Viral: ‘ಮಾಂಸಾಹಾರ ಸಸ್ಯಾಹಾರಕ್ಕೆ ಒಂದೇ ಚಮಚ ಬಳಸಿದ್ದರೆ!’ ಸುಧಾ ಮೂರ್ತಿಯ ಮೇಲೆ ಮತ್ತೆ ಮುಗಿಬಿದ್ದ ನೆಟ್ಟಿಗರು

Food : ಕೆಲಸದ ವಿಷಯವಾಗಿ ನಾನು ಸಾಹಸಿ, ಆದರೆ ಆಹಾರಕ್ಕೆ ಸಂಬಂಧಿಸಿ ನನ್ನದೇ ಆಯ್ಕೆಗಳಿವೆ ಎಂದಿದ್ದಾರೆ ಸರಳಮ್ಮ. ಆದರೆ ಬೇರೆಯವರು ಉಪಯೋಗಿಸಿದ ಹೋಟೆಲ್​ ಕೊಠಡಿಗಳ ಬಗ್ಗೆ ನಿಮ್ಮ ನಿಲುವು ಏನೆಂದು ಕೇಳುತ್ತಿದ್ದಾರೆ ನೆಟ್ಟಿಗರು.

Viral: 'ಮಾಂಸಾಹಾರ ಸಸ್ಯಾಹಾರಕ್ಕೆ ಒಂದೇ ಚಮಚ ಬಳಸಿದ್ದರೆ!' ಸುಧಾ ಮೂರ್ತಿಯ ಮೇಲೆ ಮತ್ತೆ ಮುಗಿಬಿದ್ದ ನೆಟ್ಟಿಗರು
'ಖಾನೇ ಮೇ ಕ್ಯಾ ಹೈ' ಯೂಟ್ಯೂಬ್​ ಸರಣಿಯಲ್ಲಿ ಸುಧಾ ಮೂರ್ತಿ
Follow us
|

Updated on:Jul 27, 2023 | 3:06 PM

Sudha Murthy : ಕುನಾಲ್​ ವಿಜಯಕರ (Kunal Vijaykar) ಸಾರಥ್ಯದ ‘ಖಾನೇ ಮೇ ಕೌನ್​ ಹೈ?’ (Khane Me Koun Hai) ಯೂಟ್ಯೂಬ್​ ಸೀರೀಸ್​ನಲ್ಲಿ ಇತ್ತೀಚೆಗೆ ಇನ್​​ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ (Infosys Foundation), ಕೊಡುಗೈ ದಾನಿ, ಲೇಖಕಿ​ ಸುಧಾ ಮೂರ್ತಿ ಪಾಲ್ಗೊಂಡಿದ್ದರು. ಆಹಾರದ ಬಗ್ಗೆ ಅನೇಕ ವಿಷಯಗಳನ್ನು ಚರ್ಚಿಸುತ್ತ, ‘ನಾನು ಶುದ್ಧ ಸಸ್ಯಾಹಾರಿ, ಬೆಳ್ಳುಳ್ಳಿ ಮತ್ತು ಮೊಟ್ಟೆಯನ್ನು ಕೂಡ ತಿನ್ನುವುದಿಲ್ಲ. ಏಕೆಂದರೆ ಮಾಂಸಾಹಾರ ಮತ್ತು ಸಸ್ಯಾಹಾರಕ್ಕೆ ಒಂದೇ ಚಮಚವನ್ನು ಬಳಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿದೇಶಗಳಿಗೆ ಹೋಗುವಾಗ ಆಹಾರ ಪೊಟ್ಟಣಗಳನ್ನು ತೆಗೆದುಕೊಂಡು ಹೋಗುತ್ತೇನೆ. ಇಲ್ಲವೆ ಸಸ್ಯಾಹಾರಿ ರೆಸ್ಟೋರೆಂಟ್​​​ಗಳಿಗೆ ಹೋಗುತ್ತೇನೆ. ಅದೂ ಸಾಧ್ಯವಾಗದಿದ್ದರೆ ನಾನೇ ಅಡುಗೆ ಮಾಡಿ ಉಣ್ಣುತ್ತೇನೆ’ ಎಂದಿದ್ದಾರೆ. ಈ ಮೂಲಕ ‘ಸರಳಮ್ಮ’ ನೆಟ್ಟಿಗರಿಗೆ ಮತ್ತೊಮ್ಮೆ ಆಹಾರವಾಗಿದ್ದಾರೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೆಲವರು ಇವರ ಆಹಾರ ಕ್ರಮವನ್ನು ಬೆಂಬಲಿಸಿದ್ದಾರೆ. ವ್ಯಕ್ತಿಯ ಆಹಾರ ಕ್ರಮ, ಜಾತಿ ಮತ್ತು ವೈಯಕ್ತಿಕ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ವ್ಯಕ್ತಿಯನ್ನು ಗೌರವದಿಂದ ಕಾಣುವ ಬಗ್ಗೆ ಯೋಚಿಸಬೇಕು ಎಂದಿದ್ದಾರೆ ಒಬ್ಬರು. ನನ್ನ ಹೆಂಡತಿ, ತಾಯಿ, ದೊಡ್ಡಮ್ಮ ಕೂಡ ಶುದ್ಧ ಸಸ್ಯಾಹಾರಿಗಳು. ವಿದೇಶ ಪ್ರವಾಸಕ್ಕೆ ಅವರು ಮನೆಯಿಂದಲೇ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ನಾನು ಕೂಡ ಮನೆಯಲ್ಲಿ ಮಾಡಿದ ಆಹಾರವನ್ನೇ ತಿನ್ನಲು ಇಚ್ಚಿಸುತ್ತೇನೆ ಎಂದಿದ್ದಾರೆ ಇನ್ನೊಬ್ಬರು.

ಸುಧಾ ಮೂರ್ತಿಯ ‘ಸರಳತನ’ವು ಮಾರಾಟದ ಸರಕು ಎಂದು ಅನೇಕರು ವ್ಯಂಗ್ಯೋಕ್ತಿಯಾಡಿದ್ದಾರೆ. ನಿಜಕ್ಕೂ ನಿಮ್ಮ ಸರಳತನ ಹಂತಹಂತವಾಗಿ ಬೇಸರ ತರಿಸುತ್ತಿದೆ ಎಂದಿದ್ದಾರೆ ಒಬ್ಬರು. ಆಹಾರವನ್ನು ಮನೆಯಿಂದ ತೆಗೆದುಕೊಂಡು ಹೋಗುತ್ತೀರಿ ಸರಿ, ಆದರೆ ಬೇರೆಯವರು ವಾಸವಾಗಿದ್ದ ಹೋಟೆಲ್​ ಕೊಠಡಿಗಳ ವಿಷಯವಾಗಿ ಏನು ಹೇಳುತ್ತೀರಿ? ಎಂದು ಕೇಳಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಚಿಂಪಾಂಜಿಯು ಈತನ ಬೊಗಸೆಯಿಂದ ನೀರು ಕುಡಿದದ್ದಲ್ಲದೆ ತೊಳೆಯುವುದು ಬೇರೆ!

‘ಅರವತ್ತು ವರ್ಷಗಳ ಹಿಂದೆ ಹೊರಗಿನ ತಿಂಡಿತಿನಿಸನ್ನು ತಿನ್ನದ ನನ್ನ ಅಜ್ಜಿಯನ್ನು ನಾನು ಯಾವಾಗಲೂ ಛೇಡಿಸುತ್ತಿದ್ದೆ. ಆದರೆ ನಾನೀಗ ಅವರಂತೆಯೇ ಆಗಿಬಿಟ್ಟಿದ್ದೇನೆ. ಹಾಗೆಂದು ನಾನೇನು ಪಾಕ ಪರಿಣತಳಲ್ಲ. ಆದರೆ ತಕ್ಕಮಟ್ಟಿಗೆ ಅಡುಗೆ ಮಾಡುವುದು ಗೊತ್ತು. ವಿದೇಶಕ್ಕೆ ಪ್ರಯಾಣಿಸುವಾಗ ನನ್ನ ಲಗೇಜಿನಲ್ಲಿ ಸಣ್ಣ ಕುಕ್ಕರ್​ ಕೂಡ ಇರುತ್ತದೆ’ ಎಂದು ಸುಧಾ ಪ್ರಸ್ತುತ ಯೂಟ್ಯೂಬ್​ ಸರಣಿಯ ಮೂಲಕ ಬಹಿರಂಗಪಡಿಸಿದ್ದು ನೆಟ್ಟಿಗರ ಟೀಕಾತನಕ್ಕೆ ಮತ್ತಷ್ಟು ವಗ್ಗರಣೆ ಸಿಡಿಸಿದಂತಾಗಿದೆ!

ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:46 pm, Wed, 26 July 23