Viral Video: ಪಾಕಿಸ್ತಾನ; ಇವರು ತಮ್ಮ ಹಳ್ಳಿಯನ್ನು ತಲುಪಲು ಈ ಅಪಾಯಕಾರಿ ಸೇತುವೆಯ ಮೇಲೆ ನಡೆಯಲೇಬೇಕು
Passu : ಉತ್ತರ ಪಾಕಿಸ್ತಾನದಲ್ಲಿರುವ ಈ ಸೇತುವೆ ನಿಜಕ್ಕೂ ಸುಂದರವಾಗಿದೆ. ಆದರೆ ವಾಸ್ತವದಲ್ಲಿ ಹಳ್ಳಿಗರು ಇದನ್ನು ದಾಟುವುದು ಅಷ್ಟೇ ಭಯಾನಕವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ?
Pakistan : ಈ ಸೇತುವೆ ಪಾಕಿಸ್ತಾನದಲ್ಲಿದೆ. ಮರದ ಹಲಗೆಗಳನ್ನು ಬಿಡಿಬಿಡಿಯಾಗಿ ಜೋಡಿಸಿ ಮಾಡಿದ ಅಪಾಯಕಾರಿ ಸೇತುವೆ (Bridge) ಇದಾಗಿದೆ. ಈ ಮನುಷ್ಯ ಹೀಗೆ ಇದರ ಮೇಲೆ ನಡೆಯುತ್ತಿದ್ದಾನೆ. ಕೆಳಗೆ ಅಪಾರ ಜಲರಾಶಿ ಮೇಲೆ ಆಕಾಶ, ಸುತ್ತಲೂ ಬೆಟ್ಟಗುಡ್ಡಗಳು. ಇದನ್ನು ನೋಡಿದ ಯಾರಿಗೂ ಒಂದು ಕ್ಷಣ ಎದೆಬಡಿತ ನಿಲ್ಲುವಂತಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದಾರೆ. ಈತನ ಸಾಹಸ ಪ್ರವೃತ್ತಿಯು ಜೀವಕ್ಕೆ ಸಂಚಕಾರ ತರದಿದ್ದರೆ ಸಾಕು ಎಂದುಕೊಳ್ಳುತ್ತಿದ್ದಾರೆ. ಆದರೆ ಈ ವ್ಯಕ್ತಿ ಇಲ್ಲಿ ಯಾಕೆ ಇಂಥ ಸಾಹಸಕ್ಕೆ ತೆರೆದುಕೊಂಡಿದ್ದಾನೆ?
ಇದನ್ನೂ ಓದಿView this post on Instagram
ಟ್ರಾವೆಲ್ ಬ್ಲಾಗರ್ Zeeteevee ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಪಸ್ಸು ಸೇತುವೆಯ (Passu Bridge) ಮೇಲೆ ಈ ವ್ಯಕ್ತಿ ನಡೆದುಕೊಂಡು ಹೊರಟಿದ್ದಾರೆ. ಮರದ ಹಲಗೆಗಳನ್ನು ಅಂತರದಲ್ಲಿ ಹಗ್ಗದಿಂದ ಬಂಧಿಸಿ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆಯನ್ನು ಹಂಝಾ (Hunza) ನದಿಗೆ ಕಟ್ಟಲಾಗಿದೆ. ಈ ನದಿಯ ದಂಡೆಯಲ್ಲಿರುವ ಇನ್ನೊಂದು ಹಳ್ಳಿಯನ್ನು ತಲುಪಲು ಸ್ಥಳೀಯರು ಈ ಸೇತುವೆಯನ್ನು ಬಳಸುತ್ತಾರೆ. ನಿಜಕ್ಕೂ ಈ ಸೇತುವೆ ಅಪಾಯಕಾರಿ ಎನ್ನಿಸುವಂತಿದೆ!
ಇದನ್ನೂ ಓದಿ : Viral: ಸನ್ಗ್ಲಾಸ್ ಧರಿಸದ ಮೂರು ಪಾಂಡಾಗಳನ್ನು ಗುರುತಿಸಿ
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು ಈತನಕ 7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. 71,000 ಜನರು ಲೈಕ್ ಮಾಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ಅಬ್ಬಾ ಎಂಥ ದೃಶ್ಯವಿದು, ಇದು ನಂಬಲಾಗದಷ್ಟು ಸುಂದರವಾಗಿದೆ ಎಂದಿದ್ದಾರೆ ಒಬ್ಬರು. ನಿಜಕ್ಕೂ ನಾನು ಸ್ನೇಹಿತರೊಂದಿಗೆ ಇಲ್ಲಿ ಭೇಟಿ ನೀಡುತ್ತೇನೆ ಎಂದಿದ್ದಾರೆ ಇನ್ನೊಬ್ಬರು. ಉತ್ತರ ಪಾಕಿಸ್ತಾನವು ಸ್ವರ್ಗದಷ್ಟೇ ಸುಂದರವಾಗಿದೆ, ಇದಕ್ಕೆ ಯಾವುದೇ ರೀತಿಯ ಗಡಿಗಳಿಲ್ಲ ಎಂದುಕೊಳ್ಳುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: 10 ಬಿಯರ್ ಮಗ್ಗಳನ್ನು ತಲೆಯ ಮೇಲಿಟ್ಟುಕೊಂಡು ಮೆಟ್ಟಿಲೇರಿದ ಈ ವ್ಯಕ್ತಿ
ಇಲ್ಲ ನೋಡಲೇನೋ ಬಹಳ ಮನೋಹರವೆನ್ನಿಸುತ್ತದೆ. ಆದರೆ ನಿತ್ಯವೂ ಹಳ್ಳಿಗರು ಇಂಥ ಅಪಾಯಕಾರಿ ರಸ್ತೆಯನ್ನು ದಾಟಿಕೊಂಡು ಹೋಗುವುದೆಂದರೆ! ಭಯಾನಕವಾಗಿದೆ ಎಂದಿದ್ಧಾರೆ ಹಲವಾರು ಜನರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:50 pm, Tue, 25 July 23