Viral Video: ಪಾಕಿಸ್ತಾನ; 103 ವರ್ಷದ ‘ಮಾಯೀ ಧಾಯೀ’ ಕೋಕ್​ ಸ್ಟುಡಿಯೋದಲ್ಲಿ ಇದನ್ನು ಹಾಡಿದ್ದು 96ರ ಹರೆಯದಲ್ಲಿ

Pakistani : ಅಮೆರಿಕದಲ್ಲಿ ಕಾರ್ಯಕ್ರಮ ನೀಡಿರುವ ಜಾನಪದ ಗಾಯಕಿ ಮಾಯೀ, 'ನಾನು ಸಾರ್ವಜನಿಕ ಕಾರ್ಯಕ್ರಮಗಳನ್ನು ಈ ಮೊದಲೇ ನೀಡಲು ಆರಂಭಿಸಿದ್ದರೆ ನನ್ನ ಮಗಳನ್ನು ಯಾರೂ ಮದುವೆಯಾಗುತ್ತಿರಲಿಲ್ಲ' ಎಂದಿದ್ದಾರೆ.

Viral Video: ಪಾಕಿಸ್ತಾನ; 103 ವರ್ಷದ 'ಮಾಯೀ ಧಾಯೀ' ಕೋಕ್​ ಸ್ಟುಡಿಯೋದಲ್ಲಿ  ಇದನ್ನು ಹಾಡಿದ್ದು 96ರ ಹರೆಯದಲ್ಲಿ
Follow us
ಶ್ರೀದೇವಿ ಕಳಸದ
|

Updated on:Jul 26, 2023 | 11:43 AM

Mai Dhai : ‘ನಾನು ತಡವಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದೆ. ಈ ಮೊದಲೇ ಕಾರ್ಯಕ್ರಮಗಳನ್ನು ಕೊಡಲು ಆರಂಭಿಸಿದ್ದರೆ ನನ್ನ ಮಗಳನ್ನು ಯಾರೂ ಮದುವೆಯಾಗುತ್ತಿರಲಿಲ್ಲ’ ಎನ್ನುತ್ತಾರೆ 103 ವರ್ಷದ ಪಾಕಿಸ್ತಾನೀ ಜಾನಪದ ಗಾಯಕಿ ಮಾಯೀ ಧಾಯೀ. ಇವರು ವಾಸವಾಗಿರುವುದು ಸಿಂಧ್ ಪ್ರಾಂತ್ಯದ ಥಾಪಾರ್ಕರ್​ನಲ್ಲಿ (Tharparkar). ಹಾರ್ಮೋನಿಯಂ ವಾದಕ ಜಮಾಲ್​ ಸಹಾಬ್​ ಮತ್ತು ಢೋಲ್​ವಾದಕ ಮುಹಮ್ಮದ್​ ಫಕೀರ್​ ಎನ್ನುವವರೊಂದಿಗೆ ಮಾಯೀ ಧಾಯೀ ಎಂಬ ಜಾನಪದ ಬ್ಯಾಂಡ್​ ಅನ್ನು ಕಟ್ಟಿಕೊಂಡು ಸಾರ್ವಜನಿಕ ಕಾರ್ಯಕ್ರಮಗಳನ್ನು ಕೊಡಲಾರಂಭಿಸಿದರು. ಇದೀಗ ಕೋಕ್​ ಸ್ಟುಡಿಯೋದಲ್ಲಿ ಹಾಡಿರುವ ಹಳೆಯ ಹಾಡೊಂದು ವೈರಲ್ ಆಗಿದೆ. ಈ ಹಾಡನ್ನು ಹಾಡಿದಾಗ ಇವರ ವಯಸ್ಸು 96!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Akul (@wtfakul)

‘ನಮ್ಮ ಬುಡಕಟ್ಟು ಜನರಲ್ಲಿ ಅನೇಕ ಉತ್ತಮ ಗಾಯಕಿಯರಿದ್ದಾರೆ ಆದರೆ ಸಾಮಾಜಿಕ ಒತ್ತಡಗಳ ಕಾರಣದಿಂದಾಗಿ ಅವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡಲಾರರು’ ಎನ್ನುವ ಮಾಯೀ 2015ರಲ್ಲಿ ಅಮೆರಿಕದಲ್ಲಿ ಪ್ರದರ್ಶನ ನೀಡಿ  ಮನೆಮಾತಾದರು, ಅಲ್ಲಿಯತನಕ ಎಲೆಮರೆಯಲ್ಲಿ ಕುಳಿತು ಹಾಡುವ ಹಕ್ಕಿಯಂತಿದ್ದರು. ಅಂದಹಾಗೆ ಆಕೆ ಹಾಡಿದ ಸಾಹಿತ್ಯದ ಬಗ್ಗೆ ನೆಟ್ಟಿಗರಲ್ಲಿ ಬಹಳಷ್ಟು ಕುತೂಹಲ ಹುಟ್ಟಿದೆ. ಶ್ರೀಮಂತ ಮತ್ತು ರಾಜರುಗಳ ಗಾಂಜಾ, ಅಫೀಮು ಸಾರಾಯಿ ಖಯಾಲಿಯನ್ನು ಅದು ವರ್ಣಿಸುತ್ತದೆ.

ಅರೆ ಗಾಂಜು ರೆ ಪಿಯೆ ಗಜ ಪತೀ

ಭಾಂಗ ಪಿಯೇ ಭೂಪಾಲ

ಅಮಲ ಆರೂಗೆ ಛತ್ರಪತಿ

ದಾರೂರಿ ಪಿಯೇ ದಾತಾರ

ಇದನ್ನೂ ಓದಿ : Viral: ಸ್ವಿಗ್ಗಿ ಇನ್​ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು; ನೆಟ್ಟಿಗರ ಒತ್ತಾಯ

ಜು. 14ರಂದು ಅಕುಲ್​ ಎನ್ನುವವರು ಇದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಇದು ವೈರಲ್ ಆಗುತ್ತಲೇ ಇದೆ. ಸುಮಾರು 10 ಮಿಲಿಯನ್ ಜನರು ಮಾಯಿಯ ಹಾಡು ಕೇಳಿದ್ದಾರೆ. 3.5 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸಹಸ್ರಾರು ಜನರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಈಕೆ ರಾಜಸ್ತಾನಿ ಹಾಡನ್ನು ಹಾಡುತ್ತಿದ್ದಾಳೆ ಎಂದಿದ್ದಾರೆ. ಹಾಡಿನ ಸಾಹಿತ್ಯಕ್ಕೆ ರಾಜಸ್ತಾನಿ ಅರ್ಥವನ್ನೂ ಹುಡುಕಿದ್ದಾರೆ. ಆದರೆ ಈಕೆ ಪಾಕಿಸ್ತಾನಿ ಮೂಲದ ಗಾಯಕಿಯಾಗಿದ್ದು ಗಾಯಕೀ ಶೈಲಿಯಲ್ಲಿ ಮತ್ತು ಸಾಹಿತ್ಯದಲ್ಲಿ ರಾಜಸ್ತಾನಿ ಸಂಗೀತದ ಪರಿಮಳವಿದೆ.

ವಯಸ್ಸು ಎನ್ನುವುದು ಮನಸ್ಸಿನಲ್ಲಿ ತುಂಬಿಕೊಂಡ ಸಂಖ್ಯೆ ಅಷ್ಟೇ ತಾನೆ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ 

Published On - 11:37 am, Wed, 26 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ