Viral Video: ಚಿಂಪಾಂಜಿಯು ಈತನ ಬೊಗಸೆಯಿಂದ ನೀರು ಕುಡಿದದ್ದಲ್ಲದೆ ತೊಳೆಯುವುದು ಬೇರೆ!
Animals : ಮುಂದಿನ ದಿನಗಳಲ್ಲಿ ಮನುಷ್ಯರು ಕಾಡಿಗೆ ಹೋಗಿ, ಪ್ರಾಣಿಗಳು ನಾಡಿಗೆ ಬಂದು ನಾಗರಿಕತೆ ರೂಢಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಈ ಆಪ್ತವಾದ ವಿಡಿಯೋ ಲಕ್ಷಾಂತರ ಜನರ ಮನಸ್ಸನ್ನು ಹಿಡಿದಿಡುತ್ತಿದೆ.
Chimpanzee : ಪ್ರಾಣಿಸಂಗ್ರಹಾಲಯದಲ್ಲಿ ಚಿಂಪಾಂಜಿಯೊಂದನ್ನು ನೋಡಲು ಬಂದ ಮಹಿಳೆಗೆ, ಆಕೆಯ ಮಗುವನ್ನು ಹತ್ತಿರ ತಂದು ತೋರಿಸುವಂತೆ ಸನ್ನೆ ಮಾಡುತ್ತದೆ. ಮಗುವನ್ನು ಹತ್ತಿರದಿಂದ ತೋರಿಸಿದಾಗ, ಗಾಜಿನಗೋಡೆಯಿಂದಲೇ ಅದರ ಗಲ್ಲಕ್ಕೆ ಅದು ಮುತ್ತಿಡಲು (Kiss) ಪ್ರಯತ್ನಿಸುತ್ತದೆ. ಈ ಆಪ್ತವಾದ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದನ್ನು ನೋಡಿದ್ದಿರಿ. ಇದೀಗ ಈ ವಿಡಿಯೋದಲ್ಲಿರುವ ಚಿಂಪಾಂಜಿಯು ತನ್ನ ಬಳಿ ಬಂದ ಮನುಷ್ಯನೊಂದಿಗೆ ನಡೆದುಕೊಂಡ ರೀತಿ ಎಷ್ಟು ಆಪ್ತವಾಗಿದೆ ನೋಡಿ.
Chimpanzees have always fascinated us with their striking resemblance to humans.
ಇದನ್ನೂ ಓದಿThis clip by photographer JC Pieri shows an impressive interaction with one met in Cameroon
[? JC Pieri: https://t.co/ZsASouY5RB]pic.twitter.com/4bCz4Z4LWe
— Massimo (@Rainmaker1973) July 25, 2023
ಈ ಚಿಂಪಾಂಜಿಯ ಬಳಿ ಹೋಗಿ ಈತ ಕುಳಿತುಕೊಳ್ಳುತ್ತಾನೆ. ಈತನ ಎರಡೂ ಕೈಗಳನ್ನು ಹಿಡಿದು ನೀರಿನೊಳಗೆ ಮುಳುಗಿಸುತ್ತದೆ. ನಂತರ ಈತನ ಬೊಗಸೆಯೊಳಗಿನ ನೀರನ್ನು ಕುಡಿಯುತ್ತದೆ. ನೀರು ಸಾಕೆನ್ನಿಸುತ್ತಿದ್ದಂತೆ ಈತನ ಕೈಗಳನ್ನು ಅದೇ ನೀರಿನಿಂದ ತೊಳೆಯುತ್ತದೆ. ಚಿಂಪಾಂಜಿಯ ಈ ವಿಶೇಷ ವರ್ತನೆ ನೆಟ್ಟಿಗರ ಗಮನ ಸೆಳೆದಿದೆ. ಅದು ಯಾಕೆ ತನ್ನ ಬೊಗಸೆಯಿಂದ ನೀರು ಕುಡಿಯುವುದಿಲ್ಲ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಕುಡಿದ ಮೇಲೆ ಅದು ಕೈಯನ್ನು ತೊಳೆಯುತ್ತದೆಯಲ್ಲ ಎಂದು ಅಚ್ಚರಿಯನ್ನೂ ಉಂಟು ಮಾಡಿದೆ.
ಇದನ್ನೂ ಓದಿ : Viral Video: ‘ಅಪ್ಪಾ ನಾ ಡಿಪ್ರೆಷನ್ಗೆ ಹೋಗ್ತಿದೀನಿ’ ಮನೆಬಿಟ್ಟು ಎಲ್ಲಿಯೂ ಹೋಗಕೂಡದು!
ಛಾಯಾಗ್ರಾಹಕ ಜೆ ಸಿ ಪಿಯರಿ (JC Pieri) ಎನ್ನುವವರು ಕ್ಯಾಮರೂನ್ನಲ್ಲಿ ಅಪರೂಪದ ವಿಡಿಯೋ ಅನ್ನು ಸೆರೆಹಿಡಿದಿದ್ದಾರೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 1,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 160 ಜನರು ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ನೋಡಿ : Viral Video: ಪಾಕಿಸ್ತಾನ; 103 ವರ್ಷದ ‘ಮಾಯೀ ಧಾಯೀ’ ಕೋಕ್ ಸ್ಟುಡಿಯೋದಲ್ಲಿ ಇದನ್ನು ಹಾಡಿದ್ದು 96ರ ಹರೆಯದಲ್ಲಿ
ನಾವು ಯಾರು? ನಮ್ಮ ಮೂಲ ಏನು? ಜಗತ್ತಿನೊಂದಿಗೆ ನಮ್ಮ ಸ್ಪಂದನೆ ಹೇಗಿರಬೇಕು ಎನ್ನುವುದನ್ನು ನಾವು ಆಗಾಗ ನೆನಪಿಸಿಕೊಳ್ಳಲು ಸಹಾಯ ಮಾಡುತ್ತವೆ ಇಂಥ ವಿಡಿಯೋಗಳು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ