AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಅಪ್ಪಾ ನಾ ಡಿಪ್ರೆಷನ್​ಗೆ ಹೋಗ್ತಿದೀನಿ’ ಮನೆಬಿಟ್ಟು ಎಲ್ಲಿಯೂ ಹೋಗಕೂಡದು!

Family : ಅಪ್ಪ ಅಮ್ಮ ಮೊಬೈಲ್​, ಅಜ್ಜಿ ಅಜ್ಜಿ ಟಿವಿ. ಇಂದಿನ ಬಹುಪಾಲು ಮನೆಗಳ ಸಾಮಾನ್ಯ ಚಿತ್ರಣ. ಎಳೆಯ ಜೀವಗಳು ಒಳಗೊಳಗೆ ಒಂಟಿತನದಿಂದ ನಲಗುತ್ತಿವೆ. ಕಾಲದ ಕ್ರೂರ ಸತ್ಯವನ್ನು ಈ ವಿಡಿಯೋ ಬಹಳ ಮಾರ್ಮಿಕವಾಗಿ ಹಿಡಿದಿಟ್ಟಿದೆ.

Viral Video: 'ಅಪ್ಪಾ ನಾ ಡಿಪ್ರೆಷನ್​ಗೆ ಹೋಗ್ತಿದೀನಿ' ಮನೆಬಿಟ್ಟು ಎಲ್ಲಿಯೂ ಹೋಗಕೂಡದು!
'ನಾನು ಡಿಪ್ರೆಷನ್​ಗೆ ಹೋಗ್ತಿದೀನಿ'
ಶ್ರೀದೇವಿ ಕಳಸದ
|

Updated on:Jul 26, 2023 | 12:43 PM

Share

Depression : ದೊಡ್ಡವರು ಎನ್ನಿಸಿಕೊಂಡವರು ಜೊತೆಗಿರುವ ಸಣ್ಣ ಜೀವಗಳನ್ನು ಗಮನಿಸಿಕೊಳ್ಳದೆ ಸ್ಕ್ರೀನ್​ ಮೇಲಿರುವ ಭ್ರಮಾಲೋಕದಲ್ಲಿ ವಿಹರಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರುತ್ತಿದ್ಧಾರೆಯೇ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದಾಗ ಯಾಕೋ ಇದು ಸ್ಪಷ್ಟವಾಗುತ್ತಿದೆ ಎನ್ನಿಸುತ್ತಿದೆ. ಆಧುನಿಕ ಯುಗದ ಅವಕಾಶಗಳನ್ನು, ಸೌಲಭ್ಯಗಳನ್ನು ಬಳಸುವುದನ್ನು ಕಲಿತಿರುವ ಇವರುಗಳು ಪ್ರಾಬಲ್ಯ ಸಾಧಿಸುವ ಮನೋಭಾವವನ್ನು ಯಾಕೆ ಬದಲಾಯಿಸಿಕೊಳ್ಳುತ್ತಿಲ್ಲ? ಚಿಕ್ಕವರ ಅಂತರಂಗವನ್ನು ಸ್ಪರ್ಶಿಸುವಲ್ಲಿ ಇವರು ಸೋಲುತ್ತಿರುವುದು ಯಾಕೆ?

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by kavish (@kavish.life)

ಇದೊಂದು ಪುಟ್ಟ ಸಂಸಾರ. ಪಪ್ಪಾ ನಾ ಡಿಪ್ರೆಷನ್​ಗೆ ಹೋಗ್ತಿದೀನಿ ಎನ್ನುತ್ತಾಳೆ ಮಗಳು. ಪತ್ರಿಕೆಯಲ್ಲಿ ಮುಳುಗಿರುವ ತಂದೆ, ಎಲ್ಲಿಯೂ ಹೊರಗೆ ಹೋಗುವ ಅವಶ್ಯಕತೆ ಇಲ್ಲ ಮನೆಯಲ್ಲಿಯೇ ಇರು ಎಂದು ಗದರುತ್ತಾನೆ. ಉಪಾಯಗಾಣದ ಆಕೆ ಅಮ್ಮನ ಬಳಿ ಹೋಗಿ ಅಮ್ಮಾ, ನಾ ಡಿಪ್ರೆಷನ್​ಗೆ ಹೋಗ್ತಿದೀನಿ ಎನ್ನುತ್ತಾಳೆ. ಎಲ್ಲಿ ಹೋದರೂ ಸಂಜೆ 7ರೊಳಗೆ ಮನೆಯಲ್ಲಿರಬೇಕು ಎಂದು ಕಟ್ಟಪ್ಪಣೆ ಹೊರಡಿಸುತ್ತಾಳೆ ಆಕೆ. ಅಜ್ಜಿಯ ಬಳಿ ಹೋಗಿ, ಅಜ್ಜಿ ನಾ ಡಿಪ್ರೆಷನ್​ಗೆ ಹೋಗ್ತಿದೀನಿ ಎನ್ನುತ್ತಾಳೆ. ಎಲ್ಲಿಯೇ ಹೋದರೂ ಮನೆಯಲ್ಲಿ ಹಿರಿಯರ ಆಶೀರ್ವಾದ ತೆಗೆದುಕೊಂಡು ಹೋಗು ಎನ್ನುತ್ತಾಳೆ ಆಕೆ.

ಇದನ್ನೂ ಓದಿ : Viral Video: ಪಾಕಿಸ್ತಾನ; 103 ವರ್ಷದ ‘ಮಾಯೀ ಧಾಯೀ’ ಕೋಕ್​ ಸ್ಟುಡಿಯೋದಲ್ಲಿ ಇದನ್ನು ಹಾಡಿದ್ದು 96ರ ಹರೆಯದಲ್ಲಿ 

ಕನ್ನಡದ ಖಿನ್ನತೆಯೇ ಇಂಗ್ಲಿಷ್​ನ Depression; ಇದರರ್ಥ ​ಖಿನ್ನತೆಗೆ ಜಾರುವುದು, ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳುವುದು. ಪ್ರತಿಯೊಬ್ಬರ ಜೀವಿತಾವಧಿಯಲ್ಲಿಯೂ ಖಿನ್ನತೆ ಎನ್ನುವುದು ಒಂದಿಲ್ಲಾ ಒಂದು ಹಂತದಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ವಯಸ್ಸಿನ ಭೇದವಿಲ್ಲ. ಲಿಂಗದ ಹಂಗಿಲ್ಲ. ಕುಟುಂಬದರೇ ಆಗಲಿ, ಸ್ನೇಹಿತರೇ ಆಗಲಿ, ಸಹೋದ್ಯೋಗಿಗಳೇ ಆಗಿರಲಿ ಅಥವಾ ನಿಮ್ಮ ಒಡನಾಟದಲ್ಲಿರುವ ಯಾರೇ ಆಗಿರಲಿ ಅವರಲ್ಲಿ ಖಿನ್ನತೆಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಆ ಪರಿಸ್ಥಿತಿಯಿಂದ ಅವರನ್ನು ಹೊರತರಲು ಶ್ರಮಿಸಬೇಕು. ಇಲ್ಲವಾದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ : Viral: ಸ್ವಿಗ್ಗಿ ಇನ್​ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು; ನೆಟ್ಟಿಗರ ಒತ್ತಾಯ

ಬಾಯಿಬಿಟ್ಟು ತನಗೆ ಹೀಗಾಗುತ್ತಿದೆ ಎಂದು ಯಾರಾದರೂ ನಿಮ್ಮ ಬಳಿ ಹೇಳಿಕೊಂಡಾಗ ಅವರೊಂದಿಗೆ ತಕ್ಷಣವೇ ಸ್ಪಂದಿಸಬೇಕು. ಅವರ ಮನಸಿನ ಮಾತುಗಳನ್ನು ಕೇಳಿಸಿಕೊಳ್ಳಬೇಕು. ನಿಮ್ಮಿಂದ ಪರಿಹಾರ ಸಾಧ್ಯವಾಗದಿದ್ದರೆ ಬಲ್ಲವರ ಸಹಾವನ್ನು ತೆಗೆದುಕೊಳ್ಳಬೇಕು. ಮನುಷ್ಯರಾಗಿ ಇಷ್ಟೂ ಮಾಡದಿದ್ದರೆ ಹೇಗೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:41 pm, Wed, 26 July 23

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?