Viral Video: ಉತ್ತರ ಪ್ರದೇಶ; ನಾಯಿ ಕಚ್ಚಿಸಿಕೊಂಡ ಹೆಣ್ಣುಮಗು 50 ಜನರನ್ನು ಕಚ್ಚಿ ಸಾವನ್ನಪ್ಪಿದೆ

Rabies : ಈ ಮಗುವಿನಿಂದ ಕಚ್ಚಿಸಿಕೊಂಡ ಎರಡೂ ಹಳ್ಳಿಯ ಜನರು ಆ್ಯಂಟಿ ರೇಬೀಸ್​ ಇಂಜೆಕ್ಷನ್​ಗಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಮನುಷ್ಯರನ್ನು ಮನುಷ್ಯರು ಕಚ್ಚಿದರೆ ರೇಬೀಸ್​ ಹರಡುವುದಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Viral Video: ಉತ್ತರ ಪ್ರದೇಶ; ನಾಯಿ ಕಚ್ಚಿಸಿಕೊಂಡ ಹೆಣ್ಣುಮಗು 50 ಜನರನ್ನು ಕಚ್ಚಿ ಸಾವನ್ನಪ್ಪಿದೆ
ಆ್ಯಂಟಿ ರೇಬೀಸ್​ ಇಂಜೆಕ್ಷನ್​ ಹಾಕಿಸಿಕೊಂಡ ಗ್ರಾಮಸ್ಥರು
Follow us
|

Updated on:Jul 26, 2023 | 2:39 PM

Uttar Pradesh : ಉತ್ತರ ಪ್ರದೇಶದ ಜಲೌನ್ (Jalaun)​ ಜಿಲ್ಲೆಯ ಹಳ್ಳಿಯೊಂದರಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಎರಡೂವರೆ ವರ್ಷದ ಹೆಣ್ಣುಮಗುವಿಗೆ ನಾಯಿಯೊಂದು ಕಚ್ಚಿತ್ತು. ನಂತರ ಆ ಮಗು ತನ್ನ ಸಂಬಂಧಿಕರಿಗೆ ಮತ್ತು ನೆರೆಹೊರೆಯವರಿಗೆ ಕಚ್ಚುತ್ತ ಅಸ್ವಸ್ಥವಾಗುತ್ತ ಹೋಯಿತು. ಕೊನೆಗೊಂದು ದಿನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತು. ಈ ಮಗುವಿನ ಸಾವಿನ ನಂತರ ಗ್ರಾಮಸ್ಥರು ಭಯಗೊಂಡು ಆ್ಯಂಟಿರೇಬಿಸ್​ ಇಂಜೆಕ್ಷನ್ (Anti Rabies Vaccine)​ ಪಡೆಯಲು ಜಿಲ್ಲಾಸ್ಪತ್ರೆಗೆ ಧಾವಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಚಿಂಪಾಂಜಿಯು ಈತನ ಬೊಗಸೆಯಿಂದ ನೀರು ಕುಡಿದದ್ದಲ್ಲದೆ ತೊಳೆಯುವುದು ಬೇರೆ!

ನಾಯಿಯೊಂದು ಕಚ್ಚಿದ ಪರಿಣಾಮ ಹೆಣ್ಣುಮಗು ದಿನದಿಂದ ದಿನಕ್ಕೆ ಅಸ್ವಸ್ಥವಾಗಿದೆ. ಮಗುವನ್ನು ಉಳಿಸಿಕೊಳ್ಳಲು ಕುಟುಂಬದವರು ಅದನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಝಾನ್ಸೀ ವೈದ್ಯಕೀಯ ಕಾಲೇಜಿಗೆ ದಾಖಲಿಸಲು ತಿಳಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ಮಗು ಮೃತಪಟ್ಟಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ‘ಅಪ್ಪಾ ನಾ ಡಿಪ್ರೆಷನ್​ಗೆ ಹೋಗ್ತಿದೀನಿ’ ಮನೆಬಿಟ್ಟು ಎಲ್ಲಿಯೂ ಹೋಗಕೂಡದು!

ಈ ಮಗು ಸಾಯುವ ಮೊದಲು ತನ್ನ ತಾಯಿಗೆ, ಕುಟುಂಬದವರಿಗೆ, ಸಂಬಂಧಿಕರಿಗೆ ಮತ್ತು ನೆರೆಹೊರೆಯವರಿಗೆ ಕಚ್ಚಿದೆ. ಪರಿಣಾಮವಾಗಿ ಗ್ರಾಮಸ್ಥರೆಲ್ಲರೂ ಭಯಬೀತರಾಗಿ ಆ್ಯಂಟೀ ರೇಬಿಸ್​ ಇಂಜೆಕ್ಷನ್​ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಈ ಪ್ರಕರಣವು ರೆಂಧರ್​ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿರುವ ಕ್ಯೋಲಾರಿ ಗ್ರಾಮಕ್ಕೆ ಸಂಬಂಧಿಸಿದ್ದಾಗಿದ್ದು, ಇಲ್ಲಿಯ ಮಂಗಲ್​ ಕುಶ್ವಾಹ್​ ಎನ್ನುವವರ ಮಗಳು ಕಾವ್ಯಾ ಕುಶ್ವಾಹ್.​ ಕಳೆದ ತಿಂಗಳು ತನ್ನ ತಾಯಿಯ ತವರು ಹಿಡೋಖರ್​ಗೆ ಈ ಮಗು ಹೋಗಿತ್ತು. ಅಲ್ಲಿ ಆಟವಾಡುತ್ತಿದ್ದಾಗ ಬೀದಿನಾಯಿಯೊಂದು ಈ ಮಗುವನ್ನು ಕಚ್ಚಿತ್ತು. ಆನಂತರ ತನ್ನ ತಾಯಿಯೊಂದಿಗೆ ಹಳ್ಳಿಗೆ ವಾಪಾಸಾಗಿತ್ತು.

ಇದನ್ನೂ ಓದಿ : Viral Video: ಪಾಕಿಸ್ತಾನ; 103 ವರ್ಷದ ‘ಮಾಯೀ ಧಾಯೀ’ ಕೋಕ್​ ಸ್ಟುಡಿಯೋದಲ್ಲಿ ಇದನ್ನು ಹಾಡಿದ್ದು 96ರ ಹರೆಯದಲ್ಲಿ

ಈ ಅವಘಡ ನಡೆದ ಎರಡನೇ ದಿನದಿಂದ ಮಗು ನಾಯಿಯಂತೆಯೇ ವರ್ತಿಸುವುದು ಮತ್ತು ಆಟವಾಡುವ ವೇಳೆ ಜನರಿಗೆ ಕಚ್ಚುವುದನ್ನು ಶುರುಮಾಡಿದ್ದಾಳೆ. ಈತನಕ 50ಕ್ಕೂ ಹೆಚ್ಚು ಜನರನ್ನು ಈಕೆ ಕಚ್ಚಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಜ್ಜಿಯ ಊರಿನಲ್ಲಿ ಮತ್ತು ಈ ಮಗುವಿನ ಊರಿನಲ್ಲಿ ಈಕೆಯಿಂದ ಕಚ್ಚಿಸಿಕೊಂಡ ಜನರು ಇಂಜೆಕ್ಷನ್ ಪಡೆಯಲು  ಪಡೆಯಲು ಆಸ್ಪತ್ರೆಗೆ ಹೋಗುತ್ತಿದ್ದಾರೆ.

ಇದನ್ನೂ ಓದಿ : Viral: ಸ್ವಿಗ್ಗಿ ಇನ್​ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು; ನೆಟ್ಟಿಗರ ಒತ್ತಾಯ

ಮನುಷ್ಯರು ಮನುಷ್ಯರನ್ನು ಕಚ್ಚಿದರೆ ರೇಬೀಸ್​ ಹರಡುವುದಿಲ್ಲ : ಜಲೌನ್‌ನ ಮುಖ್ಯ ವೈದ್ಯಾಧಿಕಾರಿ ಡಾ. ಎನ್.ಡಿ. ಶರ್ಮಾ, ‘ಈ ಪ್ರಕರಣವು ನನ್ನ ಗಮನಕ್ಕೆ ಬಂದಿದೆ. ಆ್ಯಂಟಿ ರೇಬಿಸ್ ಇಂಜೆಕ್ಷನ್​ ಪಡೆಯಲು ಜನರು ತಂಡೋಪತಂಡವಾಗಿ ಆಸ್ಪತ್ರೆಗೆ ಧಾವಿಸುತ್ತಲೇ ಇದ್ದಾರೆ. ನಾಯಿಯಿಂದ ಕಚ್ಚಿಸಿಕೊಂಡ ಹೆಣ್ಣುಮಗು ಮನುಷ್ಯರನ್ನು ಕಚ್ಚಿದರೆ ರೇಬೀಸ್​ ಸೋಂಕು ಹರಡುವುದಿಲ್ಲ. ಆದರೆ ನಾಯಿ, ಕೋತಿ ಅಥವಾ ಇನ್ನಿತರೇ ಕಾಡುಪ್ರಾಣಿಗಳಿಂದ ಮನುಷ್ಯರು ಕಚ್ಚಿಸಿಕೊಂಡಾಗ ರೇಬೀಸ್ ಹರಡುತ್ತದೆ. ಆದರೂ ಜನರು ತಮ್ಮ ಸುರಕ್ಷತೆಗಾಗಿ ಇಂಜೆಕ್ಷನ್​ ಪಡೆಯುತ್ತಿದ್ದಾರೆ’ ಎಂದಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:36 pm, Wed, 26 July 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ