಡಾಗಳು ಕಂಡವು. ಇದು ಬಹಳ ಮುದ್ದಾಗಿದೆ ಎಂದು ಕಲಾವಿದರಿಗೆ ಧನ್ಯವಾದ ತಿಳಿಸಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಗುಜರಾತ್; ರಸ್ತೆಯಲ್ಲಿ ಗರ್ಭಾನೃತ್ಯ ಮಾಡಿದ ರೀಲಿಗರನ್ನು ಜೈಲಿಗೆ ಅಟ್ಟಿದ ಪೊಲೀಸರು

ನೋಡಿದ ತಕ್ಷಣ ಇದು ಸುಲಭದ ಸವಾಲು ಅಲ್ಲವೇ ಅಲ್ಲ ಎಂದಿನಿಸಿತು. ಆದರೂ ಎರಡನ್ನು ಹುಡುಕಿದೆ, ಇನ್ನೂ ಒಂದನ್ನು ಹುಡುಕುತ್ತಿರುವೆ ಎಂದಿದ್ದಾರೆ ಇನ್ನೊಬ್ಬರು. ನನಗೆ ಉತ್ತರ ಸಿಗುತ್ತದೆಯೋ ಬಿಡುತ್ತದೆಯೋ ಅನ್ನುವುದು ಮುಖ್ಯವಾಗದೆ, ಪಾಂಡಾಗಳನ್ನು ಚಿತ್ರಿಸಿದ ರೀತಿ ಬಹಳ ಇಷ್ಟವಾಯಿತು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: 3 ಮೊಟ್ಟೆಗಳನ್ನು ಆಲೂಗಡ್ಡೆ ಚಿಪ್ಸ್​​​ ಪ್ಯಾಕೆಟ್​ನಲ್ಲಿ ಹಾಕಿ, ಮುಂದೇನಾಗುತ್ತದೆ ನೋಡಿ

ಇದು ತುಂಬಾ ಕಷ್ಟಕರವಾದರೂ ನಾನು ಮೂರನ್ನೂ ಪತ್ತೆ ಹಚ್ಚಿದೆ ಎಂದಿದ್ದಾರೆ ಮಗದೊಬ್ಬರು. ನಾನಂತೂ ಈ ಚಿತ್ರವನ್ನು ಪ್ರಿಂಟ್ ಹಾಕಿಸಿಕೊಂಡು ನನ್ನ ರೂಮಿನ ಗೋಡೆಗೆ ಅಂಟಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಆ ಮೂರು ಪಾಂಡಾಗಳನ್ನು ಗುರುತು ಹಿಡಿಯಲು ನಾನು ಬಹಳ ಸಮಯ ವ್ಯಯಿಸಲೇ ಇಲ್ಲ! ಎಂದಿದ್ದಾರೆ ಇನ್ನೂ ಒಬ್ಬರು.

ನಿಮಗೆ ಆ ಮೂರು ಪಾಂಡಾಗಳು ಸುಲಭಕ್ಕೆ ಸಿಕ್ಕವೆ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:18 pm, Tue, 25 July 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!