AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜೈಲರ್​ನ ‘ಕಾವಾಲಾ’ಗೆ ಮಿಸ್ ಬ್ಯೂಟಿಫುಲ್​ ಸ್ಕಿನ್​ ಪ್ರಿಯಾಂಕಾ ಶೆಣೈ ಭರ್ಜರಿ ನೃತ್ಯ

Kaavaala : ವಾಹ್​! ಇದು ಎಲ್ಲಾ ವರ್ಷನ್​ಗಳಿಗಿಂತ ಅತ್ಯದ್ಭುತವಾಗಿದೆ, ನಿಮ್ಮ ನೃತ್ಯ ಬಹಳ ಚೆನ್ನಾಗಿ ಸಿಂಕ್​ ಆಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಯೂ ಟ್ಯೂಬ್​ನಲ್ಲಿ 74 ಮಿಲಿಯನ್​ ಜನರು ಇದನ್ನು ನೋಡಿದ್ದಾರೆಂದರೆ! ನೋಡಿ ನೀವೂ... ​

Viral Video: ಜೈಲರ್​ನ 'ಕಾವಾಲಾ'ಗೆ ಮಿಸ್ ಬ್ಯೂಟಿಫುಲ್​ ಸ್ಕಿನ್​ ಪ್ರಿಯಾಂಕಾ ಶೆಣೈ ಭರ್ಜರಿ ನೃತ್ಯ
ಪ್ರಿಯಾಂಕಾ ಶೆಣೈ ಮೆನನ್
ಶ್ರೀದೇವಿ ಕಳಸದ
|

Updated on: Jul 27, 2023 | 11:37 AM

Share

Jailer : ಜು. 6ರಂದು ಬಿಡುಗಡೆಯಾದ ರಜನಿಕಾಂತ್ ಮತ್ತು ತಮನ್ನಾ ಭಾಟಿಯಾ (Rajanikanth, Tamanna Bhatia) ಅಭಿನಯದ ಜೈಲರ್ ಸಿನೆಮಾದ ಕಾವಾಲಾ ಹಾಡಿಗೆ ಪ್ರಿಯಾಂಕಾ ಶೆಣೈ ಮೆನನ್ (Priyanka Shenoy Menon- Miss India Kerala 2017) ಆಕರ್ಷಕವಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಅರುಣರಾಜ್​ ಕಾಮರಾಜ್​ ಬರೆದಿದ್ದು, ಅನಿರುದ್ಧ ರವಿಚಂದ್ರನ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿಲ್ಪಾ ರಾವ್​ ಇದನ್ನು ಹಾಡಿದ್ದಾರೆ. ಇದೀಗ ಪ್ರಿಯಾಂಕಾರ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಯೂಟ್ಯೂಬ್​ನಲ್ಲಿ 74 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ. ಲಕ್ಷಾಂತರ ಜನರು ಪ್ರತಿಕ್ರಿಯಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Priyanka Shenoy Menon (@parihoonnmain)

ಮಿಸ್​ ಕೇರಳ, ಮಿಸ್​ ಬ್ಯೂಟಿಫುಲ್​ ಸ್ಕಿನ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ರಿಯಾಂಕಾ, ಕಾವಾಲಾ ಹಾಡಿನಲ್ಲಿ ತಮನ್ನಾ ಧರಿಸಿದಂಥ ಉಡುಪನ್ನೇ ಧರಿಸಿ ನೃತ್ಯ ಮಾಡಿದ್ದಾರೆ. ಟಿವಿ ಪರದೆ ಮೇಲಿರುವ ತಮನ್ನಾಳ ನೃತ್ಯ,  ಭಾವಾಭಿವ್ಯಕ್ತಿಯನ್ನು ಪ್ರಿಯಾಂಕಾ ಅತ್ಯಂತ ನೈಪುಣ್ಯತೆಯಿಂದ ಸಾಮ್ಯಗೊಳಿಸಿದ್ದಾರೆ ಎಂದಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ಪಾಕಿಸ್ತಾನ; ಇವರು ತಮ್ಮ ಹಳ್ಳಿಯನ್ನು ತಲುಪಲು ಈ ಅಪಾಯಕಾರಿ ಸೇತುವೆಯ ಮೇಲೆ ನಡೆಯಲೇಬೇಕು

ಒಂದು ವಾರದ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಈ ರೀಲ್​ ಹಂಚಿಕೊಂಡಾಗಿನಿಂದ 47 ಮಿಲಿಯನ್​ಗಿಂತಲೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. 2 ಮಿಲಿಯನ್​ಗಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಇತ್ತೀಚೆಗೆ ನೋಡಿದ ಅತ್ಯಂತ ಉತ್ತಮವಾದ ವರ್ಷನ್​ ಇದು ಎಂದಿದ್ದಾರೆ ಅನೇಕರು. ಸಿಂಕ್​! ಬಹಳ ಅದ್ಭುತವಾಗಿದೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಕುರುಡುನಾಯಿಯೂ ವಾತ್ಸಲ್ಯಮಯೀ ಬೆಕ್ಕಿನ ಅಂತಃಕರಣ ಪಾಠವೂ

ನೀವು ಇಂಥ ಮತ್ತಷ್ಟು ಸಿನೆಮಾ ಹಾಡುಗಳಿಗೆ ಡ್ಯಾನ್ಸ್ ಮಾಡಿ ಎಂದು ಹುರಿದುಂಬಿಸಿದ್ದಾರೆ ನೆಟ್ಟಗರು. ಆದರೆ ಕೆಲವರು ಈ ಹಾಡನ್ನು ಮತ್ತು ಈ ನೃತ್ಯವನ್ನು ನಾನು ಇಷ್ಟಪಡುವುದಿಲ್ಲ ಎಂದು ನೇರವಾಗಿ ಪ್ರತಿಕ್ರಿಯಿಸಿದ್ದಾರೆ. ಇಂಥದೊಂದು ಪಡೆಯೇ ಈ ಪೋಸ್ಟ್​ನಡಿ ಬೀಡುಬಿಟ್ಟಿದೆ. ಆದರೆ ಪ್ರಿಯಾಂಕಾ ಅವರ ಬೆಂಬಲಿಗರು, ಖಂಡಿತ ನೋಡಬೇಡಿ, ಕಣ್ಣು ಮುಚ್ಚಿಕೊಳ್ಳಿ ಎಂದು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು